ನಟಿ ಅನಿಕಾ ಸುರೇಂದ್ರನ್ ಮೃತಪಟ್ಟ ಕರಪತ್ರ ವೈರಲ್- ಅಭಿಮಾನಿಗಳು ಶಾಕ್

Public TV
1 Min Read
anikha surendran

ಟಾಲಿವುಡ್, ಮಾಲಿವುಡ್ (Mollywood) ನಟಿ ಅನಿಕಾ ಸುರೇಂದ್ರನ್ (Anikha Surendran) ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇಂಟರ್‌ನೆಟ್ ನಮಗೆ ಎಷ್ಟರ ಮಾರಕ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ನಟಿ ಅನಿಕಾ ಅವರು ಸುಳ್ಳು ಸಾವಿನ ಸುದ್ದಿಯಿಂದ ತೊಂದರೆ ಅನುಭವಿಸಿದ್ದಾರೆ. ಅವರು ಮೃತಪಟ್ಟಿದ್ದಾರೆ (Death) ಎನ್ನುವ ಪೋಸ್ಟರ್ (Poster) ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇದರಿಂದ ಅಭಿಮಾನಿಗಳಿಗೆ ಆತಂಕ ಆಗಿದೆ. ನಂತರ ಅಸಲಿ ವಿಚಾರ ತಿಳಿದು ಅವರು ನಿಟ್ಟುಸಿರು ಬಿಟ್ಟಿದ್ದಾರೆ.

ನಟಿ ಅನಿಕಾ ಅವರು ಬಾಲ ನಟಿಯಾಗಿ ಚಿತ್ರರಂಗಕ್ಕೆ ಪರಿಚಿತರಾದರು. ಅಜಿತ್ ನಟನೆಯ ‘ಯೆನ್ನೈ ಅರಿಂಧಾಲ್’ – ‘ವಿಶ್ವಾಸಮ್’ ಸಿನಿಮಾ ಮೂಲಕ ಹೆಚ್ಚು ಗುರುತಿಸಿಕೊಂಡರು. ಈಗ ಅವರು ಪೂರ್ಣ ಪ್ರಮಾಣದ ನಾಯಕಿ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಅವರು ಲಿಪ್ ಲಾಕ್ ಮಾಡಿ ಬೋಲ್ಡ್ ಲುಕ್‌ನಿಂದ ಗಮನ ಸೆಳೆದರು. ಹೀಗಿರುವಾಗಲೇ ಅವರು ಮೃತಪಟ್ಟಿದ್ದಾರೆ ಎನ್ನುವ ಕರಪತ್ರ ಸದ್ದು ಮಾಡ್ತಿದೆ. ಇದನ್ನು ನೋಡಿ ಅನೇಕರು ಶಾಕ್ ಆಗಿದ್ದರು. ಇದು ಸಿನಿಮಾದಲ್ಲಿ ಬರುವ ಒಂದು ದೃಶ್ಯ ಎನ್ನುವ ವಿಚಾರ ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ:ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ‌’ಕಾಂತಾರ’ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್

ಅನಿಕಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪೋಸ್ಟರ್‌ನಲ್ಲಿದೆ. ಅನಿಕಾ ಅವರ ಫೋಟೋ ಈ ಪೋಸ್ಟರ್‌ನಲ್ಲಿದೆ. ನಂದಿನಿ ಭಾನುವಾರ 16-07-2023 ರಂದು ರಾತ್ರಿ 11.30 ಗಂಟೆಗೆ ಅಕಾಲಿಕ ಮರಣ ಹೊಂದಿದರು. ಅವರಿಗೆ ಶ್ರದ್ಧಾಂಜಲಿ ಎಂದು ಪೋಸ್ಟರ್‌ನಲ್ಲಿದೆ. ಇದನ್ನು ನೋಡಿದ ಅಭಿಮಾನಿಗಳು ಗಾಬರಿ ಮತ್ತು ಗೊಂದಲಕ್ಕೆ ಒಳಗಾಗಿದ್ದರು. ನಂತರ ಸಿನಿಮಾಗೆ ಸಂಬಂಧಿಸಿದ ಪೋಸ್ಟರ್ ಎಂದು ತಿಳಿದ ಮೇಲೆ ಅಭಿಮಾನಿಗಳಿಗೆ ರಿಲೀಫ್ ಆಗಿದೆ.

Share This Article