ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿಗೆ (Anushka Shetty) ನವೆಂಬರ್ 7ರಂದು ಹುಟ್ಟುಹಬ್ಬದ (Birthday) ಸಂಭ್ರಮ. ಈ ದಿನವೇ ಸ್ವೀಟಿ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಗಲಿದೆ. ಅವರ ಮುಂಬರುವ ಸಿನಿಮಾಗಳ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ಇದನ್ನೂ ಓದಿ:ಬ್ರೇಕಪ್ ಆಗಿರೋದು ನಿಜ: ಸ್ಪಷ್ಟನೆ ನೀಡಿದ ಜಯಶ್ರೀ ಆರಾಧ್ಯ
ಅನುಷ್ಕಾ ಅವರು ಸದ್ಯ ತೆಲುಗಿನ ‘ಘಾಟಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಕ್ರಿಶ್ ಜಗರ್ಲಮುಡಿ ನಿರ್ದೇಶನ ಮಾಡುತ್ತಿದ್ದಾರೆ. ಮತ್ತೊಂದು ಚಿತ್ರ ಮಲಯಾಳಂನ ‘ಕಟನಾರ್’ ಸಿನಿಮಾದಲ್ಲೂ ಸ್ವೀಟಿ ನಟಿಸಿದ್ದಾರೆ. ಈ ಎರಡು ಚಿತ್ರಗಳ ಅವರ ಪಾತ್ರದ ಪೋಸ್ಟರ್ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದೆ ಚಿತ್ರತಂಡ. ಜೊತೆಗೆ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಿದ್ದಾರೆ. ಈ ಮೂಲಕ ಸ್ವೀಟಿ ಫ್ಯಾನ್ಸ್‌ಗೆ ನಟಿಯ ನಯಾ ಲುಕ್ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.
ಇನ್ನೂ ‘ಬಾಹುಬಲಿ’ ಸೇರಿದಂತೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ಅನುಷ್ಕಾ ಅವರು ಕಳೆದ ವರ್ಷ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಚಿತ್ರದಲ್ಲಿ ನಟಿಸಿದ್ದರು. ಇದೀಗ ಅವರು ಕೈತುಂಬಾ ಸಿನಿಮಾಗಳಿವೆ. ನಟಿಯ ಹುಟ್ಟುಹಬ್ಬದಂದು ಅಫಿಷಿಯಲ್ ಆಗಿ ಸಿನಿಮಾ ಕುರಿತು ಸುದ್ದಿ ಸಿಗಲಿದೆ.
ಅಂದಹಾಗೆ, ಕಟನಾರ್, ಕಾಂಚೆ, ಘಾಟಿ, ಗೌತಮಿಪುತ್ರ ಶತಕರ್ಣಿ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಅನುಷ್ಕಾ ಕೈಯಲ್ಲಿವೆ.