ಸ್ಯಾಂಡಲ್ವುಡ್ (Sandalwood) ಬ್ಯೂಟಿ ಅಮೂಲ್ಯ (Amulya) ವೈವಾಹಿಕ ಬದುಕಿನಲ್ಲಿ ಖುಷಿಯಾಗಿದ್ದಾರೆ. ಮದುವೆ, ಸಂಸಾರ ಅಂತಾ ನಟಿ ಬ್ಯುಸಿಯಾಗಿದ್ದಾರೆ. ಇದೀಗ ಟ್ರಡಿಷನಲ್ ಫೋಟೋಶೂಟ್ನಿಂದ ಗೋಲ್ಡನ್ ಕ್ವೀನ್ ಅಮೂಲ್ಯ ಮಿಂಚಿದ್ದಾರೆ.
Advertisement
ಬಾಲನಟಿಯಾಗಿ ಪಾದಾರ್ಪಣೆ ಮಾಡಿ, ಚಂದನವನದಲ್ಲಿ ನಾಯಕಿಯಾಗಿ `ಚೆಲುವಿನ ಚಿತ್ತಾರ’ (Cheluvina Chittara) ಸಿನಿಮಾದಿಂದ ಅಮೂಲ್ಯ ಗಮನ ಸೆಳೆದರು. ಬಳಿಕ ಗಜಕೇಸರಿ, ಮಳೆ, ನಾನು ನನ್ನ ಕನಸು ಹೀಗೆ ಸಾಕಷ್ಟು ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಇದನ್ನೂ ಓದಿ:ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರಕ್ಕೆ ರಾಗಿಣಿ ದ್ವಿವೇದಿ ಸಾಥ್
Advertisement
View this post on Instagram
Advertisement
ಬೇಡಿಕೆಯಿರುವಾಗಲೇ ಜಗದೀಶ್ (Jagadeesh) ಜೊತೆ ಅಮೂಲ್ಯ ಹಸೆಮಣೆ (Wedding) ಏರಿದ್ದರು. ಈಗ ನಟಿ ಅವಳಿ ಮಕ್ಕಳ ಆರೈಕೆಯತ್ತ ಗಮನ ಕೊಡ್ತಿದ್ದಾರೆ. ಯುಗಾದಿ ಹಬ್ಬದಂದು (ಮಾ.22) ಕೇಸರಿ ಬಣ್ಣದ ಸೀರೆಯುಟ್ಟು ಮುದ್ದಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಹಬ್ಬದ ದಿನದಂದು ಚೆಂದದ ಫೋಟೋವನ್ನ ಅಪ್ಲೋಡ್ ಮಾಡಿದ್ದಾರೆ.
Advertisement
ಇನ್ನೂ ಮತ್ತೆ ಸಿನಿಮಾಗೆ ಅಮೂಲ್ಯ ಬರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಒಂದೊಳ್ಳೆ ಕಥೆ ಸಿಕ್ಕರೆ ಖಂಡಿತಾ ಮಾಡ್ತೀನಿ ಎಂದು ಅಮೂಲ್ಯ ಕೂಡ ಹಲವು ಕಾರ್ಯಕ್ರಮಗಳಲ್ಲಿ ತಿಳಿಸಿದ್ದಾರೆ.