ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ ಅವರು 3 ವರ್ಷಗಳ ನಂತರ ಕಮ್‌ಬ್ಯಾಕ್ ಆಗಿದ್ದಾರೆ. ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ (Miss Shetty Mr Poli Shetty) ಸಿನಿಮಾ ಮೂಲಕ ಸ್ವೀಟಿ ಸದ್ದು ಮಾಡ್ತಿದ್ದಾರೆ. ಸದ್ಯ ಚಿತ್ರದ ಟೀಸರ್ ಝಲಕ್‌ನಿಂದ ಅನುಷ್ಕಾ ಶೆಟ್ಟಿ (Anushka Shetty) ಹೈಪ್ ಕ್ರಿಯೇಟ್ ಮಾಡಿದ್ದಾರೆ.
ಬಾಹುಬಲಿ 2 (Bahubali 2), ನಿಶಬ್ಧಂ ಚಿತ್ರದ ನಂತರ ಸ್ವೀಟಿ, ಅನ್ವಿತಾ ರಾವಲಿ ಶೆಟ್ಟಿಯಾಗಿ ಬರುತ್ತಿದ್ದಾರೆ. ಹೋಟೆಲ್‌ವೊಂದರ ಶೆಫ್ ಆಗಿ ಅನುಷ್ಕಾ ನಟಿಸಿದ್ದಾರೆ. ಅನ್ವಿತಾ ರಾವಲಿ ಶೆಟ್ಟಿಗೆ ಮದುವೆ ಅಂದ್ರೆ ಇಷ್ಟ ಇರಲ್ಲ, ಆ ವಿಷಯದಲ್ಲಿ ಫ್ಯಾಮಿಲಿ ಸಪೋರ್ಟ್ ಕೂಡ ಇರುತ್ತದೆ. ಮತ್ತೊಂದು ಕಡೆ ಪೋಷಕರಿಗೆ ಇಷ್ಟವಿಲ್ಲದಿದ್ದರೂ ಸ್ಟ್ಯಾಂಡಪ್ ಕಾಮೆಡಿಯನ್ ಆಗಬೇಕು ಎನ್ನುವ ಕನಸು ಕಾಣುವ ಯುವಕ ನವೀನ್ ಪೋಲಿ ಶೆಟ್ಟಿ. ಆಕಸ್ಮಿಕವಾಗಿ ಇವರಿಬ್ಬರ ನಡುವೆ ಪರಿಚಯ ಆಗಿ ಅದು ಸ್ನೇಹಕ್ಕೆ ತಿರುಗುತ್ತದೆ. ಮುಂದೆ ಆ ಸ್ನೇಹ ಎಲ್ಲಿಗೆ ಹೋಗಿ ತಲುಪುತ್ತದೆ ಅನ್ನೋದನ್ನು ತೆರೆಮೇಲೆಯೇ ನೋಡಬೇಕು. ಇಬ್ಬರ ನಡುವಿನ ದೃಶ್ಯಗಳು ತುಂಬಾ ಫ್ರೆಶ್ ಆಗಿ ಮೋಡಿ ಬಂದಿದೆ. ವಿಶೇಷವಾಗಿ ರಾವಲಿ ಶೆಟ್ಟಿ, ಪೋಲಿ ಶೆಟ್ಟಿನ ಸಂದರ್ಶನ ಮಾಡುವ ಸನ್ನಿವೇಶ ಮಜವಾಗಿದೆ.ಇದನ್ನೂ ಓದಿ:ಪತ್ನಿಗೆ ಸಿನಿಮಾ ಮಾಡಲು ಬಿಡಿ ಎಂದ ಅಭಿಮಾನಿಗೆ ಅಭಿಷೇಕ್ ಬಚ್ಚನ್ ಏನಂದ್ರು ಗೊತ್ತಾ?
View this post on Instagram
ನವೀನ್‌ನ ನಿನ್ನ ಸ್ಟ್ರೆಂತ್ ಏನು ಎಂದು ಆಕೆ ಕೇಳಿದಾಗ ಅವಕಾಶ ಸಿಕ್ಕಾಗಲೆಲ್ಲಾ ಕಾಮಿಡಿ ಮಾಡ್ತೀನಿ ಅಂತಾನೆ. ವೀಕ್‌ನೆಸ್ ಏನು ಅಂದ್ರೆ ಸಿಚ್ಯುವೇಷನ್‌ಗೆ ಸಂಬಂಧ ಇಲ್ಲದೇ ಕಾಮಿಡಿ ಮಾಡ್ತಿರ್ತೀನಿ ಅಂತಾ ಉತ್ತರ ಕೊಡುತ್ತಾನೆ. ಇನ್ನು ಕೊನೆಗೆ ನಿನ್ನ ಟೈಮಿಂಗ್ ಯಾವಾಗಲೂ ಹೀಗೇನಾ? ಎನ್ನುವ ಪ್ರಶ್ನೆಗೆ ಕಾಮಿಡಿ ಟೈಮಿಂಗ್ ಮಾತ್ರ ಪರ್ಫೆಕ್ಟ್ ಆಗಿ ಇರುತ್ತೆ ಎನ್ನುತ್ತಾನೆ. ಟೀಸರ್ ನೋಡಿದ್ಮೇಲೆ ಇದು ಪಕ್ಕಾ ಕಾಮೆಡಿ ಎಂಟರ್‌ಟೈನರ್ ಸಿನಿಮಾ ಅನ್ನೋದು ಅರ್ಥವಾಗ್ತಿದೆ. ಟೀಸರ್ ಹೊಸ ಫೀಲ್ ಕೊಡುವಂತಿದೆ. ಯುವಿ ಕ್ರಿಯೇಷನ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಮಹೇಶ್ ಬಾಬು ಪಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ.
ಡಿಫರೆಂಟ್ ಲುಕ್, ಫ್ರೆಶ್ ಕಥೆ ಜೊತೆ ಬರುತ್ತಿರುವ ಅನುಷ್ಕಾಳನ್ನ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ನವೀನ್ ಪೋಲಿ ಶೆಟ್ಟಿ- ಅನುಷ್ಕಾ ನಟನೆಯ ಈ ಚಿತ್ರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.