ಮಿಸ್ಟರ್ & ಮಿಸ್ಸೆಸ್, ತ್ರಿವಿಕ್ರಮ್ ಸಿನಿಮಾಗಳ ನಟಿ ಅಕ್ಷಿತಾ ಬೋಪಯ್ಯ (Akshitha Bopaiah ) ತಮ್ಮ ಬಹುಕಾಲದ ಗೆಳೆಯನ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಎಂಗೇಜ್‌ಮೆಂಟ್ (Engagement) ಸಂಭ್ರಮದ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗಲಿದೆ ಗುಡ್ ನ್ಯೂಸ್
ಕಿರುಚಿತ್ರ, ಸಿನಿಮಾವೊಂದರ ಕಾರ್ಯಕಾರಿ ನಿರ್ಮಾಪಕರಾಗಿರುವ ಪ್ರೀತಮ್ ಸುರೇಶ್ (Preetham Suresh) ಜೊತೆ ನಟಿ ಅಕ್ಷಿತಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಡಿಕೇರಿಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥದ ಕಾರ್ಯಕ್ರಮ ಜರುಗಿದೆ. ಎರಡು ಕುಟುಂಬದ ಗುರುಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಿದೆ.
View this post on Instagram
ಕೊಡವ ಪದ್ಧತಿಯಂತೆ ಡಿಸೆಂಬರ್‌ನಲ್ಲಿ ಅಕ್ಷಿತಾ ವಿವಾಹ ಮಡಿಕೇರಿಯಲ್ಲಿ ಜರುಗಲಿದೆ. ನಟಿಯ ಮದುವೆಯಲ್ಲಿ ಸ್ಯಾಂಡಲ್‌ವುಡ್ ನಟ, ನಟಿಯರು ಮತ್ತು ಗಣ್ಯರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಮೊದಲ ಬಾರಿಗೆ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಪೂಜಾ ಹೆಗ್ಡೆ
ರಿಯಲ್ ಪೊಲೀಸ್ ಸಿನಿಮಾ, ವರಲಕ್ಷ್ಮಿ ಸ್ಟೋರ್ಸ್, ಪಿ5, ತ್ರಿವಿಕ್ರಮ್, ಮಿಸ್ಟರ್ & ಮಿಸ್ಸೆಸ್ ಹಲವು ಪ್ರಾಜೆಕ್ಟ್‌ಗಳಲ್ಲಿ ಕೊಡಗಿನ ಬೆಡಗಿ ಅಕ್ಷಿತಾ ನಟಿಸಿದ್ದಾರೆ.