ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Devarakonda) ಇತ್ತೀಚೆಗೆ ದಿಢೀರ್ ಅಂತಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಅಭಿಮಾನಿಗಳು ಕೊಂಚ ಗಾಬರಿಯಾಗಿದ್ದರು. ಆರೆ ಗಾಬರಿಪಡುವಂತದ್ದು ಏನು ಆಗಿಲ್ಲ, ಡೆಂಗ್ಯೂ (Dengue) ಫೀವರ್‌ನಿಂದ ಬಳಲುತ್ತಿದ್ದಾರೆ ಚಿಕಿತ್ಸೆಗಾಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿತ್ತು. ಇದೀಗ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ.
ಅಂದಹಾಗೆ ವಿಜಯ್ ದೇವರಕೊಂಡ ಅಭಿನಯದ ಮೋಸ್ಟ್ ಅವೈಟೆಡ್ ಸಿನಿಮಾ ಕಿಂಗ್‌ಡಮ್ ಇದೇ ಜುಲೈ 31ಕ್ಕೆ ತೆರೆಗೆ ಬರಲಿದೆ. ಈ ಸಿನಿಮಾದ ಪ್ರಮೋಷನ್ ಕೆಲಸಗಳು ಬಾಕಿ ಇವೆ ಹೀಗಾಗಿ ನಟ ವಿಜಯ್ ದೇವರಕೊಂಡ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಿನಿಮಾ ತೆರೆಗೆ ಬರೋಕೆ ಇನ್ನೊಂದು ವಾರ ಬಾಕಿ ಇದೆ. ಈ ನಿಟ್ಟಿನಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಗೌತಮ್ ತಿನ್ನನುರಿ ನಿರ್ದೇಶನದಲ್ಲಿ ತಯಾರಾದ ಸಿನಿಮಾಗೆ ನಾಗ್ ವಂಶಿ, ಸಾಯಿ ಸೌಜನ್ಯ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ಕಿಂಗ್‌ಡಮ್ ಸಿನಿಮಾ ಮೊದಲಿಗೆ ಮಾರ್ಚ್ 28ರಂದು ರಿಲೀಸ್ ಡೇಟ್ ಅನೌನ್ಸ್ ಮಾಡಿತ್ತು ಚಿತ್ರತಂಡ. ಆ ಡೇಟ್‌ಗೆ ಸಿನಿಮಾ ತೆರೆಗೆ ಬರಲಿಲ್ಲ, ನಂತರ ಮೇ 31ಕ್ಕೆ ರಿಲೀಸ್ ಮಾಡೋದಾಗಿ ಡೇಟ್ ಅನೌನ್ಸ್ ಆಗಿತ್ತು ಆಗಲೂ ಸಿನಿಮಾ ತೆರೆಗೆ ಬರಲಿಲ್ಲ. ಇದೀಗ ಜುಲೈ 31ಕ್ಕೆ ಚಿತ್ರ ತೆರೆಗೆ ಬರಲಿದ್ದು, ಈ ಬಾರಿ ಅಭಿಮಾನಿಗಳಿಗೆ ನಿರಾಸೆ ಮಾಡಲು ಇಷ್ಟಪಡುತ್ತಿಲ್ಲ ವಿಜಯ್ ದೇವರಕೊಂಡ. ಹೀಗಾಗಿ ಬೇಗ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.