ಕರಾವಳಿ ನಟಿ ಅನುಷ್ಕಾ ಶೆಟ್ಟಿ (Anushka Shetty) ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದೂ ಪ್ರಭಾಸ್ ಬ್ಯಾನರ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಹೀಗಾಗಿ ಕುತೂಹಲ ಹೆಚ್ಚಾಗಿದೆ. ಯಾವ ಪಾತ್ರವನ್ನು ಮಾಡಲಿದ್ದಾರೆ ಸ್ವೀಟಿ? ಓಡಿಸ್ಸಾದಲ್ಲಿ ಅದ್ಯಾಕೆ ಹಾಗೆ ಓಡಿ ಹೋದರು? ಮತ್ತೆ ಕಮ್‌ಬ್ಯಾಕ್ ಆಗುತ್ತಾರಾ ಈ ಸಿನಿಮಾದಿಂದ? ಇಲ್ಲಿದೆ ಮಾಹಿತಿ. ಇದನ್ನೂ ಓದಿ:ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಸನ್ನಿ ಲಿಯೋನ್ ಫೋಟೋ!
ಕೆಲವು ದಿನಗಳ ಹಿಂದೆ ಅನುಷ್ಕಾ ಶೆಟ್ಟಿ ಓಡಿಸ್ಸಾದಲ್ಲಿ ಕಾಣಿಸಿಕೊಂಡಿದ್ದರು. ಹಲವಾರು ಜನರು ಇವರನ್ನು ಬೆನ್ನು ಬಿದ್ದಿದ್ದರು ತಪ್ಪಿಸಿಕೊಂಡಿದ್ದರು. ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರದ ನಂತರ ಈಗ ಮತ್ತೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ (Prabhas) ಹೊಸ ಸಿನಿಮಾಗೆ ಅನುಷ್ಕಾ ನಾಯಕಿ ಎನ್ನಲಾಗಿತ್ತು. ಆದರೆ ಅಸಲಿ ಕಥೆಯೇ ಬೇರೆ. ಪ್ರಭಾಸ್ ಬ್ಯಾನರ್‌ನ ಹೊಸ ಪ್ರಾಜೆಕ್ಟ್‌ನಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ‘ಶೀಲವತಿ’ (Seelavathi) ಟೈಟಲ್ ಫಿಕ್ಸ್ ಮಾಡಲಾಗಿದೆ.
ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅವರದ್ದು ವೇಶ್ಯೆ ಪಾತ್ರ. ಹಾಗಂತ ಮೂಲ ಹೇಳುತ್ತಿವೆ. ಇದು ನಿಜವಾ ಸುಳ್ಳಾ ಕಾದುನೋಡಬೇಕಿದೆ. ‘ಸೈಜ್ ಜೀರೋ’ (Size Zero) ಇದು ಅನುಷ್ಕಾ ನಟಿಸಿದ ಸಿನಿಮಾ. ಇದಕ್ಕಾಗಿಯೇ ಅವರು ದೇಹದ ತೂಕ ಹೆಚ್ಚಿಸಿಕೊಂಡಿದ್ದರು. ಆಮೇಲೆ ಅದರಿಂದ ಹೊರ ಬರಲು ಒದ್ದಾಡಿದರು. ಈ ಕಾಣಕ್ಕಾಗಿಯೇ ಬೆನ್ನು ನೋವಿನ ಸಮಸ್ಯೆಯಿಂದ ಒದ್ದಾಡಿದ್ದರು. ಆಮೇಲೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ ಅದ್ಯಾಕೊ ಜನರು ಇಷ್ಟ ಪಡಲಿಲ್ಲ. ಈಗ ಮತ್ತೆ ಪರೀಕ್ಷೆಗೆ ಸಿದ್ದವಾಗಿದ್ದಾರೆ.
‘ಶೀಲವತಿ’ ಸಿನಿಮಾ ಅವರಿಗೆ ಬ್ರೇಕ್ ನೀಡುತ್ತಾ ಇಲ್ಲವಾ ಅನ್ನೋದು ಗೊತ್ತಾಗಲ್ಲ. ಸ್ವೀಟಿ ಬದುಕಿನ ಇನ್ನೊಂದು ಮುಖ ನೋಡೋದಕ್ಕೆ ಜನರು ಕಾಯುತ್ತಿದ್ದಾರೆ. ಬಾಹುಬಲಿ ಅಂತಹ ಸಕ್ಸಸ್‌ಫುಲ್ ಸಿನಿಮಾ ಕೊಟ್ಟ ನಟಿ ಅನುಷ್ಕಾ ಮತ್ತೆ ಚಿತ್ರರಂಗದಲ್ಲಿ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.