ಇತ್ತೀಚೆಗಷ್ಟೇ ಮದುವೆಯಾಗಿ, ಇದೀಗ ತಾನು ತಾಯಿ ಆಗುತ್ತಿರುವುದಾಗಿಯೂ ಘೋಷಣೆ ಮಾಡಿರುವ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತೆ ಸುದ್ದಿಯಾಗಿದ್ದಾರೆ. ಮದುವೆಯಾಗಿ 50 ದಿನಕ್ಕೆ ತಾವು ತಾಯಿ ಆಗುತ್ತಿರುವುದಾಗಿ ತಿಳಿಸಿ, ಅಭಿಮಾನಿಗಳಿಗೆ ಅಚ್ಚರಿ ತಂದಿದ್ದರು. ಇದೀಗ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮತ್ತೊಂದು ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಇದೂ ಇನ್ನೂ ಅಚ್ಚರಿ ಮೂಡಿಸಿದೆ.
Advertisement
ಬಾಲಿವುಡ್ ನಟ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿ ಭಾಗಿಯಾಗಿದೆ. ಈಗಾಗಲೇ ಇವರ ಕಂತು ಚಿತ್ರೀಕರಣ ಕೂಡ ಆಗಿದೆ. ಇದರ ಒಂದು ತುಣುಕನ್ನು ಕರಣ್ ಜೋಹಾರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಪ್ರೋಮೋದಲ್ಲಿ ಆಲಿಯಾ ಆಡಿದ ಮಾತು ನಿಜಕ್ಕೂ ಅಚ್ಚರಿ ಮೂಡಿಸಿದೆ. ಶೋನ ರಾಪಿಡ್ ಫಯರ್ ರೌಂಡ್ ನಲ್ಲಿ ಕರಣ್ ಜೋಹಾರ್, ಆಲಿಯಾ ಭಟ್ ಅವರಿಗೆ ‘ಮದುವೆಯ ನಂತರ ನಿಮಗೆ ಅರ್ಥವಾದ ಒಂದು ಸಂಗತಿ ಯಾವುದು? ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಅಷ್ಟೇ ಚುರುಕಾಗಿ ಉತ್ತರ ನೀಡಿದ್ದಾರೆ ಆಲಿಯಾ ಭಟ್. ಇದನ್ನೂ ಓದಿ: ‘ಕೆಜಿಎಫ್ 2’, ‘ಆರ್.ಆರ್.ಆರ್’ ದಾಖಲೆ ಮುರಿಯತ್ತಾ ರಾಮ್ ಗೋಪಾಲ್ ವರ್ಮಾ ಅವರ ‘ಲಡ್ಕಿ’ ಸಿನಿಮಾ ?
Advertisement
Advertisement
ಕರಣ್ ಪ್ರಶ್ನೆಗೆ ಉತ್ತರಿಸಿರುವ ಆಲಿಯಾ ಭಟ್, ಮದುವೆ ದಿನ ಎಲ್ಲರೂ ಸುಸ್ತಾಗಿರುತ್ತದೆ. ಮದುವೆಯಾದ ನಂತರ, ಮದುವೆಯ ದಿನ ಸುಸ್ತಾಗಿರುತ್ತದೆ. ಹಾಗಾಗಿ ಫಸ್ಟ್ ನೈಟ್ ಅನ್ನುವುದೇ ಇರುವುದಿಲ್ಲ ಎಂದು ಹೇಳಿದ್ದಾರೆ. ಅದು ಪತಿ ಎದುರಿಗೆ ಇದ್ದಾಗಲೇ ಹೇಳಿದ್ದರಿಂದ ವಿಡಿಯೋ ಭಾರೀ ವೈರಲ್ ಕೂಡ ಆಗಿದೆ. ಅಲ್ಲದೇ, ಆಲಿಯಾ ಭಟ್ ಗೆ ಅನೇಕರು ಕಾಮೆಂಟ್ ಕೂಡ ಮಾಡಿದ್ದಾರೆ.