ಬೆಂಗಳೂರು: ಈಗಾಗಲೇ ತಾಂಬೂಲ ಬದಲಿಸಿಕೊಂಡಿರುವ ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಮದುವೆ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ರೆಡಿಯಾಗಿದೆ.
Advertisement
ನಟಿ ಅಮೂಲ್ಯ ಮಾಜಿ ಕಾರ್ಪೊರೇಟರ್ ಮಗ ಜಗದೀಶ್ ಅವರನ್ನು ಶೀಘ್ರವೇ ಕೈಹಿಡಿಯಲಿದ್ದಾರೆ. ಸಂಪ್ರದಾಯದಂತೆ ಮಾರ್ಚ್ 6 ರಂದು ಕೆಂಗೇರಿಯ ಶ್ರೀ ಸಾಯಿ ಪ್ಯಾಲೇಸ್‍ನಲ್ಲಿ ಅಮೂಲ್ಯ ಮತ್ತು ಜಗದೀಶ್ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ.
Advertisement
Advertisement
ಈ ಶುಭ ಸಂದರ್ಭದಲ್ಲಿ ಲಂಡನ್‍ನಲ್ಲಿ ಓದಿರೋ ಎಂಬಿಎ ಪದವೀಧರ ಜಗದೀಶ್ ಕೈಗೆ ಅಮೂಲ್ಯ ಡೈಮಂಡ್ ರಿಂಗ್ ತೊಡಿಸಲಿದ್ದಾರೆ. ಅತ್ತ ಜಗದೀಶ್ ತನ್ನ ಗೋಲ್ಡನ್ ಗರ್ಲ್‍ಗೆ ಸಾಲಿಟೇರ್ ರಿಂಗ್ ತೊಡಿಸಲಿದ್ದಾರೆ.
Advertisement
ಈ ವಿವಾಹ ನಿಶ್ಚಿತಾರ್ಥ ಸಮಾರಂಭಕ್ಕೆ ಸಿನಿಮಾ ಮತ್ತು ರಾಜಕೀಯ ಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಮಾತ್ರವಲ್ಲದೇ ಶೀಘ್ರದಲ್ಲೇ ಅಮೂಲ್ಯ ಮದುವೆಯ ದಿನಾಂಕ ಕೂಡ ಹೊರಬೀಳಲಿದೆ.
ಇದನ್ನೂ ಓದಿ: ಮದುವೆಯಾದ ಬಳಿಕ ಚಿತ್ರದಲ್ಲಿ ಆ್ಯಕ್ಟ್ ಮಾಡ್ತೀರಾ: ಅಮೂಲ್ಯ ಉತ್ತರ ಇದು
ಇದನ್ನೂ ಓದಿ: ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