ಸ್ವೀಟಿ ಫ್ಯಾನ್ಸ್‌ಗೆ ಇದು ಬೇಸರದ ಸಂಗತಿ- ಅನುಷ್ಕಾ ಶೆಟ್ಟಿ ಬಗ್ಗೆ ಏನಿದು ಸುದ್ದಿ?

Public TV
2 Min Read
anushka shetty

ವಾಟ್ ಅನುಷ್ಕಾ ಶೆಟ್ಟಿ (Anushka Shetty) ಸಿನಿಮಾ ಮಾಡಲ್ವಾ? ಬಣ್ಣದ ಲೋಕದಿಂದ ಸ್ವೀಟಿ ದೂರ ಉಳಿತಾರ? ಹೀಗೊಂದು ಸುದ್ದಿ ಕೇಳಿ ಶಾಕ್ ಆಗಿದ್ದಾರೆ ಟಾಲಿವುಡ್ (Tollywood) ಫ್ಯಾನ್ಸ್. ಅಸಲಿಗೆ ಈ ಸುದ್ದಿ ನಿಜವಾ? ಶೂಟಿಂಗ್‌ನಿಂದ ದೂರವಾಗುವಂತ ಸಮಸ್ಯೆ ಏನಾಗಿದೆ ಸ್ವೀಟಿಗೆ? ಯಾರಾದ್ರು ಅನುಷ್ಕಾಗೆ ಬೇಸರ ಮಾಡಿದ್ರ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

anushka shetty 1 1

ಅನುಷ್ಕಾ ಶೆಟ್ಟಿ ಮಾಸ್ ಹೀರೋಗಳ ಜೊತೆಗೆ ಒಪ್ಪುವಂತ ಕ್ಲಾಸ್ ಹೀರೋಯಿನ್. ಒಳ್ಳೆ ಸಿನಿಮಾಗಳನ್ನ ಮಾಡಿಕೊಂಡು ಬಂದ ಅನುಷ್ಕಾ ಶೆಟ್ಟಿ ಆಫ್ಟರ್ ಬಾಹುಬಲಿ ಸ್ವಲ್ಪ ಡಲ್ ಆದ್ರು. ಸಿನಿಮಾಗಳು ಡಲ್ ಆದ್ರು ಈಕೆಯ ಫ್ಯಾನ್ಸ್ ಮಾತ್ರ ಯಾವತ್ತು ಅನುಷ್ಕಾ ಮೇಲಿನ ಪ್ರೀತಿ ಕಡಿಮೆ ಮಾಡ್ಲಿಲ್ಲ. ಒಂದು ಸಿನಿಮಾ ಸೋಲುತ್ತೆ ಒಂದು ಸಿನಿಮಾ ಗೆಲ್ಲುತ್ತೆ ನೀವು ಫಿಲ್ಮ್ಂ ಮಾಡಿ ನಾವು ನೋಡ್ತಿವಿ ಅಂತ ಸ್ವೀಟಿ ಬೆನ್ನಿಗೆ ನಿಂತ್ರು ಈಕೆಯ ಫ್ಯಾನ್ಸ್. ಈ ಫ್ಯಾನ್ಸ್‌ಗೆ ಖುಷಿ ಜೊತೆಗೆ ಭರವಸೆ ಕೊಟ್ಟಿತ್ತು ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ (Miss Shetty Mr Poli Shetty) ಟೀಸರ್.

anushka shetty 1

ಪ್ರಭಾಸ್ (Prabhas) ಜೊತೆ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಮಿಂಚಿದ ಹೀರೋಯಿನ್ ಈಗ ಮತ್ತೊಂದು ಇನ್ನಿಂಗ್ಸ್ ಆರಂಭಿಸ್ತಿದ್ದಾರೆ ಅಂತ ಅಭಿಮಾನಿಗಳು ಸಂಭ್ರಮಿಸಿದ್ರು. ಟೀಸರ್‌ನಲ್ಲಿ ರಿವೀಲ್ ಆದ ಕಂಟೆಂಟ್ ಕೂಡ ಅಷ್ಟೇ ಚೆನ್ನಾಗಿತ್ತು. ಈಗ ಇದೇ ಸಿನಿಮಾ ಅನುಷ್ಕಾ ಅಭಿನಯಿಸುವ ಕಡೆ ಸಿನಿಮಾ ಅಂತ ಸುದ್ದಿಯಾಗಿದೆ. ಒಂದೊಳ್ಳೆ ಸಿನಿಮಾದಿಂದ ಚಿತ್ರರಂಗಕ್ಕೆ ಅನುಷ್ಕಾ ವಿದಾಯ ಹೇಳಬೇಕು ಅಂತ ಡಿಸೈಡ್ ಆಗಿದ್ದಾರೆ ಎನ್ನಲಾಗ್ತಿದೆ. ಹಾಗಾದ್ರೆ ಇನ್ನುಂದೆ ಅನುಷ್ಕಾ ಸಿನಿಮಾ ಮಾಡಲ್ವಾ ಅಂತಿದ್ದಾರೆ ಅಭಿಮಾನಿಗಳು. ಅದಕ್ಕೆ ಸರಿಯಾಗಿ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ರಿಲೀಸ್ ಡೇಟ್ ಕೂಡ ಮುಂದಕ್ಕೆ ಹೋಗಿದೆ. ಈ ಸುದ್ದಿ ಕೂಡ ಫ್ಯಾನ್ಸ್ ನಿರಾಸೆ ಮೂಡಿಸಿದೆ. ಎಲ್ಲಾ ಸರಿ ಇದ್ದಿದ್ರೆ ಇದೇ ಆಗಸ್ಟ್ 4ಕ್ಕೆ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಅದಕ್ಕೂ ಬ್ರೇಕ್ ಬಿದ್ದಿದೆ. ಇದನ್ನೂ ಓದಿ:‘ಆ ದಿನಗಳ’ ನೆನೆದು ಕಣ್ಣೀರಿಟ್ಟ ನಟಿ ಸಂಯುಕ್ತ ಹೆಗ್ಡೆ

