ವಿಜಯ್ ದೇವರಕೊಂಡ (Vijay Devarakonda) ಸಿನಿಮಾಗಿಂತ ವೈಯಕ್ತಿಕ ವಿಚಾರವಾಗಿಯೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಇದೀಗ ಮತ್ತೆ ರಶ್ಮಿಕಾ ಜೊತೆಗಿನ ಮದುವೆ ಬಗ್ಗೆ ನಟನಿಗೆ ಪ್ರಶ್ನೆಯೊಂದು ಕೇಳಲಾಗಿದೆ. ಮದುವೆ ಬಗ್ಗೆ ವಿಜಯ್ ಓಪನ್ ಆಗಿ ಮಾತನಾಡಿದ್ದಾರೆ. ಇದನ್ನೂ ಓದಿ: ತ್ರಿಷಾ ಜೊತೆ ರೊಮ್ಯಾನ್ಸ್.. ಅಭಿರಾಮಿಗೆ ಲಿಪ್‌ಲಾಕ್ – ಕಮಲ್ ಹಾಸನ್ ʻಥಗ್ ಲೈಫ್ʼ!
ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ಕೇಳಾದ ಪ್ರಶ್ನೆಗೆ ಒಂದಲ್ಲಾ ಒಂದು ದಿನ ಮದುವೆ (Wedding) ಆಗೋದಾಗಿ ಹೇಳಿದ್ದಾರೆ. ಆಗ ರಶ್ಮಿಕಾ ಮಂದಣ್ಣಗೆ (Rashmika Mandanna) ನಿಮ್ಮ ಪತ್ನಿಯಾಗುವ ಗುಣ ಇದೆಯೇ? ಎಂದು ವಿಜಯ್‌ಗೆ ಕೇಳಲಾಗಿದೆ. ಒಳ್ಳೆಯ ಮನಸ್ಸು ಇರುವ ಯಾವ ಹುಡುಗಿಯಾದರೂ ಸರಿ ಎಂದಿದ್ದಾರೆ. ಇದನ್ನೂ ಓದಿ:‘ಸಿತಾರೆ ಜಮೀನ್ ಪರ್’ ಗೆ ಬಾಯ್ಕಾಟ್ ಭಯ – ತ್ರಿವರ್ಣ ಧ್ವಜ ಡಿಪಿ ಹಾಕಿದ ಆಮೀರ್ ಖಾನ್!
ರಶ್ಮಿಕಾ ತುಂಬಾ ಹಾರ್ಡ್‌ವರ್ಕ್ ಮಾಡುತ್ತಾರೆ. ದೃಢ ಸಂಕಲ್ಪದಿಂದ ಏನು ಬೇಕಾದರೂ ಸಾಧಿಸುತ್ತಾರೆ. ತಮಗಿಂತ ಬೇರೆಯವರ ಖುಷಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಎಲ್ಲವನ್ನು ಬ್ಯಾಲೆನ್ಸ್ ಮಾಡೋದನ್ನು ಆಕೆ ಕಲಿಯಬೇಕು ಎಂದಿದ್ದಾರೆ ವಿಜಯ್ ದೇವರಕೊಂಡ.
ಸಾಕಷ್ಟು ಸಮಯದಿಂದ ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ಮಾಡ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ರಶ್ಮಿಕಾ ಬರ್ತ್‌ಡೇಯಂದು ದೂರದ ದೇಶಕ್ಕೆ ತೆರಳಿದ್ದರು. ಇಲ್ಲಿ ವಿಜಯ್ ಕೂಡ ಭಾಗಿಯಾಗಿದ್ದರು ಎಂಬುದಕ್ಕೆ ಪುಷ್ಠಿ ನೀಡುವಂತಹ ಫೋಟೋಗಳು ವೈರಲ್ ಆಗಿತ್ತು.
ಅಂದಹಾಗೆ, ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಸಿನಿಮಾಗಳಲ್ಲಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದರು. ಈ ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. ಇಬ್ಬರ ಕೆಮಿಸ್ಟ್ರಿಯನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದರು.