ತಮಿಳು ಚಿತ್ರನಟ ವಿಶಾಲ್ (Vishal) ಕಿಡಿಕಾರಿದ್ದಾರೆ. ತಮ್ಮ ಚಿತ್ರಗಳಿಗೆ ತೊಂದರೆ ನೀಡಲಾಗುತ್ತಿದೆ ಎಂದು ಬಹಿರಂಗವಾಗಿಯೇ ಅವರು ಹೇಳಿಕೆ ನೀಡಿದ್ದಾರೆ. ಹಲವಾರು ಚಿತ್ರಮಂದಿರಗಳಲ್ಲಿ ನನ್ನ ಚಿತ್ರಗಳು ರಿಲೀಸ್ ಆಗುತ್ತಿಲ್ಲ. ಅದಕ್ಕೆ ಕಾರಣ ಏನು ಎನ್ನುವುದು ನನಗೆ ಗೊತ್ತಿದೆ. ಹೀಗೆ ಕೆಣಕಿದರೆ ಸುಮ್ಮನೆ ಇರೋದಿಲ್ಲವೆಂದು ಮಾತನಾಡಿದ್ದಾರೆ.
ವಿಶಾಲ್ ವಾರ್ನ್ ಮಾಡಿದ್ದು ಬೇರೆ ಯಾರಿಗೂ ಅಲ್ಲ, ಸಚಿವ ಹಾಗೂ ನಟ ಉದಯ್ ನಿಧಿ ಸ್ಟಾಲಿನ್ (Uday Nidhi Stalin) ಗೆ ಎಂದು ಹೇಳಲಾಗುತ್ತಿದೆ. ಈ ಇಬ್ಬರು ಮಧ್ಯ ಕೋಲ್ಡ್ ವಾರ್ ಯಾವತ್ತಿನಿಂದಲೂ ಇದೆ. ವಿಶಾಲ್ ಸಿನಿಮಾಗಳಿಗೆ ಅವರು ತಡೆಯೊಡ್ಡುತ್ತಾರೆ ಎನ್ನುವ ಆರೋಪವೂ ಈ ಹಿಂದೆ ಕೇಳಿ ಬಂದಿತ್ತು. ಈಗಲೂ ಅದನ್ನೇ ಮುಂದುವರೆಸಿದ್ದಾರೆ ಎನ್ನುವುದು ವಿಶಾಲ್ ಆರೋಪ.
ಸದ್ಯ ವಿಶಾಲ್ ನಟನೆಯ ರತ್ನಂ ಸಿನಿಮಾ ರಿಲೀಸ್ ಆಗಿದೆ. ಜಿಲ್ಲಾ ಕೇಂದ್ರಗಳಲ್ಲೇ ವಿಶಾಲ್ ಚಿತ್ರಕ್ಕೆ ಥಿಯೇಟರ್ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಜೊತೆಗೆ ಸಿನಿಮಾ ರಂಗದಲ್ಲಿ ಅವರನ್ನು ಹತ್ತಿಕ್ಕುವ ಕೆಲಸವನ್ನೂ ಕೆಲವರು ಮಾಡುತ್ತಿದ್ದಾರಂತೆ. ಹಾಗಾಗಿ ವಿಶಾಲ್ ವಾರ್ನ್ ಮಾಡಿದ್ದಾರೆ.