ಕನ್ನಡದ ಅಹಂ ಪ್ರೇಮಾಸ್ಮಿ (Aham Premasmi), ಸಂತ ಸಿನಿಮಾಗಳ ಮೂಲಕ ಗಮನ ಸೆಳೆದ ಆರತಿ ಛಾಬ್ರಿಯಾ (Aarati Chabria) ಕಳೆದ ಕೆಲವು ದಿನಗಳ ಹಿಂದೆ ತಾವು ಪ್ರೆಗ್ನೆಂಟ್ ಎಂದು ಘೋಷಿಸಿದ್ದರು. ಇದೀಗ ಸಂದರ್ಶನವೊಂದರಲ್ಲಿ ಈಗಾಗಲೇ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ನಟಿ ರಿವೀಲ್ ಮಾಡಿದ್ದಾರೆ.
ಕಳೆದ ತಿಂಗಳು ಮಾರ್ಚ್ 4ರಂದು ನಟಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಯುವನ್ ಎಂದು ನಾಮಕರಣ ಮಾಡಿದ್ದಾರೆ. ಇದೀಗ ತಡವಾಗಿ ಈ ವಿಚಾರವನ್ನು ನಟಿ ತಿಳಿಸಿದ್ದಾರೆ. ಇದನ್ನೂ ಓದಿ:ನ್ಯಾಯದ ಪರ ಹೋರಾಡೋಕೆ ಲಾಯರ್ ಆಗಿ ಎಂಟ್ರಿ ಕೊಟ್ಟ ಹರಿಪ್ರಿಯಾ
View this post on Instagram
ಬೇಬಿ ಬಂಪ್ ನಟಿ ವಿಶೇಷ ವಿಡಿಯೋ ಶೇರ್ ಮಾಡಿದ್ದರು. ಮೊದಲ ಮಗುವಿನ ಆಗಮನಕ್ಕಾಗಿ ಎದುರು ನೋಡುತ್ತಿರುವ ವಿಚಾರ ತಿಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನಟಿಗೆ ಫ್ಯಾನ್ಸ್ ಶುಭಕೋರಿದ್ದರು. ಈಗ ಚೊಚ್ಚಲ ಮಗುವಿಗೆ ಜನ್ಮ ನೀಡಿರುವ ಖುಷಿಯಲ್ಲಿದ್ದಾರೆ ನಟಿ ಆರತಿ.
ಆರತಿ ಛಾಬ್ರಿಯಾ ಅವರು 2019ರಲ್ಲಿ ಆಸ್ಟ್ರೇಲಿಯಾ ಮೂಲದ ಚಾರ್ಟರ್ಡ್ ಅಕೌಂಟೆಂಟ್ ವಿಶಾರದ್ ಬೀಡಸ್ಸಿ ಜೊತೆ ಮದುವೆಯಾಗಿದ್ದಾರೆ. ಈ ಜೋಡಿ 5 ವರ್ಷಗಳ ನಂತರ ಸಿಹಿಸುದ್ದಿ ಕೊಟ್ಟಿದ್ದಾರೆ.