ಕಾಲಿವುಡ್ ನಟ ವಿಜಯ್ ತಮಿಳುನಾಡು ಸೇರಿದಂತೆ ಭಾರತದ ವಿವಿಧ ಮೂಲೆಗಳಿಂದಲೂ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ವಿಜಯ್ ಸಿನಿಮಾ ರಿಲೀಸ್ ಆಗುತ್ತದೆ ಅಂದರೆ ಅಭಿಮಾನಿಗಳಿಗೆ ಅಂದೊಂದು ರೀತಿಯಲ್ಲಿ ಹಬ್ಬದಂತೆ. ದಳಪತಿ ಎಂದೇ ವಿಜಯ್ ಅವರನ್ನು ಕರೆಯುವ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಒಂದು ವೇಳೆ ಯಾರಾದರೂ ಟ್ರೋಲ್ ಮಾಡಿದರೆ ಎಂದಿಗೂ ಸಹಿಸುವುದಿಲ್ಲ.
ಕಳೆದ ವರ್ಷ ತಮಿಳುನಾಡಿನ 9 ಜಿಲ್ಲೆಗಳ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ವಿಜಯ್ ಅವರ 100ಕ್ಕೂ ಹೆಚ್ಚು ಅಭಿಮಾನಿಗಳು ಗೆಲುವು ಸಾಧಿಸುವ ಮೂಲಕ ಭಾರೀ ಸದ್ದು ಮಾಡಿದ್ದರು. ಸದ್ಯ ತಮಿಳುನಾಡಿನಲ್ಲಿ ಪ್ರಬಲ ವ್ಯಕ್ತಿಯಾಗಿ ಹೊರಹೊಮ್ಮುತ್ತಿರುವ ವಿಜಯ್, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಯಾರನ್ನೂ ಟ್ರೋಲ್ ಮಾಡಬೇಡಿ ಎಂದು ತಮ್ಮ ಅಭಿಮಾನಿಗಳ ಸಂಘದ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್
Thalapathy @actorvijay Sir @Jagadishbliss @RIAZtheboss pic.twitter.com/zuw6SOq8qZ
— Bussy Anand (@BussyAnand) April 6, 2022
ವಿಜಯ್ ಮಕ್ಕಳ್ ಇಯಕ್ಕಂನ ಪ್ರಧಾನ ಕಾರ್ಯದರ್ಶಿ ಬುಸ್ಸಿ ಆನಂದ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟರ್‌ವೊಂದನ್ನು ಶೇರ್ ಮಾಡಿದ್ದು, ರಾಜಕಾರಣಿಗಳು, ಅಧಿಕಾರಿಗಳು ಅಥವಾ ಯಾರಾದರೂ ಹೇಳಿಕೆಗಳು ಮತ್ತು ಪೋಸ್ಟರ್‌ಗಳನ್ನು ಟ್ರೋಲ್ ಮಾಡುವ ಯಾವುದನ್ನೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ. ದಳಪತಿ ವಿಜಯ್ ಅವರ ಸೂಚನೆಯಂತೆ, ನಮ್ಮ ದಳಪತಿ ಅವರ ಸಲಹೆಗೆ ವಿರುದ್ಧವಾಗಿ ವರ್ತಿಸುವ ಯಾರನ್ನಾದರೂ ಸಂಸ್ಥೆಯಿಂದ ತೆಗೆದುಹಾಕಲಾಗುವುದು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಾನು ನಿಮಗೆ ತಿಳಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಅಭಿಮಾನಿಗಳಿಂದ ದಳಪತಿ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ವಿಜಯ್ ಅವರು, 2021ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತಗಟ್ಟೆಗೆ ಸೈಕಲ್ ತುಳಿದುಕೊಂಡು ಬರುವ ಮೂಲಕ ಇಂಧನ ಬೆಲೆ ಏರಿಕೆ ಕುರಿತಂತೆ ಪರೋಕ್ಷವಾಗಿ ಟೀಕಿಸಿದ್ದರು. ಇದನ್ನೂ ಓದಿ: ಕೆಜಿಎಫ್-2 ಬುಕಿಂಗ್ ಯಾವಾಗ ಪ್ರಾರಂಭ?