ತೆಲುಗು ನಟ ವಿಜಯ್ ದೇವರಕೊಂಡ (Vijay Devarakonda) ಇದೀಗ ಸಿನಿಮಾಗಿಂತ ಅವರ ವೈಯಕ್ತಿಕ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ರಿಲೇಷನ್‌ಶಿಪ್‌ನಲ್ಲಿರೋದಾಗಿ (Dating) ವಿಜಯ್ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ಜೊತೆ ಈದ್, ಹೋಳಿ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ರಶ್ಮಿಕಾ
ಸಂದರ್ಶನವೊಂದರಲ್ಲಿ ಪ್ರೀತಿ, ಮದುವೆ ಬಗ್ಗೆ ಓಪನ್ ಆಗಿ ವಿಜಯ್ ಮಾತನಾಡಿದ್ದಾರೆ. ಯಾರಾದರೂ ಪ್ರೀತಿ ಮಾಡಿದ್ರೆ ಆ ಅನುಭವ ಹೇಗಿರುತ್ತದೆ ಎಂಬುದು ತಿಳಿದಿದೆ. ಪ್ರೀತಿ ನಿರೀಕ್ಷೆಯಿಂದ ಬರುತ್ತದೆ ಎಂದಿದ್ದಾರೆ. ಬೇಷರತ್ತಾದ ಪ್ರೀತಿಯನ್ನು ನಿರೀಕ್ಷಿಸುವುದು ಸರಿಯೇ ಎಂಬುದು ನನಗೆ ತಿಳಿದಿಲ್ಲ ಎಂದಿದ್ದಾರೆ.
ಯಾರನ್ನಾದರೂ ಸರಿಯಾಗಿ ತಿಳಿದುಕೊಂಡು ಸ್ನೇಹ ಬೆಳೆಸಿದ ನಂತರವೇ ಅವರಿಗೆ ನಾನು ಹತ್ತಿರವಾಗುತ್ತೇನೆ. ನಾನು ಡೇಟ್‌ಗೆ ಹೋಗುವುದಿಲ್ಲ ಎಂದಿದ್ದಾರೆ. ಆಗ ನಿರೂಪಕಿಗೆ ನನಗೆ 35 ವರ್ಷವಾಗಿದೆ. ನಾನು ಒಬ್ಬಂಟಿಯಾಗಿರುತ್ತೇನೆ ಎಂದು ನೀವು ಭಾವಿಸುತ್ತೀರಾ? ಎಂದು ವಿಜಯ್ ಕೇಳಿದ್ದಾರೆ.
ಆ ನಂತರ ಮದುವೆ ಬಗ್ಗೆ ಮಾತನಾಡಿ, ಮದುವೆ ಮಹಿಳೆಯರಿಗೆ ಸಾಕಷ್ಟು ಸವಾಲಿನ ಸಂಗತಿಯಾಗಿದೆ. ಮದುವೆ ಯಾರ ವೃತ್ತಿಗೂ ಅಡ್ಡಿಯಾಗಬಾರದು. ಮಹಿಳೆಯರಿಗೆ ಮದುವೆ ಕಷ್ಟ. ಇದು ನೀವು ಮಾಡುತ್ತಿರುವ ವೃತ್ತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದರು. ಈ ವೇಳೆ, ರಿಲೇಷನ್‌ಶಿಪ್‌ನಲ್ಲಿರೋದಾಗಿ ನಟ ಒಪ್ಪಿಕೊಂಡರು. ಇನ್ನೂ ನಟನ ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ವಿಜಯ್ ಎಂಗೇಜ್ ಆಗಿದ್ದಾರೆ ಎಂದೆಲ್ಲಾ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ವಿಜಯ್ ಡೇಟಿಂಗ್ ವಿಚಾರ ಕೇಳಿ ಮಹಿಳಾಭಿಮಾನಿಗಳಿಗೆ ಬೇಸರವಾಗಿದೆ.