ಚುಟುಚುಟು ಖ್ಯಾತಿಯ ನಟಿ ಆಶಿಕಾ ರಂಗನಾಥ್ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಶೂಟಿಂಗ್ ಸ್ಪಾಟ್ ನಲ್ಲಿ ಕುಡಿದು, ಮಧ್ಯ ಬೆರಳು ತೋರಿಸುವಂತಹ ವಿಡಿಯೋ ಅದಾಗಿದ್ದು, ಈ ವಿಡಿಯೋಗೆ ನೆಗೆಟಿವ್ ಕಾಮೆಂಟ್ಸ್ ಹೆಚ್ಚಾಗಿ ಬರುತ್ತಿವೆ. ಇದು ಸಿನಿಮಾವೊಂದರ ದೃಶ್ಯವಾ ಅಥವಾ ಅವರ ನಟನೆಯ ಸಿನಿಮಾವೊಂದು ಮುಂದಿನ ವಾರ ಬಿಡುಗಡೆ ಆಗುತ್ತಿದ್ದು, ಆ ಸಿನಿಮಾದ ಪ್ರಮೋಷನ್ನಾ ಇನ್ನೂ ಗೊತ್ತಾಗಿಲ್ಲ.
ಮೇಲ್ನೋಟಕ್ಕೆ ಈ ದೃಶ್ಯವು ಪವನ್ ಒಡೆಯರ್ ನಿರ್ದೇಶನದ ರೇಮೋ ಸಿನಿಮಾದ್ದು ಎಂದು ಹಲವರು ಹೇಳುತ್ತಿದ್ದರೆ, ಇನ್ನೂ ಕೆಲವರು ತಮಾಷೆಯಾಗಿ ಸೆಟ್ ನಲ್ಲಿ ಈ ರೀತಿ ಆಶಿಕಾ ನಡೆದುಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಶೂಟಿಂಗ್ ಸ್ಪಾಟ್ ನಲ್ಲಿ ಗಲಾಟೆ ಮಾಡಿಕೊಂಡು ಈ ರೀತಿ ಅಸಭ್ಯವಾಗಿ ನಡೆದುಕೊಳ್ಳುವಂತಹ ಪ್ಲ್ಯಾನ್ ಸಿನಿಮಾ ಪ್ರಮೋಷನ್ ಗಾಗಿ ಮಾಡಿದ್ದು ಎಂದೂ ಹೇಳಲಾಗುತ್ತಿದೆ. ಈ ವಿಡಿಯೋ ಕುರಿತು ಆಶಿಕಾ ರಂಗನಾಥ್ ಅವರೇ ಸ್ಪಷ್ಟನೆ ನೀಡಬೇಕಿದೆ.
ಈವರೆಗೂ ಯಾವತ್ತೂ ವಿವಾದಕ್ಕೆ ಗುರಿಯಾದವರಲ್ಲ ಆಶಿಕಾ. ತಮ್ಮ ಪಾಡಿಗೆ ತಾವು ಇದ್ದವರು. ಪಬ್, ಗಲಾಟೆ, ಬಾಯ್ ಫ್ರೆಂಡ್ ಅಂತ ಹೆಸರು ಕೆಡಿಸಿಕೊಂಡವರಲ್ಲ. ಹಾಗಾಗಿ ಇದು ಸಿನಿಮಾದ ದೃಶ್ಯ ಅಥವಾ ಸಿನಿಮಾ ಪ್ರಮೋಷನ್ ಗಾಗಿ ಚಿತ್ರೀಕರಿಸಿರುವ ವಿಡಿಯೋ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ಸಿನಿಮಾದ ದೃಶ್ಯವೇ ಆಗಿದ್ದರೆ, ಆಶಿಕಾ ರೇಮೋ ಸಿನಿಮಾದಲ್ಲಿ ಯಾವ ರೀತಿಯ ಪಾತ್ರವನ್ನು ಮಾಡಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ. ಇದನ್ನೂ ಓದಿ:‘ಸಲಾರ್’ ಸಿನಿಮಾದಲ್ಲಿ ಕನ್ನಡದ ಯುವ ನಾಯಕ ಪ್ರಮೋದ್ ನಟಿಸಿದ್ದು ನಿಜ : ಪ್ರಶಾಂತ್ ನೀಲ್
ಆಶಿಕಾ ಪ್ರತಿಭಾವಂತ ನಟಿ. ಎಂತಹ ಪಾತ್ರ ಕೊಟ್ಟರೂ ಮಾಡುವಂತಹ ಕಲಾವಿದೆ. ಹಾಗಾಗಿ ರೇಮೋ ಸಿನಿಮಾದಲ್ಲಿ ಅವರು ವಿಶೇಷ ಪಾತ್ರವನ್ನು ನಿರ್ವಹಿಸಿದ್ದಾರೆ. ಈವರೆಗೂ ಮಾಡದೇ ಇರುವಂತಹ ಪಾತ್ರ ಅದಾಗಿದೆ ಎಂದು ಹೇಳಿದ್ದಾರೆ. ಈ ಸಿನಿಮಾದಲ್ಲಿ ನಾಯಕನಷ್ಟೇ ನಾಯಕಿಗೂ ಮಹತ್ವ ನೀಡಲಾಗಿದೆ ಎನ್ನುವುದು ನಿರ್ದೇಶಕ ಪವನ್ ಒಡೆಯರ್ ಅವರು ಮಾತು.