ಹೈದರಾಬಾದ್: ಟಾಲಿವುಡ್ ನಟ ವರುಣ್ ತೇಜ್ ಅವರು ನಟಿ ಸಾಯಿ ಪಲ್ಲವಿ ಅವರನ್ನು ಮದುವೆ ಆಗಬೇಕೆಂದು ಹೇಳಿದ್ದಾರೆ.
ಇತ್ತೀಚೆಗೆ ನಟ ವರುಣ್ ತೇಜ್ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ “ಫೀಟ್ ಅಪ್ ವಿತ್ ಸ್ಟಾರ್ಸ್ ತೆಲುಗು” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರೂಪಕಿ ಲಕ್ಷ್ಮಿ ಮಂಚು, ವರುಣ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ನಿರೂಪಕಿ ಲಕ್ಷ್ಮಿ ಅವರು, ನೀವು ಯಾವ ನಟಿಯನ್ನು ಕೊಲೆ ಮಾಡುತ್ತೀರಾ, ಯಾವ ನಟಿಯನ್ನು ಮದುವೆ ಆಗುತ್ತೀರಾ ಹಾಗೂ ಯಾವ ನಟಿ ಜೊತೆ ಸುತ್ತಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಪ್ರಶ್ನೆಗಳಿಗೆ ನಟಿಯರಾದ ರಾಶಿ ಖನ್ನಾ, ಸಾಯಿ ಪಲ್ಲವಿ ಹಾಗೂ ಪೂಜಾ ಹೆಗಡೆ ಹೆಸರನ್ನು ಹೇಳುತ್ತಾರೆ.
ಈ ವೇಳೆ ವರುಣ್ ಅವರು, ನಾನು ನಟಿ ರಾಶಿ ಖನ್ನಾ ಅವರನ್ನು ಕೊಲೆ ಮಾಡುತ್ತೇನೆ. ನಟಿ ಸಾಯಿ ಪಲ್ಲವಿಯನ್ನು ಮದುವೆ ಆಗುತ್ತೇನೆ ಹಾಗೂ ಪೂಜಾ ಹೆಗಡೆ ಜೊತೆ ಸುತ್ತಾಡಲು ಇಷ್ಟಪಡುತ್ತೇನೆ ಎಂದು ಉತ್ತರಿಸಿದ್ದಾರೆ.
ಈ ಹಿಂದೆ ನಟಿ ಸಮಂತಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರೂಪಕಿ ನಿಮ್ಮ ಬೆಡ್‍ರೂಂ ಸೀಕ್ರೆಟ್ ಹೇಳಿ ಎಂದು ಪ್ರಶ್ನಿಸಿದ್ದಾರೆ. ಮೊದಲು ಸಮಂತಾ ಇದಕ್ಕೆ ನಿರಾಕರಿಸುತ್ತಾರೆ. ನಂತರ ಚೈತನ್ಯ ಅವರ ಮೊದಲ ಪತ್ನಿ ದಿಂಬು. ನಾನು ಚೈತನ್ಯ ಅವರಿಗೆ ಕಿಸ್ ಮಾಡಬೇಕು ಎಂದರೆ ದಿಂಬು ಯಾವಾಗಲೂ ನಮ್ಮಿಬ್ಬರ ನಡುವೆ ಬರುತ್ತದೆ ಎಂದು ಹೇಳಿದ್ದಾರೆ.