ತಮಿಳಿನ ನಾಡಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರಿಗೂ ಮತ್ತು ತಂದೆ ಎಸ್.ಎ.ಚಂದ್ರಶೇಖರ್ ಅವರಿಗೂ ಅಷ್ಟಕಷ್ಟೇ. ಮಗನ ಹೆಸರಿನಲ್ಲಿ ಚಂದ್ರಶೇಖರ್ ರಾಜಕಾರಣಕ್ಕೆ ಇಳಿದಾಗ ಸ್ವತಃ ವಿಜಯ್ ಅವರೇ ತಂದೆಯ ಮೇಲೆ ಅಸಮಾಧಾನಗೊಂಡಿದ್ದರು. ತಮ್ಮ ಹೆಸರಿನಲ್ಲಿ ಇರುವ ರಾಜಕೀಯ ಪಕ್ಷಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯೇ ಚಂದ್ರಶೇಖರ್ ಮತ್ತು ವಿಜಯ್ ನಡುವೆ ಸಣ್ಣದೊಂದು ಬಿರುಕಿಗೂ ಕಾರಣವಾಗಿತ್ತು. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ
Advertisement
ಇದೀಗ ವಿಜಯ್ ಅವರ ಬೀಸ್ಟ್ ಸಿನಿಮಾ ರಿಲೀಸ್ ಆಗಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವತಃ ವಿಜಯ್ ಅವರ ಅಭಿಮಾನಿಗಳಿಗೆ ಸಿನಿಮಾ ಚೆನ್ನಾಗಿಲ್ಲವೆಂದು ಹೇಳುತ್ತಿದ್ದಾರೆ. ಹೀಗಾಗಿ ವಿಜಯ್ ಅವರ ತಂದೆ ಚಂದ್ರೇಶೇಖರ್ ಚಿತ್ರದ ನಿರ್ದೇಶಕ ನೆಲ್ಸನ್ ವಿರುದ್ದ ಹರಿಹಾಯ್ದಿದ್ದಾರೆ. ಅಂತಾರಾಷ್ಟ್ರೀಯ ಭಯೋತ್ಪಾದನೆ ಬಗ್ಗೆ ಸಿನಿಮಾ ತೆಗೆದಿರುವ ನಿರ್ದೇಶಕರು, ಕಥೆ ಹೇಳುವ ಕ್ರಮದಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿಯೇ ಯೋಚಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ
Advertisement
Advertisement
ವಿಶ್ವ ಮಟ್ಟದ ಸಮಸ್ಯೆಯನ್ನು ತಗೆದುಕೊಂಡು ಅದನ್ನು ಒಂದು ಮಾಲ್ ಗೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ. ಒಬ್ಬ ಸ್ಟಾರ್ ನಟ ಜೊತೆಯಿದ್ದಾರೆ ಅನ್ನುವುದನ್ನು ಮರೆತು ನಿರ್ದೇಶಕರು ಸಿನಿಮಾ ಮಾಡಬೇಕು. ಸ್ಟಾರ್ ಇದ್ದಾರೆ ಅಂದ ಮಾತ್ರಕ್ಕೆ ಕಥೆ ಮರೆಯುವುದಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ವಿಜಯ್ ತಂದೆ. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್
Advertisement
ವಿಜಯ್ ಮತ್ತು ನೆಲ್ಸನ್ ಕಾಂಬಿನೇಷನ್ ನ ಬೀಸ್ಟ್ ಚಿತ್ರ ನಾನಾ ಭಾಷೆಗಳಲ್ಲಿ ರಿಲೀಸ್ ಆಗಿದ್ದರೂ, ಹಲವು ಕಡೆ ನಿರೀಕ್ಷಿತ ಮಟ್ಟದಲ್ಲಿ ಹಣ ಹರಿದು ಬಂದಿಲ್ಲ. ಈ ಬಾರಿ ಸೋಷಿಯಲ್ ಮೀಡಿಯಾದಲ್ಲೂ ಚಿತ್ರದ ಬಗ್ಗೆ ನೆಗೆಟಿವ್ ರಿವಿವ್ಯು ಸಿಕ್ಕಿದೆ. ಹೀಗಾಗಿ ನಿರ್ದೇಶಕರ ಬಗ್ಗೆ ವಿಜಯ್ ತಂದೆಗೆ ಅಸಮಾಧಾನ ಮೂಡಿದೆ.