ತಮಿಳು ನಟಿ ಐಶ್ವರ್ಯಾ ರಾಜೇಶ್ (Aishwarya Rajesh) ಅವರು ಬಹುಭಾಷಾ ನಟಿಯಾಗಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸಿನಿಮಾ ಪ್ರಚಾರ ಕಾರ್ಯವೊಂದರಲ್ಲಿ ಹೇಮಾ ಕಮಿಟಿ ವರದಿಯ ಬಗ್ಗೆ ಮಾತನಾಡಿದ್ದಾರೆ. ನಮ್ಮಲ್ಲಿ ಕಾಸ್ಟಿಂಗ್ ಕೌಚ್ ಸಮಸ್ಯೆಯಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಶೋಗೆ ಸುದೀಪ್ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು?- ನಟ ಹೇಳೋದೇನು?
ಸಮಾರಂಭಕ್ಕೆ ಅತಿಥಿಯಾಗಿ ಭಾಗವಹಿಸಿದ್ದ ವೇಳೆ ನಟಿಗೆ ಚಿತ್ರರಂಗದ ಲೈಂಗಿಕ ಕಿರುಕುಳದ ಬಗ್ಗೆ ಎದುರಾದ ಪ್ರಶ್ನೆಗೆ ಮಾತನಾಡಿ, ಕಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಸಮಸ್ಯೆಗಳು ಕಂಡು ಬಂದಿಲ್ಲ. ನನಗೆ ಬಲವಾದ ನಂಬಿಕೆಯಿದೆ. ನಮ್ಮಲ್ಲಿ ಇಂತಹ ಯಾವುದೇ ತೊಂದರೆಗಳಿಲ್ಲ. ನಾನು ಹಲವು ಭಾಷೆಗಳಲ್ಲಿ ನಟಿಸಿದ್ದೇನೆ, ಆದರೆ ಬೇರೆ ನಟಿಯರು ಹೇಳುವಂತಹ ಸಮಸ್ಯೆಗಳನ್ನು ನಾನು ಎದುರಿಸಿಲ್ಲ ಎಂದಿದ್ದಾರೆ. ನಮ್ಮಲ್ಲಿ ಕಾಸ್ಟಿಂಗ್ ಕೌಚ್ ಪದಕ್ಕೆ ಜಾಗವಿಲ್ಲ ಎಂದು ಮಾತನಾಡಿದ್ದಾರೆ.
ಅಂದಹಾಗೆ, ಐಶ್ವರ್ಯಾ ರಾಜೇಶ್ ಅವರು ಶಿವಣ್ಣ, ಡಾಲಿ ನಟನೆಯ ‘ಉತ್ತರಾಕಾಂಡ’ (Uttarakanda Film) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ. ಈ ಚಿತ್ರದಲ್ಲಿ ಭಾವನಾ ಮೆನನ್, ಚೈತ್ರಾ ಆಚಾರ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.