ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ವಿಜಯ್ ದೇವರಕೊಂಡಗೆ (Vijay Devarakonda) ನಾಯಕಿಯಾಗಿ ಮತ್ತೆ ‘ಗೀತಾ ಗೋವಿಂದಂ’ ನಟಿ ಸಾಥ್ ನೀಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಪ್ರಸ್ತುತ ರಶ್ಮಿಕಾ ಮಂದಣ್ಣ ಪುಷ್ಪ 2 (Pushpa 2), ಕುಬೇರ, ಚಾವಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ವಿಜಯ್ ದೇವರಕೊಂಡ ಮುಂದಿನ ಚಿತ್ರಕ್ಕೆ ಅವರು ನಾಯಕಿಯಾಗಿದ್ದಾರೆ ಎನ್ನಲಾಗಿದೆ. ‘ಶ್ಯಾಮ್ ಸಿಂಗ್ ರಾಯ್’ ಖ್ಯಾತಿಯ ನಿರ್ದೇಶಕ ರಾಹುಲ್ ಹೇಳಿರುವ ಸಿನಿಮಾದ ಕಥೆ ವಿಜಯ್ ದೇವರಕೊಂಡಗೆ ಇಷ್ಟವಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇಬ್ಬರೂ ಜೊತೆಯಾಗಿ ಸಿನಿಮಾ ಮಾಡೋದಾಗಿ ಅನೌನ್ಸ್ ಕೂಡ ಮಾಡಿದ್ದಾರೆ.
ಇನ್ನೂ ಈಗಾಗಲೇ ವಿಜಯ್ ಮತ್ತು ರಶ್ಮಿಕಾ ನಟಿಸಿರುವ ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಎರಡು ಚಿತ್ರಗಳು ಸೂಪರ್ ಹಿಟ್ ಆಗಿವೆ. ಹಾಗಾಗಿ ಇಬ್ಬರ ಕಾಂಬಿನೇಷನ್‌ನಲ್ಲಿ ಹೊಸ ಪ್ರೇಮ ಕಥೆ ತೋರಿಸಿದ್ರೆ ಖಂಡಿತಾ ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಅನ್ನೋದು ನಿರ್ದೇಶಕ ರಾಹುಲ್ ಲೆಕ್ಕಾಚಾರ. ಇದನ್ನೂ ಓದಿ:ಪಕ್ಷಗಳ ಜೊತೆ ಗುರುತಿಸಿಕೊಳ್ಳಲ್ಲ: ಉಲ್ಟಾ ಹೊಡೆದ ನಟ ಚಿರಂಜೀವಿ
ಅದಕ್ಕಾಗಿ ರಶ್ಮಿಕಾರನ್ನು ಸಂಪರ್ಕಿಸಿ, ಕಥೆ ಕೂಡ ಹೇಳಿದ್ದಾರಂತೆ. ಕಥೆಯಲ್ಲಿ ಹೊಸತನವಿದೆ ಎಂದು ನಟಿ ಕೂಡ ಓಕೆ ಎಂದಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಸದ್ಯದಲ್ಲೇ ಚಿತ್ರತಂಡ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿದೆಯಾ? ಎಂಬುದನ್ನು ಕಾಯಬೇಕಿದೆ.
ಅಂದಹಾಗೆ, ಈ ಹಿಂದೆ ಕೂಡ ಒಳ್ಳೆಯ ಕಥೆ ಸಿಕ್ಕರೆ ಮತ್ತೆ ಜೊತೆಯಾಗಿ ನಟಿಸುತ್ತೇವೆ ಎಂದು ‘ಗೀತಾ ಗೋವಿಂದಂ’ ಜೋಡಿ ಹೇಳಿಕೊಂಡಿತ್ತು.