ಬೆಂಗಳೂರು: ಕೊರೊನಾದಿಂದ ದೇಶದ್ಯಾಂತ ಆರ್ಥಿಕ ನಷ್ಟ ಉಂಟಾಗಿದೆ. ಇನ್ನೂ ಲಾಕ್‍ಡೌನ್‍ನಿಂದಾಗಿ ಬಡವರು, ಕೂಲಿ ಕಾರ್ಮಿಕರು ಮತ್ತು ನಿರ್ಗತಿಕರು ಸೇರಿದಂತೆ ಅನೇಕರು ಊಟವಿಲ್ಲದೆ ಪರಾಡುತ್ತಿದ್ದಾರೆ. ಅಂತಹವರಿಗೆ ಅನೇಕರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಚಿತ್ರರಂಗದ ದಿನಗೂಲಿ ಕಾರ್ಮಿಕರಿಗೆ ಸಹಾಯದ ಹಸ್ತ ಚಾಚಿದ್ದಾರೆ.
ಲಾಕ್‍ಡೌನ್‍ನಿಂದ ಸಿನಿಮಾ, ಸೀರಿಯಲ್ ಶೂಟಿಂಗ್ ಬಂದ್ ಆಗಿದೆ. ಇದರಿಂದ ಅನೇಕ ಚಿತ್ರರಂಗದ ದಿನಗೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹವರಿಗೆ ನಟ-ನಟಿಯರು ಹಣದ ಸಹಾಯ ಮಾಡಿದ್ದಾರೆ. ಈಗ ಉಪೇಂದ್ರ ಅವರು ಕನ್ನಡ ಚಲನಚಿತ್ರ ಕಾರ್ಮಿಕ ಸಂಘಗಳ ಒಕ್ಕೂಟಕ್ಕೆ 4,50,000 ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ.
Advertisement
ಕನ್ನಡ ಚಲನಚಿತ್ರ ಕಾರ್ಮಿಕ ಸಂಘಗಳ ಒಕ್ಕೂಟದ ಒಟ್ಟು ಹದಿನೆಂಟು ಸಂಘಗಳಿಗೆ ತಲಾ 25 ಸಾವಿರದಂತೆ 4,50,000/- ರೂಗಳನ್ನು ನೀಡುತ್ತಿದ್ದೇನೆ. ಆದಷ್ಟು ಬೇಗ ಈ ಕರೋನ ಸಮಸ್ಯೆಯಿಂದ ಎಲ್ಲರೂ ಹೊರಬರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ನಿಮ್ಮ ಜೊತೆ ಎಂದೆಂದೂ ನಾನಿರುತ್ತೇನೆ ವಿಶ್ವಾಸವಿರಲಿ ???????????? pic.twitter.com/4LZOikfrT3
— Upendra (@nimmaupendra) April 13, 2020
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಉಪೇಂದ್ರ ಅವರು, “ಕನ್ನಡ ಚಲನಚಿತ್ರ ಕಾರ್ಮಿಕ ಸಂಘಗಳ ಒಕ್ಕೂಟದ ಒಟ್ಟು ಹದಿನೆಂಟು ಸಂಘಗಳಿಗೆ ತಲಾ 25 ಸಾವಿರದಂತೆ 4,50,000 ರೂಗಳನ್ನು ನೀಡುತ್ತಿದ್ದೇನೆ. ಆದಷ್ಟು ಬೇಗ ಈ ಕೊರೊನಾ ಸಮಸ್ಯೆಯಿಂದ ಎಲ್ಲರೂ ಹೊರಬರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ, ನಿಮ್ಮ ಜೊತೆ ಎಂದೆಂದೂ ನಾನಿರುತ್ತೇನೆ, ವಿಶ್ವಾಸವಿರಲಿ” ಎಂದು ತಿಳಿಸಿದ್ದಾರೆ.
Advertisement
ನಟ ಉಪೇಂದ್ರ ಅವರು ನಿರ್ಮಾಪಕರ, ಚಲನಚಿತ್ರ ಮಂಡಳಿಯ ಸಾ.ರಾ.ಗೋವಿಂದು ಅವರಿಗೆ ಚೆಕ್ ನೀಡಿದ್ದಾರೆ. ಲಾಕ್‍ಡೌನ್ ಪರಿಣಾಮ ಸಾ.ರಾ.ಗೋವಿಂದು ಅವರು ಉಪೇಂದ್ರ ಮನೆಗೆ ಹೋಗಿ ಚೆಕ್ ಪಡೆದುಕೊಂಡಿದ್ದಾರೆ.