Anushka shetty 1

ಆದ್ರೆ ಅನುಷ್ಕಾ ಮಾತ್ರ ಈ ಬಗ್ಗೆ ಏನೂ ಹೇಳಿಲ್ಲ. ಆದ್ರೆ ಇಷ್ಟೆಲ್ಲಾ ಅಂತೆ-ಕಂತೆಗಳಿಗೆ ‘ಸೈಜ್ ಜೀರೋ’ ಸಿನಿಮಾನೆ ಕಾರಣ ಅಂತಿದೆ ಟಾಲಿವುಡ್ ಮೂಲಗಳು. ಈ ಸಿನಿಮಾಗಾಗಿ ಅನುಷ್ಕಾ ಸಿಕ್ಕಾಪಟ್ಟೆ ತೂಕ ಹೆಚ್ಚಿಸಿಕೊಂಡಿದ್ರು. ಸಿನಿಮಾ ಮುಗಿದ್ಮೇಲೆ ಮತ್ತೆ ದೇಹ ಕರಗಿಸುವ ಕೆಲಸ ಮಾಡಿದ್ರು ಆದ್ರೆ ಅದು ವರ್ಕ್ಔಟ್ ಆಗ್ತಿಲ್ಲ. ‘ಸೈಜ್ ಜೀರೋ’ (Size Zero Film) ಆದ್ಮೇಲೆ ಬಂದ ಭಾಗಮತಿ, ನಿಶಬ್ಧಂ ಕೂಡ ಅಷ್ಟೊಂದು ಒಳ್ಳೆ ಸೌಂಡ್ ಮಾಡಲಿಲ್ಲ. ತೂಕ ಹೆಚ್ಚಿದ ಕಾರಣ ಒಂದಷ್ಟು ತಿಂಗಳು ಅವರು ಯಾರಿಗೂ ಕಾಣಿಸಿಕೊಂಡಿಲ್ಲ ಅಂತ ಕೂಡ ಮಾತಾಗಿತ್ತು.

ಪ್ರಭಾಸ್ ಜೊತೆ ಮದುವೆ ಆಗ್ತಾರೆ ಅನುಷ್ಕಾ ಅಂತ ಫಿಕ್ಸ್ ಆಗಿದ್ರು ಫ್ಯಾನ್ಸ್. ಆದ್ರೆ ಅದ್ಯಾಕೋ ಮದುವೆ (Wedding) ಆಗಲಿಲ್ಲ. ಈಗ ಅನುಷ್ಕಾ ಸಿನಿಮಾಗಳಿಂದ ರಿಟೈರ್ ಆಗ್ತಾರೆ ಅನ್ನೊ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿಕೊಳ್ತಿದೆ. ಅಸಲಿಗೆ ಮೇಕಪ್‌ಗೆ ಸ್ವೀಟಿ ಪ್ಯಾಕಪ್ ಹೇಳ್ತಾರ? ಕಾದು ನೋಡ್ಬೇಕಿದೆ. ಸೆಲಬ್ರೆಟಿಗಳ ವಿಚಾರದಲ್ಲಿ ಈ ರೀತಿಯ ಸುದ್ದಿಗಳು ಕಾಮನ್. ಅವರೇ ಖುದ್ದು ಹೇಳಿದ್ರೆ ಮಾತ್ರ ಅದನ್ನ ನಂಬಲು ಸಾಧ್ಯ. ಶೆಟ್ಟರಿಗೆ ಒಳ್ಳೆ ಸಿನಿಮಾಗಳು ಕೈ ಹಿಡಿಲಿ ಮತ್ತಷ್ಟು ವರ್ಷಗಳು ಅಭಿಮಾನಿಗಳನ್ನ ರಂಜಿಸಲಿ ಅಲ್ವಾ?

Share This Article