ಮೃಣಾಲ್ ಠಾಕೂರ್ ಜೊತೆಗಿನ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾದ ನಂತರ ವಿಜಯ್ ದೇವರಕೊಂಡ (Vijay Devarakonda) ಹೊಸ ಸಿನಿಮಾದ ಶೂಟಿಂಗ್‌ಗಾಗಿ ಶ್ರೀಲಂಕಾಗೆ ಬಂದಿಳಿದಿದ್ದಾರೆ. ಅದ್ಧೂರಿಯಾಗಿ ಸ್ವಾಗತಿಸಿ ಫ್ಯಾನ್ಸ್ ವಿಜಯ್‌ಗೆ ಸರ್ಪ್ರೈಸ್ ನೀಡಿದ್ದಾರೆ. ಇದನ್ನೂ ಓದಿ:ರಜನಿಕಾಂತ್ ಹೊಸ ಸಿನಿಮಾದಲ್ಲಿ ಕರ್ನಾಟಕದ ಹುಡುಗ
ತಮ್ಮ 12ನೇ ಸಿನಿಮಾಗಾಗಿ ಶ್ರೀಲಂಕಾಗೆ ವಿಜಯ್ ಎಂಟ್ರಿ ಕೊಟ್ಟಿದ್ದು, ಅಲ್ಲಿನ ಅಭಿಮಾನಿಗಳು ಹೂವಿನ ಹಾರ ಹಾಕಿ ಊರಿನ ಪದ್ಧತಿಯಂತೆ ಕ್ಯಾಂಡಿಯನ್ ನೃತ್ಯ ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇನ್ನೂ ಹೊಸ ಚಿತ್ರಕ್ಕಾಗಿ ತಂಡದ ಜೊತೆ ಶ್ರೀಲಂಕಾ ಬೀಡು ಬಿಟ್ಟಿದ್ದಾರೆ.
‘ಜೆರ್ಸಿ’ ನಿರ್ದೇಶಕ ಗೌತಮ್ ಜೊತೆ ಕೈಜೋಡಿಸಿರುವ ವಿಜಯ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ತಿದ್ದಾರೆ. ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ನಟ ಕಾಣಿಸಿಕೊಳ್ತಿದ್ದಾರೆ.
ಅಂದಹಾಗೆ, ಇತ್ತೀಚೆಗೆ ತೆರೆಕಂಡ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದಲ್ಲಿ ವಿಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಮತ್ತು ನಟನೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.