CinemaLatestMain PostSouth cinema

ವಿಜಯ್ ದೇವರಕೊಂಡ ಮನೆಯಲ್ಲಿ ನಟಿ ಅನನ್ಯಾ ಪಾಂಡೆ: ರಶ್ಮಿಕಾ ಮಂದಣ್ಣ ನೆನಪಿಸಿಕೊಂಡ ನೆಟ್ಟಿಗರು

ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಮನೆಯಲ್ಲಿ ನಟಿ ಅನನ್ಯಾ ಪಾಂಡೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಸದ್ಯ ಈ ಜೋಡಿ ನಟನೆಯ ಲೈಗರ್ ಸಿನಿಮಾ ರಿಲೀಸ್ ಆಗುತ್ತಿದ್ದು, ಹಲವು ವಾರಗಳಿಂದ ಇಬ್ಬರೂ ಒಟ್ಟೊಟ್ಟಿಗೆ ಓಡಾಡುತ್ತಿದ್ದಾರೆ. ಆದರೆ, ಈ ಬಾರಿ ವಿಜಯ್ ಅವರ ಮನೆಯಲ್ಲಿ ನಡೆದ ವಿಶೇಷ ಪೂಜಾ ಸಮಾರಂಭದಲ್ಲಿ ಅನನ್ಯಾ ಪಾಂಡೆ ಕಾಣಿಸಿಕೊಂಡು ಕುತೂಹಲಕ್ಕೆ ಕಾರಣವಾಗಿದ್ದಾರೆ.

ಅಜಯ್ ಮನೆಯಲ್ಲಿ ಅನನ್ಯಾ ಕಾಣಿಸಿಕೊಳ್ಳುತ್ತಿದ್ದಂತೆಯೇ ನೆಟ್ಟಿಗರು ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ನೆನಪಿಸಿಕೊಂಡಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂದು ಸುದ್ದಿಯಿತ್ತು. ಒಬ್ಬರಿಗೊಬ್ಬರೂ ಇಷ್ಟಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಬಹಿರಂಗವಾಗಿ ಇಬ್ಬರೂ ಹೇಳಿಕೊಳ್ಳದೇ ಇದ್ದರೂ, ಒಟ್ಟೊಟ್ಟಿಗೆ ಮಧ್ಯ ರಾತ್ರಿ ಕಾಣಿಸಿಕೊಂಡಿದ್ದರು. ಒಟ್ಟಿಗೆ ನ್ಯೂ ಯಿಯರ್ ಸೆಲೆಬ್ರೇಷನ್ ನಲ್ಲಿ ಭಾಗಿಯಾಗಿದ್ದರು. ಅದೆಷ್ಟೋ ಬಾರಿ ವಿಜಯ್ ಅವರ ಮನೆಯಲ್ಲಿ ನಡೆದ ಫ್ಯಾಮಿಲಿ ಸಮಾರಂಭದಲ್ಲೂ ರಶ್ಮಿಕಾ ಭಾಗಿಯಾಗಿದ್ದರು. ಈ ಬಾರಿ ಅನನ್ಯ ಕಾಣಿಸಿಕೊಂಡಿದ್ದರಿಂದ ರಶ್ಮಿಕಾ ಟ್ರೋಲ್ ಆಗುತ್ತಿದ್ದಾರೆ. ಇದನ್ನೂ ಓದಿ:ರಾಜಮೌಳಿ ಶಿಷ್ಯನಿಂದ ಬಂಕಿಮ ಚಂದ್ರ ಚಟರ್ಜಿ ಅವರ ‘ಆನಂದಮಠ’ ಕೃತಿ ಆಧರಿಸಿದ ಸಿನಿಮಾ

ರಶ್ಮಿಕಾ ಮಂದಣ್ಣ ಜಾಗದಲ್ಲಿ ಅನನ್ಯಾ ಕಾಣಿಸಿಕೊಂಡಿದ್ದು, ಹಲವರಿಗೆ ನುಂಗಲಾರದ ತುತ್ತಾಗಿದೆ. ಹೀಗಾಗಿಯೇ ವಿಜಯ್ ದೇವರಕೊಂಡ ಹೃದಯದಿಂದ ರಶ್ಮಿಕಾ ಸಂಪೂರ್ಣ ಮರೆಯಾಗಿದ್ದಾರಾ ಎನ್ನುವ ಪ್ರಶ್ನೆ ಕೂಡ ಎತ್ತಿದ್ದಾರೆ. ಕಳೆದ ಒಂದು ವರ್ಷದಿಂದ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಕಾಣಿಸಿಕೊಂಡಿಲ್ಲ. ಒಬ್ಬರೂ ಒಬ್ಬರಿಗೊಬ್ಬರ ಕುರಿತು ಯಾವ ವಿಷಯವನ್ನೂ ಹಂಚಿಕೊಂಡಿಲ್ಲ. ಇದಕ್ಕೆ ಕಾರಣ ಅನನ್ಯಾ ಪಾಂಡೆ ಎಂದೇ ಹೇಳಲಾಗುತ್ತಿದೆ.

Live Tv

Leave a Reply

Your email address will not be published.

Back to top button