ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ತಮ್ಮ ಜೀವನದಲ್ಲಿ ಅತ್ಯುತ್ತಮ ನಿರ್ಧಾರವೊಂದನ್ನು ತಗೆದುಕೊಂಡಿದ್ದಾರೆ. ಆ ನಿರ್ಧಾರವನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಮನುಷ್ಯ ಸತ್ತ ಮೇಲೆ ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ. ಹಾಗಾಗಿ ಈ ಮಣ್ಣದಲ್ಲಿ ದೇಹ ಮಣ್ಣಾಗುವ ಬದಲು ಉಪಯೋಗವಾಗಲಿ ಎಂದಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ.
ಸಾಮಾನ್ಯವಾಗಿ ಕಣ್ಣು ದಾನ ಮಾಡಿರುವುದನ್ನು ಕೇಳಿದ್ದೇವೆ. ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವರು ಕಣ್ಣು ದಾನ ಮಾಡುವುದರ ಮೂಲಕ ಜಗತ್ತಿಗೆ ಮಾದರಿಯ ನಡೆಯನ್ನು ಹಾಕಿಕೊಟ್ಟಿದ್ದಾರೆ. ಸಂಚಾರಿ ವಿಜಯ್ ಅವರ ಕುಟುಂಬ ವಿಜಯ್ ಅವರ ಅಂಗಾಂಗ ದಾನ ಮಾಡುವ ಮೂಲಕ ಮಾದರಿ ಆಯಿತು. ಇದೀಗ ವಿಜಯ್ ದೇವರಕೊಂಡ ಕೂಡ ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ:ದೊಡ್ಮನೆ ರಣರಂಗ: ರೂಪೇಶ್ ಶೆಟ್ಟಿ ಶರ್ಟ್ ಕಿತ್ತೆಸೆದ ಪ್ರಶಾಂತ್ ಸಂಬರ್ಗಿ
ತಮಗೆ ಇಂಥದ್ದೊಂದು ಯೋಚನೆ ಬಂದಿದ್ದು ವೈದ್ಯ ವಿದ್ಯಾರ್ಥಿಗಳನ್ನು ನೋಡಿದಾಗ ಮತ್ತು ಅವರೊಂದಿಗೆ ಮಾತನಾಡಿದಾಗ ಎಂದು ವಿಜಯ್ ತಿಳಿಸಿದ್ದಾರೆ. ಅಂಗಾಂಗ ದಾನ ಮಾಡುವಂತಹ ಅಪರೂಪದ ನಡೆಗೆ ವಿಜಯ್ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಇದು ಇತರರಿಗೂ ಮಾದರಿ ಆಗಲಿ ಎಂದು ಅಭಿಮಾನಿಗಳು ವಿಜಯ್ ನಡೆಯನ್ನು ಪ್ರಶಂಸಿಸಿದಿದ್ದಾರೆ.
ರಶ್ಮಿಕಾ ಮಂದಣ್ಣ ಕಾರಣದಿಂದಾಗಿ ವಿಜಯ್ ದೇವರಕೊಂಡ ಕರ್ನಾಟಕದ ಪ್ರೇಕ್ಷಕರಿಗೂ ತೀರಾ ಹತ್ತಿರವಾದರು. ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಈ ಹಿಂದೆ ಇಬ್ಬರು ಮಧ್ಯ ಮನಸ್ತಾಪವಾಗಿ ಲವ್ ಬ್ರೇಕ್ ಅಪ್ ಆಗಿದೆ ಎಂದು ಹೇಳಲಾಗಿತ್ತು. ಆದರೆ, ಮೊನ್ನೆಯಷ್ಟೇ ಇಬ್ಬರೂ ಒಟ್ಟಾಗಿ ಹೋಗಿ ವಿದೇಶ ಪ್ರವಾಸವನ್ನು ಮೂಗಿಸಿಕೊಂಡು ಬಂದು ಎಲ್ಲ ಗಾಸಿಪ್ ಗೂ ತೆರೆ ಎಳೆದಿದ್ದಾರೆ.