ಕನ್ನಡತಿ ಅನುಷ್ಕಾ ಶೆಟ್ಟಿ (Anushka Shetty) ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾ ಇದೇ ಸೆ.7ಕ್ಕೆ ರಿಲೀಸ್ ಆಗುತ್ತಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಟಿ ಭಾಗಿಯಾಗಿದ್ದಾರೆ. ಈ ವೇಳೆ, ಮದುವೆ, ಟ್ರೋಲ್ ಮತ್ತು ಪ್ರಭಾಸ್ ಜೊತೆಗಿನ ಸಿನಿಮಾ ಬಗ್ಗೆ ಅನುಷ್ಕಾ ಶೆಟ್ಟಿ ಮುಕ್ತವಾಗಿ ಮಾತನಾಡಿದ್ದಾರೆ.
ತಮ್ಮ ಮದುವೆಯ ವಿಚಾರದ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಮದುವೆ (Wedding) ಪ್ಲ್ಯಾನ್ ಏನಾದರೂ ಇದ್ಯಾ? ಎನ್ನುವ ನಿರೂಪಕಿಯ ಪ್ರಶ್ನೆಗೆ ಸ್ವೀಟ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮದುವೆಗೆ ವಿರುದ್ಧ ಅಲ್ಲ. ನಾನು ಸಂಗಾತಿಯನ್ನು ಹೊಂದಲು ಮತ್ತು ಕುಟುಂಬ ಆರಂಭಿಸಲು ಇಷ್ಟಪಡುತ್ತೇನೆ. ಅದರಲ್ಲಿ ನನಗೆ ನಂಬಿಕೆ ಇದೆ. ಆದರೆ ಅದು ಸ್ವಾಭಾವಿಕವಾಗಿ ಆಗಬೇಕು. ಬರೀ ಸಮಾಜದ ಒತ್ತಡಕ್ಕೆ ಆಗುವುದಲ್ಲ ಎಂದಿದ್ದಾರೆ. ಇದನ್ನೂ ಓದಿ:ರಾಕಿಭಾಯ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಅಕ್ಟೋಬರ್‌ನಲ್ಲಿ Yash 19ಗೆ ಮುಹೂರ್ತ ಫಿಕ್ಸ್
ಸೋಶಿಯಲ್ ಮೀಡಿಯಾದಲ್ಲಿ ನಾನು ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ಪ್ರಮೋಷನ್‌ಗೆ ಸಾಮಾಜಿಕ ಜಾಲತಾಣದ ಬಳಕೆ ಮಾಡುತ್ತೇನೆ. ಎಲ್ಲರಿಗೂ ಅವರದ್ದೇ ಆದ ಸಮಸ್ಯೆ ಇರುತ್ತದೆ. ಮೊದಲು ನಾವು ಮನುಷ್ಯರಾಗಬೇಕು ಎಂದಿದ್ದಾರೆ ಅನುಷ್ಕಾ ಶೆಟ್ಟಿ. ಇದನ್ನೂ ಓದಿ:ರಾಕಿಭಾಯ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಅಕ್ಟೋಬರ್‌ನಲ್ಲಿ Yash 19ಗೆ ಮುಹೂರ್ತ ಫಿಕ್ಸ್
ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿ ಪ್ರಭಾಸ್ (Prabhas) ಜೊತೆ ನಟಿಸುತ್ತೇನೆ. ಒಳ್ಳೆಯ ಕಥೆ ಬರಬೇಕು ಅಷ್ಟೇ ಎಂದು ಬಾಹುಬಲಿ ನಟಿ ಸ್ಪಷ್ಟನೆ ನೀಡಿದ್ದಾರೆ.
ನವೀನ್ ಪೋಲಿ ಶೆಟ್ಟಿಗೆ ಜೋಡಿಯಾಗಿ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ. ಮೊದಲ ಬಾರಿಗೆ ಶೆಫ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಹುಭಾಷೆಗಳಲ್ಲಿ ಸೆ.7ರಂದು ರಿಲೀಸ್ ಆಗುತ್ತಿದೆ. ಜವಾನ್ ಮುಂದೆ ಅನುಷ್ಕಾ ಸಿನಿಮಾ ಬಿಡುಗಡೆ ಆಗುತ್ತಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]