ಉಪ್ಪಿ ರಾಜಕಾರಣಕ್ಕೆ ಎಂಟ್ರಿ-ಹೇಗಿರಲಿದೆ ಉಪ್ಪಿ ಪಕ್ಷ? ಇಲ್ಲಿದೆ ಉತ್ತರ

Public TV
3 Min Read
uppi 2

ಬೆಂಗಳೂರು: ಸ್ಯಾಂಡಲ್‍ವುಡ್ ರಿಯಲ್ ಸ್ಟಾರ್ ಉಪೇಂದ್ರ ರಾಜಕಾರಣಕ್ಕೆ ಎಂಟ್ರಿ ಆಗುವುದಾಗಿ ಅಧಿಕೃತವಾಗಿ ಹೇಳಿದ್ದಾರೆ. ಆದರೆ ಉಪ್ಪಿ ಮಾತ್ರ ಯಾವ ರಾಜಕೀಯ ಪಕ್ಷವನ್ನೂ ಸೇರಿಕೊಳ್ಳದೇ ತಮ್ಮದೇ ಆದ ಹೊಸ ಪಕ್ಷವನ್ನು ಕಟ್ಟಿಕೊಳ್ಳುವ ಸಿದ್ಧತೆಯಲ್ಲಿ ತೊಡಗಿಕೊಳ್ಳಲಿದ್ದಾರೆ.

ಇಂದು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪೇಂದ್ರ, ಹೊಸ ಹೊಸ ಐಡಿಯಾಗಳ ಮೂಲಕ ಉಪ್ಪಿ ಪಕ್ಷವನ್ನು ಕಟ್ಟಲಿದ್ದಾರೆ. ಈ ಪಕ್ಷದಲ್ಲಿ ಯಾರು ಬೇಕಾದರೂ ಸೇರಿಕೊಳ್ಳಬಹುದು. ಪಕ್ಷಕ್ಕೆ ಬರುವ ಅಭ್ಯರ್ಥಿಗಳಿಗೆ ಕೆಲವು ಅರ್ಹತೆಗಳನ್ನು ನಿಗದಿ ಮಾಡಲಾಗುತ್ತದೆ. ನಿಮ್ಮಲ್ಲಿರುವ ಹೊಸ ಐಡಿಯಾಗಳ ಕುರಿತು ಮೇಲ್ ಮಾಡಿ. ಹೊಸ ಐಡಿಯಾಗಳಿಗಾಗಿ ಒಂದು ವೇದಿಕೆ ನಿರ್ಮಾಣವಾಗಲಿದೆ ಅಂದ್ರು.

ಕಾರ್ಮಿಕ ಬೇಕು: ನಮ್ಮ ಪಕ್ಷಕ್ಕೆ ಸೇವೆ ಮಾಡುವವರು ಬೇಕಾಗಿಲ್ಲ. ಸಂಬಳಕ್ಕೆ ಕೆಲಸ ಮಾಡುವ ಪ್ರಾಮಾಣಿಕ ಕಾರ್ಮಿಕರು ಬೇಕು. ಹಾಗಾಗಿ ಇಂದು ನಾನು ಖಾಕಿ ಬಟ್ಟೆಯನ್ನು ಧರಿಸಿದ್ದೇನೆ. ಇಲ್ಲಿ ಯಾರು ಯಾರಿಗೆ ಸೇವೆ ಮಾಡುತ್ತಿಲ್ಲ. ಜನಸಾಮನ್ಯರೇ ಜನನಾಯಕರಿಗೆ ಸಂಬಳ ಕೊಡ್ತಾಯಿದ್ದಾರೆ. ನಾಗರೀಕರು ಕಟ್ಟುವ ತೆರಿಗೆ ಹಣ ಪಾರದರ್ಶಕವಾಗಿ ಬಳಸಬೇಕು. ಇದು ಪ್ರಜಾಕೀಯದ ಮೊದಲ ಉದ್ದೇಶವಾಗಿದೆ ಅಂದ್ರು.

uppi 3

ನಮ್ಮ ಪ್ರಜಾಕಾರಣಕ್ಕೆ ಈಗಾಗಲೇ ಮೂರು ಮೇಲ್ ಐಡಿಗಳು ಕ್ರಿಯೇಟ್ ಮಾಡಲಾಗಿದೆ. ಇದರಲ್ಲಿ ನಿಮ್ಮಲ್ಲಿರುವ ಹೊಸ ಐಡಿಯಾಗಳನ್ನು ಮೇಲ್ ಮಾಡಬಹುದು ಹಾಗು ನಿಮ್ಮ ಪರಿಚಯವನ್ನು ತಿಳಿಸಬಹುದು. ಹೊಸ ಹೊಸ ಐಡಿಯಾಗಳನ್ನು ಒಂದೆಡೆ ಸಂಗ್ರಹಿಸುವುದೇ ಗ್ರೇಟೆಸ್ಟ್ ಐಡಿಯಾ ಎಂದು ಹೇಳಿದರು.

