ಮಲಯಾಳಂ ನಟಿಯ ಎಂಟ್ರಿಯಿಂದ ವಿಜಯ್- ಸಂಗೀತಾ ದಾಂಪತ್ಯದಲ್ಲಿ ಬಿರುಕು?

Public TV
1 Min Read
VIJAY

ಕಾಲಿವುಡ್ (Kollywood) ನಟ ವಿಜಯ್ (Vijay) ಸದ್ಯ `ವಾರಿಸು’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾಗಾಗಿ ಕಾಯ್ತಿರುವ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದು ಸಿಕ್ಕಿದೆ. ವಿಜಯ್ ಮತ್ತು ಪತ್ನಿ ಸಂಗೀತಾ (Sangeetha) ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇಬ್ಬರು ಸದ್ಯದಲ್ಲೇ ಡಿವೋರ್ಸ್ ಪಡೆಯಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದೆ.

thalapathy vijay 1

ವಿಜಯ್ (Vijay), ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ `ವಾರಿಸು’ (Varisu) ಇದೇ ಜನವರಿ 12ಕ್ಕೆ ತೆರೆಗೆ ಅಬ್ಬರಿಸುತ್ತಿದೆ. ಹಾಗಾಗಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಬೆನ್ನಲ್ಲೇ ತಮ್ಮ ವೈಯಕ್ತಿಕ ವಿಚಾರವಾಗಿಯೂ ವಿಜಯ್ ಚಾಲ್ತಿಯಲ್ಲಿದ್ದಾರೆ. ವಿಜಯ್ ಮತ್ತು ಸಂಗೀತಾ ನಡುವೆ ಬಿರುಕು ಮೂಡಿದೆ. ದಾಂಪತ್ಯ ಜೀವನ ಚೆನ್ನಾಗಿಲ್ಲ, ಸದ್ಯದಲ್ಲೇ ಈ ಜೋಡಿ ವೈವಾಹಿಕ ಜೀವನಕ್ಕೆ ಬ್ರೇಕ್ ಹಾಕಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದನ್ನೂ ಓದಿ: ಮಲ್ಟಿಸ್ಟಾರ್ ಸಿನಿಮಾಗಳಿಗೆ ಗುಡ್ ಬೈ ಹೇಳಿದ ಕಿಚ್ಚ ಸುದೀಪ್

VIJAY

ಇತ್ತೀಚೆಗಷ್ಟೇ `ವಾರಿಸು’ ಆಡಿಯೋ ಲಾಂಚ್‌ನಲ್ಲಿ ವಿಜಯ್ ಪತ್ನಿ ಗೈರಾಗಿದ್ದರು. ಬಳಿಕ ನಿರ್ದೇಶಕ ಅಟ್ಲಿ ಪತ್ನಿಯ ಸೀಮಂತ ಶಾಸ್ತçದಲ್ಲೂ ಸಂಗೀತಾ ಅವರು ಕಾಣಿಸಿಕೊಂಡಿರಲಿಲ್ಲ. ಈ ಎಲ್ಲಾ ವಿಚಾರ ಇದೀಗ ಡಿವೋರ್ಸ್ (Divorce) ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಇನ್ನೂ ವಿಕಿಪೀಡಿಯಾ ಪೇಜ್‌ನಲ್ಲೂ ಇಬ್ಬರು ಈಗಾಗಲೇ ಡಿವೋರ್ಸ್ ಪಡೆದಿದ್ದಾರೆ ಎಂದು ಪ್ರಕಟವಾಗಿದೆ. ಇಂಟರ್‌ನೆಟ್‌ನಲ್ಲಿ ಈ ವಿಷ್ಯ ಚರ್ಚೆಗೆ ಗ್ರಾಸವಾಗಿದೆ. ಈಗ ಸುದ್ದಿ ನೋಡಿ ಫ್ಯಾನ್ಸ್ ಕೂಡ ಬೇಸರಗೊಂಡಿದ್ದಾರೆ.

VIJAY 2

ಇನ್ನೂ ನಟ ವಿಜಯ್ ಡಿವೋರ್ಸ್ ಪಡೆಯಲು ಮಲಯಾಳಂ ನಟಿ (Malyalam Actress) ಜೊತೆಗಿನ ಸಂಬಂಧವೇ ಕಾರಣ ಎನ್ನಲಾಗುತ್ತಿದೆ. ಅಷ್ಟಕ್ಕೂ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಹಬ್ಬಿರುವ ಸುದ್ದಿ ಕೇವಲ ಗಾಸಿಪ್ ಮಾತ್ರನಾ, ನಿಜಾನಾ ಎಂಬುದನ್ನ ಈ ಜೋಡಿಯೇ ಅಧಿಕೃತವಾಗಿ ತಿಳಿಸಬೇಕಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *