ಕನ್ನಡದ ‘ಹೆಬ್ಬುಲಿ’ ನಟಿ ಅಮಲಾ ಪೌಲ್ (Amala Paul) ಸಿನಿಮಾಗಿಂತ ಈಗೀಗ ವೈಯಕ್ತಿಕ ವಿಚಾರವಾಗಿಯೇ ಸುದ್ದಿಯಾಗ್ತಿದ್ದಾರೆ. ಸದ್ಯ ಪ್ಯಾಂಟ್‌ಲೆಸ್ ಆಗಿ ಫೋಟೋಶೂಟ್ ಮಾಡಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ:ನಿನ್ನ ನಗುವಿನ ಬೆಳಕಲ್ಲಿ, ನನ್ನ ಬದುಕು ಬೆಳಗಿದೆ: ಪತ್ನಿ ಬರ್ತ್‌ಡೇಗೆ ರಿಷಬ್ ಲವ್ಲಿ ವಿಶ್
ಮದುವೆಯಾಗಿ ಒಂದು ಮಗುವಿನ ತಾಯಿ ಆಗಿರೋ ಅಮಲಾ ಈಗೀಗ ಮತ್ತಷ್ಟು ಹಾಟ್ ಆಗಿ ಕ್ಯಾಮೆರಾ ಮುಂದೆ ಕಾಣಿಸಿಕೊಳ್ತಿದ್ದಾರೆ. ಪ್ಯಾಂಟ್ ಧರಿಸದೇ ಟಾಪ್ ಹಾಕಿಕೊಂಡು ಅಮಲಾ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಓವರ್ ಸೈಜ್ ಇರೋ ಒಂದು ಟೀ ಶರ್ಟ್ ಧರಿಸಿದ್ದಾರೆ.
ಪ್ಯಾಂಟ್ ಧರಿಸದೇ ಫೋಟೋಗೆ ಪೋಸ್ ಕೊಟ್ಟ ಅಮಲಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ನಟಿ ಬೇಕಂತಲೇ ಹೀಗೆ ಮಾಡಿದ್ರಾ? ಅಥವಾ ಫ್ಯಾಷನ್ ಭಾಗವೇ ಎಂದೆಲ್ಲಾ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು ಸಿನಿಮಾ ಚಾನ್ಸ್‌ಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದೇ ಅಮಲಾಗೆ ನೆಟ್ಟಿಗರು ಟೀಕಿಸಿದ್ದಾರೆ. ಇದಕ್ಕೆಲ್ಲಾ ನಟಿ ಏನಂತಾರೆ ಎಂದು ಕಾದುನೋಡಬೇಕಿದೆ.
ಕಳೆದ ವರ್ಷ ಅಮಲಾ ಅವರು ದಿ ಗೋಟ್ ಲೈಫ್, ಲೆವೆಲ್ ಕ್ರಾಸ್ ಸಿನಿಮಾಗಳಲ್ಲಿ ನಟಿಸಿದ್ದರು. ಸದ್ಯ ಅವರು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.