Bengaluru CityCinemaDistrictsKarnatakaLatestMain PostSandalwood

ಅ ಅಕ್ಷರದಿಂದಲೇ ಮಕ್ಕಳಿಗೆ ಮುದ್ದಾದ ಹೆಸರಿಟ್ಟ ಅಮೂಲ್ಯ

ಗೋಲ್ಡನ್ ಕ್ವೀನ್ ಅಮೂಲ್ಯ(Amulya) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇಬ್ಬರು ಮುದ್ದು ಮಕ್ಕಳ ನಾಮಕರಣದ ಸಂಭ್ರಮದಲ್ಲಿದ್ದಾರೆ. ನಟಿ ಅಮೂಲ್ಯ ಜಗದೀಶ್ ಅವರ ಅವಳಿ ಮಕ್ಕಳಿಗೆ ನಾಮಕರಣಕ್ಕೆ ಇಡೀ ಸ್ಯಾಂಡಲ್‌ವುಡ್(Sandalwood) ಸಾಕ್ಷಿಯಾಗಿದೆ.

ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಯಾಗಿ ಮಿಂಚಿದ ಗೋಲ್ಡನ್ ನಟಿ ಅಮೂಲ್ಯ ಮದುವೆ, ಸಂಸಾರ, ಮಕ್ಕಳು ಎಂದು ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಭಾರತಕ್ಕೆ ಬೈ ಹೇಳಿದ ಬೆನ್ನಲ್ಲೇ ಕ್ರಿಸ್‌ಮಸ್‌ಗೆ ಪ್ರಿಯಾಂಕಾ ಚೋಪ್ರಾ ತಯಾರಿ

ಕೆಲ ತಿಂಗಳುಗಳ ಹಿಂದೆ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅಮೂಲ್ಯ ಜಗದೀಶ್(Amulya Jagadeesh) ದಂಪತಿ ಅವಳಿ ಮಕ್ಕಳಿಗೆ (ನ.10) ನಾಮಕರಣ ಶಾಸ್ತ್ರ ಮಾಡಿದ್ದಾರೆ. ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಮುದ್ದಾದ ಹೆಸರನ್ನ ಇಟ್ಟಿದ್ದಾರೆ.

ಅಮೂಲ್ಯ ತಮ್ಮ ಅವಳಿ ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂಬ ಭಿನ್ನ ಹೆಸರನ್ನ ಇಟ್ಟಿದ್ದಾರೆ. ಇನ್ನೂ ಈ ಅದ್ದೂರಿ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ತಾರೆಯರು, ಆಪ್ತರು ಸಾಕ್ಷಿಯಾಗಿದ್ದಾರೆ. ಮುದ್ದಾದ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಮೂಲಕ ಫ್ಯಾನ್ಸ್ ಶುಭಹಾರೈಸಿದ್ದಾರೆ.

ಅಮೂಲ್ಯ ಮಕ್ಕಳ ನಾಮಕರಣಕ್ಕೆ ಶಿವರಾಜ್‌ಕುಮಾರ್ ದಂಪತಿ, ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿ, ಲವ್ಲೀ ಸ್ಟಾರ್ ಪ್ರೇಮ್ ಕುಟುಂಬ, ಹಿರಿಯ ನಟಿ ತಾರಾ, ಆಲ್ ಓಕೆ, ಅಜಯ್ ರಾವ್, ಧ್ರುವಾ ಸರ್ಜಾ, ಸೋನು ಗೌಡ, ಗೋಲ್ಡನ್‌ ಸ್ಟಾರ್‌ ಗಣೇಶ್‌,  ಹೀಗೆ ಸಾಕಷ್ಟು ತಾರೆಯರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button