ಈ ಕೆಳಗಿನಂತಿವೆ ಹೊಸ ಮೇಲ್ ಐಡಿಗಳು
1. prajakarana1@gmail.com
2. prajakarana2@gmail.com
3. prajakarana3@gmail.com

ನಮ್ಮ ಪಕ್ಷಕ್ಕೆ ದುಡ್ಡು ಇರುವವರು ಬರಬೇಕೆಂಬ ನಿಯಮವಿಲ್ಲ. ಏನೂ ಇಲ್ಲದವರು ಸಹ ನಮ್ಮ ಪಕ್ಷಕ್ಕೆ ತಮ್ಮ ಕ್ರಿಯೇಟಿವ್ ಐಡಿಯಾ ಗಳ ಮೂಲಕ ಸೇರಿಕೊಳ್ಳಬಹುದು. ಏನೂ ಇಲ್ಲದೇ ಇದ್ರೂ ಎಲ್ಲವನ್ನು ಸಾಧಿಸಬಹದು ಎಂಬ ನಂಬಿಕೆಯ ಮೇಲೆ ನಾನು ರಾಜಕಾರಣಕ್ಕೆ ಬಂದವನನು. ಹಣವನ್ನು ವಿನಿಯೋಗಿಸದೆ ಪಕ್ಷವನ್ನು ಕಟ್ಟುತ್ತೀದ್ದೇನೆ. ಹಾಗಾಗಿ ಎಲ್ಲರಿಗೂ ನನ್ನ ಪಕ್ಷಕ್ಕೆ ಆಹ್ವಾನ ಕೊಡುತ್ತಿದ್ದೇನೆ. ನಾನೊಬ್ಬ ಜನಸಾಮನ್ಯ, ಯಾವ ಕೆಲಸವನ್ನು ಉಚಿತವಾಗಿ ಮಾಡುವುದಿಲ್ಲ. ಅದಕ್ಕಾಗಿ ನನಗೆ ಸಂಬಳ ಸಿಗುತ್ತದೆ. ಸಂಬಳಕ್ಕಾಗಿ ದುಡಿಯುವ ಪ್ರಾಮಣಿಕ ನೌಕರನಾಗಿರುತ್ತೇನೆ ಅಂದ್ರು.

ಪಕ್ಷಕ್ಕೆ ಇದೂವರೆಗೂ ಯಾವುದೇ ಹೆಸರು ಮತ್ತು ಚಿಹ್ನೆಯನ್ನು ಅಂತಿಮಗೊಳಿಸಿಲ್ಲ. ಇದರ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅಸ್ತಿತ್ವದಲ್ಲಿರುವ ಪಕ್ಷಗಳ ನಿಯಮಗಳಿಗೆ ನನ್ನ ನಿಯಮಗಳು ತುಂಬಾ ಭಿನ್ನವಾಗಿವೆ. ಹಾಗಾಗಿ ಯಾವ ಪಕ್ಷವನ್ನೂ ಸೇರಿಕೊಳ್ಳವುದಿಲ್ಲ ಅಂದ್ರು.

158106

ಇಂದು ನಗರಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನ ಭೇಟಿಯಾಗ್ತೀರಾ ಎಂಬ ಪ್ರಶ್ನೆಗೆ ನನಗೆ ಗೊತ್ತಿಲ್ಲ ಎಂದು ಹೇಳಿ ಉಪ್ಪಿ ಮುಗಳ್ನಕ್ಕರು. ಜನ ನನ್ನನ್ನು ರಾಜಕೀಯಕಕ್ಕೆ ಕರೆದಿದ್ದಾರೆ. ಮಧ್ಯದಲ್ಲಿ ಕೈ ಬಿಡುವ ಪ್ರಶ್ನೆಯಿಲ್ಲ. ಸದ್ಯ ನಾನು ಕೆಲಸ ಮಾಡುತ್ತೇನೆ. ಭವಿಷ್ಯದಲ್ಲಿ ಏನಾಗುತ್ತೆ ಎಂಬುದು ಗೊತ್ತಿಲ್ಲ ಅಂದ್ರು.

ಮುಂದೆ ಅಧಿಕಾರಕ್ಕೆ ಬರದೇಯಿದ್ದರೆ ಪಕ್ಷವನ್ನು ಕೈ ಬಿಡ್ತೀರಾ ಎಂಬ ಪ್ರಶ್ನೆಗೆ ಉಪ್ಪಿ ಉತ್ತರಿಸಿ, ನಮ್ಮ ಪಕ್ಷ ನಂಬಿಕೆಯ ಆಧಾರದ ಮೇಲೆ ನಡೆಯುತ್ತಿದೆ ಎನ್ನುವ ವಿಶ್ವಾಸ ನನಗಿದೆ ಅಂದ್ರು.

ಸಿನಿಮಾದಿಂದ ದೂರ ಉಳಿತಾರಾ ಉಪ್ಪಿ?: ಇಷ್ಟು ದಿನ ನಾನು ಬೇರೊಬ್ಬ ನಿರ್ಮಾಪಕರಿಗೆ ಡೇಟ್ ಕೊಟ್ಟಿದ್ದೆ. ಈಗ ಯಾವುದೇ ಸಿನಿಮಾಗಳಿಗೆ ಸಹಿ ಹಾಕಿಲ್ಲ. ಅಭಿಮಾನಿಗಳು ನನ್ನನ್ನು ಯಾಕೆ ರಿಯಲ್ ಸ್ಟಾರ್ ಅಂತಾ ಕರೆದರೋ ಗೊತ್ತಿಲ್ಲ. ಇಂದು ರಿಯಲ್ ಆಗಿ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದೇನೆ. ಇದೇ ನನ್ನ 50ನೇ ಸಿನಿಮಾ ಅಗಬಹುದು ಎಂದರು. ಎಲ್ಲಾ ಪಕ್ಷಗಳಿಗೂ ಒಂದು ಡೆಡ್‍ಲೈನ್ ಅಂತಾ ಇರುತ್ತೆ. ಆದ್ರೆ ನಮ್ಮದು ಲೈಫ್ ಲೈನ್ ಪಕ್ಷ ಎಂದು ಹೇಳಿದರು.

 

Share This Article
Leave a Comment

Leave a Reply

Your email address will not be published. Required fields are marked *