ಉಪೇಂದ್ರ ನಟನೆಯ ‘ಯುಐ’ (UI) ಸಿನಿಮಾ ಮತ್ತು ಸುದೀಪ್ ನಟನೆಯ ‘ಮ್ಯಾಕ್ಸ್’ (Max) ಡಿಸೆಂಬರ್‌ನಲ್ಲಿ ರಿಲೀಸ್‌ಗೆ ಸಜ್ಜಾಗಿದೆ. ಹೀಗಿರುವಾಗ ‘ಯುಐ’ ಸುದ್ದಿಗೋಷ್ಠಿಯಲ್ಲಿ ಈಗಾಗಲೇ ಸುದೀಪ್ ಹೇಳಿರುವ ಮಾತಿಗೆ ಉಪ್ಪಿ ರಿಯಾಕ್ಟ್ ಮಾಡಿದ್ದಾರೆ. ಉಪೇಂದ್ರ ಗುರು, ನಾನು ಶಿಷ್ಯ ಎಂದ ಸುದೀಪ್ (Sudeep) ಮಾತಿಗೆ ನಟ ರಿಯಾಕ್ಟ್ ಮಾಡಿದ್ದಾರೆ.
Advertisement
ಸುದೀಪ್ ಶಿಷ್ಯ, ನಾನು ಗುರು ಹಾಗೇ ಇರಲಿ. ನಮ್ಮ ನಡುವೆ ಏನೂ ಇಲ್ಲ. ಅವರು ಹೇಳಿದ್ಮೇಲೆ ನಾನು ಏನು ಮಾತನಾಡೋದಿದೆ. ‘ಮ್ಯಾಕ್ಸ್’ ಮತ್ತು ‘ಯುಐ’ ಒಂದೇ ತಿಂಗಳಲ್ಲಿ ರಿಲೀಸ್ ಆಗುತ್ತಿದೆ. ಅದೆಷ್ಟೋ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗಿ ಸಕ್ಸಸ್ ಕಂಡಿದ್ದು ಇದೆ. ಒಬ್ಬರಿಗೊಬ್ಬರ ಬೆಂಬಲ ನೀಡೋಣ. ಸುದೀಪ್ ಕೂಡ ನಮ್ಮ ಸಿನಿಮಾಗೆ ಟ್ವಿಟ್ ಮಾಡಿದ್ದಾರೆ. ಅವರಿಗೂ ಒಳ್ಳೆಯದಾಗಲಿ ಎಂದು ಹೇಳುತ್ತೇನೆ ಎಂದು ಸುದೀಪ್ ಕುರಿತು ಉಪೇಂದ್ರ (Upendra) ಮಾತನಾಡಿದರು.
Advertisement
Advertisement
ಅಂದಹಾಗೆ, ನಿನ್ನೆ (ಡಿ.1) ನಡೆದ ‘ಮ್ಯಾಕ್ಸ್’ ಚಿತ್ರದ ಪ್ರೆಸ್ ಮೀಟ್‌ನಲ್ಲಿ ಸುದೀಪ್ ಮಾತನಾಡಿ, ಉಪೇಂದ್ರ ಅವರು ಚಿತ್ರರಂಗಕ್ಕೆ ಬಹಳಷ್ಟು ಕೊಡುಗೆ ಕೊಟ್ಟಿದ್ದಾರೆ. ಅವರು ದೊಡ್ಡ ಸೂಪರ್ ಸ್ಟಾರ್. ನಾವೆಲ್ಲಾ ಅವರನ್ನು ನೋಡಿ ಕಲಿತುಕೊಂಡು ಬಂದವರು. ಉಪೇಂದ್ರ ಅವರಿಗೆ ಇಲ್ಲದೇ ಇರೋ ತಲೆನೋವು ನಂಗ್ಯಾಕೆ? ನಿಮಗ್ಯಾಕೆ? ಅವರೇ ಎಲ್ಲೂ ಮಾತನಾಡ್ತಾ ಇಲ್ಲ. ನಾವು ಯಾಕೆ ಸಿನಿಮಾ ರಿಲೀಸ್ ಮಾಡ್ತಾ ಇದ್ದೇವೆ ಎಂಬುದು ಅವರಿಗೂ ಗೊತ್ತು ಎಂದು ಸುದೀಪ್ ಹೇಳಿದ್ದಾರೆ. ನನ್ನ ಸಿನಿಮಾ ಅಲ್ಲದಿದ್ದರೂ, ಉಪೇಂದ್ರ ಸಿನಿಮಾ ನೋಡಿ ಎಂದಿದ್ದರು.
Advertisement
UI ಸಿನಿಮಾ ಡಿ.20ರಂದು ಬರಲಿದೆ. ‘ಮ್ಯಾಕ್ಸ್’ ಡಿ.25ಕ್ಕೆ ರಿಲೀಸ್ ಆಗಲಿದೆ. ಇದರಲ್ಲಿ ಯಾವುದೇ ಕ್ಲ್ಯಾಶ್ ಇಲ್ಲ. ಗುರು ಬರುತ್ತಾ ಇದ್ದಾರೆ, ಸ್ವಲ್ಪ ದಿನ ಬಿಟ್ಟು ನಾನು ಶಿಷ್ಯ ಬರುತ್ತಿದ್ದೇನೆ. ಚಿತ್ರರಂಗದಲ್ಲಿ ಯಾವುದೇ ಕ್ಲ್ಯಾಶ್ ಇಲ್ಲ ಎಂದು ಉಪೇಂದ್ರ ಪರ ಸುದೀಪ್ ಬ್ಯಾಟ್ ಬೀಸಿದರು.