ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್- ಡಾರ್ಲಿಂಗ್ ಪ್ರಭಾಸ್ ಕಾಂಬೋ ಸಲಾರ್ ಸಿನಿಮಾ ರಿಲೀಸ್ ಆಗೋದ್ದಕ್ಕೆ ಡಿಸೆಂಬರ್ 22ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸಲಾರ್ ಅಡ್ಡಾದಿಂದ ಬ್ರೇಕಿಂಗ್ ನ್ಯೂಸ್‌ವೊಂದು ಸಿಕ್ಕಿದೆ. ಪ್ರಭಾಸ್-ನೀಲ್ (Prashanth Neel) ತಂಡಡ ಜೊತೆ ವಸಿಷ್ಠ ಸಿಂಹ ಕೂಡ ಸೇರಿಕೊಂಡಿದ್ದಾರೆ. ಹಾಗಾದ್ರೆ ಏನದು ಅಪ್‌ಡೇಟ್? ಇಲ್ಲಿದೆ ಮಾಹಿತಿ.
‘ಸಲಾರ್’ ಸಿನಿಮಾ 2 ಭಾಗಗಳಾಗಿ ತೆರೆಗೆ ಬರೋದ್ದಕ್ಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಹಾಗಾಗಿ ರಿಲೀಸ್‌ಗೆ ತಡವಾಗುತ್ತಿದೆ. ಕಾಲಿನ ಶಸ್ತ್ರ ಚಿಕಿತ್ಸೆಯ ಬಳಿಕ ಪ್ರಭಾಸ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಪ್ರಚಾರ ಕಾರ್ಯಕ್ಕೆ ಸದ್ಯದಲ್ಲೇ ಪ್ರಭಾಸ್ ಭಾಗಿಯಾಗಲಿದ್ದಾರೆ.
ಈಗ ‘ಸಲಾರ್'(Salaar) ಟೀಮ್‌ಗೆ ‘ಕೆಜಿಎಫ್’ (KGF) ವಿಲನ್ ವಸಿಷ್ಠ ಸಿಂಹ (Vasista Simha) ಸೇರಿಕೊಂಡಿದ್ದಾರೆ. ಪ್ರಭಾಸ್ (Prabhas) ಪಾತ್ರಕ್ಕೆ ಕಂಚಿನ ಕಂಠದ ನಟ ವಸಿಷ್ಠ ಸಿಂಹ್ ಧ್ವನಿ ನೀಡುತ್ತಿದ್ದಾರೆ. 5 ಭಾಷೆಯಲ್ಲಿ ಸಲಾರ್ ಸಿನಿಮಾ ಮೂಡಿ ಬರುತ್ತಿದೆ. ಅದರಲ್ಲಿ ಕನ್ನಡ ವರ್ಷನ್‌ನಲ್ಲಿ ಪ್ರಭಾಸ್‌ಗೆ ವಸಿಷ್ಠ ಡಬ್ಬಿಂಗ್ ಮಾಡ್ತಿದ್ದಾರೆ. ಸದ್ಯ ಈ ಖುಷಿ ಖಬರ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ಕಾರ್ತಿಕ್‌ಗೆ ‘ಬಳೆಗಳ ರಾಜ’ ಎಂದು ಟೀಕಿಸಿದ ವಿನಯ್ ಗೌಡ
‘ಸಲಾರ್’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಪ್ರಭಾಸ್ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಸಾಲು ಸಾಲು ಸೋಲುಗಳನ್ನೇ ಕಂಡಿರೋ ಪ್ರಭಾಸ್‌ಗೆ ‘ಸಲಾರ್’ ಮೂಲಕ ಗೆಲುವು ಸಿಗುತ್ತಾ? ಕಾದುನೋಡಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]