ಖ್ಯಾತ ನಿರ್ದೇಶಕನ ಮೇಲೆ ಹೆಬ್ಬುಲಿ ನಟಿ ಅಮಲಾ ಪೌಲ್ ಮೀಟೂ ಆರೋಪ

Public TV
1 Min Read
AMALA PAUL

ಬೆಂಗಳೂರು: ‘ಹೆಬ್ಬುಲಿ’ ಚಿತ್ರದ ನಟಿ ಅಮಲಾ ಪೌಲ್ ತಮಿಳು ನಿರ್ದೇಶಕ ಸುಸಿ ಗಣೇಸನ್ ವಿರುದ್ಧ ಮೀಟೂ ಆರೋಪ ಮಾಡಿದ್ದಾರೆ.

ಲೇಖಕಿ ಲೀನಾ ಮನಿಮೆಕ್ಕಾಲೈ ಅವರು ನಿರ್ದೇಶಕ ಸುಸಿ ಗಣೇಸನ್ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಲೇಖಕಿಯ ಪರವಾಗಿ ಅಮಲಾ ಪೌಲ್ ನಿಂತಿದ್ದರು. ನಾನು ಲೇಖಕಿಯ ಪರವಾಗಿ ನಿಂತಿದ್ದಕ್ಕೆ ಸುಸಿ ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಅಮಲಾ ಪೌಲ್ ಹೇಳಿದ್ದಾರೆ.

ಸಸಿ ಗಣೇಸನ್ ನಿರ್ದೇಶನದ ‘ತಿರುಟು ಪಾಯಾಲೆ-2’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾಗ ಆದ ಅನುಭವವನ್ನು ಹಂಚಿಕೊಂಡ ಅವರು, ಈ ಚಿತ್ರ ಡಬ್ಬಲ್ ಮೀನಿಂಗ್, ಬೇಡದಿರುವ ಆಫರ್ ಹಾಗೂ ದೈಹಿಕ ಸಂಪರ್ಕ ಬೆಳೆಸುವಂತೆ ಹೇಳುತ್ತಿದ್ದರು. ಇದು ನನಗೆ ಟಿಪಿ2 ಚಿತ್ರದಲ್ಲಿ ಆದ ಅನುಭವ. ಲೀನಾ ಅವರ ಧೈರ್ಯಕ್ಕೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಅವರು ಈ ವೇದಿಕೆಯನ್ನು ಚೆನ್ನಾಗಿ ಉಪಯೋಗಿಸಿದ್ದಾರೆ. ನಮ್ಮ ಈ ಬ್ಯೂಸಿ ಲೈಫ್‍ನಲ್ಲಿ ಮಹಿಳೆಯರ ಕೆಲಸ ಹೆಚ್ಚುತ್ತಿದೆ. ಈ ಘಟನೆ ಎಲ್ಲ ಕಡೆ ನಡೆಯುತ್ತಿದೆ. ಕೆಲವು ಪುರುಷರು ತಮ್ಮ ಪತ್ನಿ ಹಾಗೂ ಮಗಳನ್ನು ಬೇರೆ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಮತ್ತೆ ಹೊರಗೆ ತಮ್ಮ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

ಎರಡನೇ ಟ್ವೀಟ್ ನಲ್ಲಿ, ನನಗೆ ಗಣೇಸನ್ ಕರೆ ಮಾಡಿದ್ದರು. ಅವರು ಕರೆ ಮಾಡಿದಾಗ ನನಗೆ ಜೀವನದ ಅತೀ ದೊಡ್ಡ ಶಾಕ್ ನನಗೆ ದೊರೆಯಿತು. ಲೀನಾ ಬೆಂಬಲಕ್ಕೆ ನಾನು ನಿಂತಿದ್ದಕ್ಕೆ ಸುಸಿ ಹಾಗೂ ಅವರ ಪತ್ನಿ ಮಂಜರಿ ನನಗೆ ಕರೆ ಮಾಡಿದ್ದರು. ನಾನು ಮಂಜರಿ ಅವರಿಗೆ ಎಲ್ಲವನ್ನು ವಿವರಿಸುತ್ತಿದ್ದಾಗ ಸುಸಿ ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಅಲ್ಲದೇ ನನ್ನನ್ನು ಅವಮಾನಿಸುವಾಗಲು ಸುಸಿ ಪತ್ನಿ ನಗುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.

amala paul

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *