‘ಯುಐ’ ಸಿನಿಮಾದ ಪ್ರಮೋಷನ್‌ಗಾಗಿ ಹೈದರಾಬಾದ್‌ಗೆ ತೆರಳಿದ್ದ ಉಪೇಂದ್ರ ಅವರು ಪುಷ್ಪಾ 2 ನಟ ಅಲ್ಲು ಅರ್ಜುನ್ ಭೇಟಿಯಾಗಿದ್ದಾರೆ.
ಜೈಲಿಂದ ಹೊರಬಂದ ಅಲ್ಲು ಅರ್ಜುನ್ ಅವರನ್ನು ಶನಿವಾರ ಉಪೇಂದ್ರ ಅವರು ಭೇಟಿಯಾಗಿದ್ದಾರೆ. ಇದೇ ವೇಳೆ, ಲಹರಿ ಮ್ಯೂಸಿಕ್‌ನ ಲಹರಿ ವೇಲು ಅವರು ಸಹ ಉಪಸ್ಥಿತರಿದ್ದರು.
ಯುಐ ಸಿನಿಮಾದ ಪ್ರಮೋಷನ್‌ಗಾಗಿ ‘ಯುಐ’ ತಂಡ ಹೈದ್ರಾಬಾದ್‌ಗೆ ತೆರಳಿತ್ತು. ಇದೇ ವೇಳೆ ಅಲ್ಲು ಅರ್ಜುನ್ ಮನೆಗೆ ತಂಡ ಭೇಟಿ ಕೊಟ್ಟಿದೆ. ಉಪೇಂದ್ರ ಅವರನ್ನು ಕಂಡೊಡನೆ ಖುಷಿಯಿಂದ ತಬ್ಬಿಕೊಂಡು ಅಲ್ಲು ಅರ್ಜುನ್ ಕುಶಲೋಪರಿ ವಿಚಾರಿಸಿದರು.
ಈ ಹಿಂದೆ ‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾದಲ್ಲಿ ಈ ಇಬ್ಬರೂ ನಟರು ಒಟ್ಟಿಗೆ ನಟಿಸಿದ್ದರು.
ಉಪ್ಪಿ ನಟಿಸಿ ನಿರ್ದೇಶನ ಮಾಡಿದ ‘ಯುಐ’ ಚಿತ್ರಕ್ಕೆ ಬಾಲಿವುಡ್‌ನಿಂದ ಆಮೀರ್ ಖಾನ್ ಸಾಥ್ ನೀಡಿದ್ದಾರೆ. ಸಿನಿಮಾದ ಟ್ರೈಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಬಾಲಿವುಡ್ ನಟ ತಾನು ಉಪ್ಪಿ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದರು. ಈಗ ಟಾಲಿವುಡ್‌ನಿಂದ ಪುಷ್ಪರಾಜ್ ಸಾಥ್ ಸಾಥ್ ನೀಡಿದ್ದಾರೆ. ಡಿ.20 ಕ್ಕೆ ವಿಶ್ವದಾದ್ಯಂತ ಅಬ್ಬರಿಸೋಕೆ ‘ಯುಐ’ ಸಜ್ಜಾಗಿದೆ.