ಶ್ರೀಲೀಲಾ ಔಟ್, ವಿಜಯ್ ದೇವರಕೊಂಡಗೆ ಮತ್ತೆ ರಶ್ಮಿಕಾ ಮಂದಣ್ಣ ನಾಯಕಿ

Public TV
1 Min Read
rashmika mandanna 1 2

ಟಾಲಿವುಡ್‌ನಲ್ಲಿ ಕನ್ನಡತಿಯರ ದರ್ಬಾರ್ ಜೊತೆ ಪೈಪೋಟಿ ಕೂಡ ಜೋರಾಗಿದೆ. ಶ್ರೀಲೀಲಾ(Sreeleela) ನಟಿಸಿಬೇಕಿದ್ದ ಸಿನಿಮಾಗೆ ರಶ್ಮಿಕಾ ಮಂದಣ್ಣ (Rashmika Mandanna) ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ದೇವರಕೊಂಡ (Vijay Devarakonda) ಜೊತೆ ಶ್ರೀಲೀಲಾ ನಾಯಕಿಯಾಗಿ ನಟಿಸಬೇಕಿದ್ದ ಚಿತ್ರದಿಂದ ಔಟ್ ಆಗಿದ್ದಾರೆ. ಮತ್ತೆ 3ನೇ ಬಾರಿ ವಿಜಯ್- ರಶ್ಮಿಕಾ ಒಂದಾಗ್ತಿದ್ದಾರೆ.

sreeleela

‘ಜೆರ್ಸಿ’ ಡೈರೆಕ್ಟರ್ ಗೌತಮ್ ನಾಯ್ಡು ತಿಣ್ಣನುರಿ ನಿರ್ದೇಶನದಲ್ಲಿ ಹೊಸ ಸಿನಿಮಾವೊಂದು ಮೇನಲ್ಲಿ ಅನೌನ್ಸ್ ಆಗಿತ್ತು. ವಿಜಯ್ ದೇವರಕೊಂಡಗೆ ಶ್ರೀಲೀಲಾ ನಾಯಕಿ ಎಂದು ಸಿನಿಮಾದ ಮುಹೂರ್ತ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನೆರವೇರಿತ್ತು. ಆದರೆ ಈಗ ಕೊಂಚ ಬದಲಾವಣೆ ಆಗಿದೆ. ವಿಜಯ್ ಚಿತ್ರವನ್ನು ಶ್ರೀಲೀಲಾ ಕೈಬಿಟ್ಟಿದ್ದಾರೆ.

RASHMIKA MANDANNA 2

9ಕ್ಕೂ ಹೆಚ್ಚು ಸಿನಿಮಾಗಳಿಗೆ ನಾಯಕಿಯಾಗಿರುವ ಕಿಸ್ ಬೆಡಗಿ ಶ್ರೀಲೀಲಾ, ಡೇಟ್ ಸಮಸ್ಯೆಯಿಂದ ಗೌತಮ್- ವಿಜಯ್ ಕಾಂಬೋ ಸಿನಿಮಾವನ್ನು ಕೈಬಿಟ್ಟಿದ್ದಾರೆ. ಹಾಗಾಗಿ ನಾಯಕಿ ಪಾತ್ರಕ್ಕೆ ರಶ್ಮಿಕಾನೇ ಸೂಕ್ತ ಎಂದೇನಿಸಿ ಚಿತ್ರತಂಡ ಫೈನಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

rashmika mandanna 1 2

ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ವಿಜಯ್- ರಶ್ಮಿಕಾ ಜೋಡಿ ಮೋಡಿ ಮಾಡಿತ್ತು. ಈಗ ಮತ್ತೆ 3ನೇ ಬಾರಿ ಈ ಜೋಡಿ ಒಂದಾಗುತ್ತಿದೆ. ಇದನ್ನೂ ಓದಿ:ಸಾವಿರ ಕೋಟಿ ಕ್ಲಬ್ ಸೇರಿದ ಶಾರುಖ್ ನಟನೆಯ ‘ಜವಾನ್’ ಸಿನಿಮಾ

ವಿಜಯ್- ರಶ್ಮಿಕಾ ಫ್ಯಾನ್ಸ್ ಈ ಸುದ್ದಿ ಕೇಳಿ ಥ್ರಿಲ್ ಆಗಿದ್ದಾರೆ. ಸಿನಿಮಾತಂಡದಿಂದ ಅಧಿಕೃತ ಘೋಷಣೆ ಆಗಲಿ ಅಂತಾ ಕಾಯುತ್ತಿದ್ದಾರೆ. ರವಿತೇಜ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿದ್ದರು. ಆ ಚಿತ್ರತಂಡದಿಂದ ಕೂಡ ನಟಿ ಹೊರಬಂದರು. ಆ ಪ್ರಾಜೆಕ್ಟ್ ಕೂಡ ರಶ್ಮಿಕಾ ಪಾಲಾಯ್ತು. ಇದೀಗ ವಿಜಯ್ ಸಿನಿಮಾ ಕೂಡ ಶ್ರೀವಲ್ಲಿ ಕೈ ಸೇರಿದೆ. ಒಟ್ನಲ್ಲಿ ಗೀತಾ ಗೋವಿಂದಂ ಸಿನಿಮಾ ಜೋಡಿ ಮತ್ತೆ ಮೋಡಿ ಮಾಡೋದನ್ನ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article