ಈಗಾಗಲೇ ಬೆಂಗಳೂರಿನ ಕತ್ರಿಗುಪ್ಪೆ (Katriguppe) ಏರಿಯಾದಲ್ಲಿ ಭವ್ಯವಾದ ಬಂಗಲೆ ಹೊಂದಿರುವ ರಿಯಲ್ ಸ್ಟಾರ್ ಉಪೇಂದ್ರ (Upendra), ಇದೀಗ ಮತ್ತೊಂದು ಪ್ರತಿಷ್ಠಿತ ಹಾಗೂ ದುಬಾರಿ ಏರಿಯಾದಲ್ಲಿ ಹೊಸ ಮನೆಯೊಂದನ್ನು (New House) ಖರೀದಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಸದಾಶಿವನಗರದಲ್ಲಿ(Sadashivnagar) ಅವರು ಹೊಸ ಮನೆ ಖರೀದಿಸಿದ್ದಾರೆ. ಈ ಏರಿಯಾದಲ್ಲಿ ಡಾ.ರಾಜ್ ಕುಮಾರ್ ಸೇರಿದಂತೆ ಅನೇಕ ಗಣ್ಯರ ಮನೆಗಳಿವೆ. ಹಾಗೂ ಅನೇಕ ರಾಜಕಾರಣಿಗಳ ನಿವಾಸಗಳು ಇದೇ ಏರಿಯಾದಲ್ಲಿವೆ.
ಈಗಾಗಲೇ ಹೊಸ ಮನೆಯ ಗೃಹಪ್ರವೇಶ ಕೂಡ ಆಗಿದ್ದು, ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು ಹಾಗೂ ಗಣ್ಯರು ಭಾಗಿಯಾಗಿದ್ದಾರೆ. ಸ್ಯಾಂಕಿ ಟ್ಯಾಂಕ್ ಹತ್ತಿರದಲ್ಲೇ ಈ ನಿವಾಸವಿದ್ದು, ಶನಿವಾರ ಅಧಿಕೃತವಾಗಿ ಗೃಹಪ್ರವೇಶ ಮಾಡಿದ್ದಾರಂತೆ ಉಪ್ಪಿ ಮತ್ತು ಪ್ರಿಯಾಂಕಾ (Priyanka Upendra). ಮುಂದಿನ ದಿನಗಳಲ್ಲಿ ಕತ್ರಿಗುಪ್ಪೆ ನಿವಾಸದಿಂದ ಈ ಮನೆಗೆ ಶಿಫ್ಟ್ ಆಗಲಿದ್ದಾರೆ ರಿಯಲ್ ಸ್ಟಾರ್.
ಸಂಗೀತ ನಿರ್ದೇಶಕ ಗುರುಕಿರಣ್, ಹಿರಿಯ ನಟಿ ಸರೋಜಾ ದೇವಿ ಸೇರಿದಂತೆ ಹಲವಾರು ನಟಿಯರು ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆ ಫೋಟೋಗಳನ್ನು ಉಪ್ಪಿ ದಂಪತಿ ಹಂಚಿಕೊಂಡಿದ್ದಾರೆ. ಇದೊಂದು ಕುಟುಂಬದ ಕಾರ್ಯಕ್ರಮವಾಗಿದ್ದರಿಂದ ಆಪ್ತರಿಗಷ್ಟೇ ಆಹ್ವಾನ ನೀಡಿದ್ದರಂತೆ ಉಪ್ಪಿ ದಂಪತಿ. ಇದನ್ನೂ ಓದಿ:ಒಂದು ಇಡ್ಲಿ, ಒಂದು ವಡೆ ತಗೊಂಡು ಗಲಾಟೆ ಮಾಡಿದ ರಾಖಿ ಸಾವಂತ್
2003ರಲ್ಲಿ ಕತ್ರಿಗುಪ್ಪೆ ಮನೆಯನ್ನು ಕಟ್ಟಿಸಿದ್ದ ಉಪೇಂದ್ರ, ಆ ಮನೆಯಲ್ಲೇ ಆಫೀಸು, ಜಿಮ್ ಹೊಂದಿದ್ದರು. ತಂದೆ ತಾಯಿ ಜೊತೆ ಅದೇ ಮನೆಯಲ್ಲೇ ವಾಸವಾಗಿದ್ದರು. ಹಲವು ವರ್ಷಗಳಿಂದ ಈ ಮನೆ ತೊರೆದು ರುಪ್ಪಿ ರೇಸಾರ್ಟ್ ಗೆ ಸ್ಥಳಾಂತರಗೊಳ್ಳಬೇಕು ಎಂಬ ಆಲೋಚನೆ ಮಾಡಿದ್ದರು. ಆದರೆ, ಆ ಯೋಚನೆ ಬಿಟ್ಟು ಸದಾಶಿವ ನಗರಕ್ಕೆ ಶಿಫ್ಟ್ ಆಗುತ್ತಿದ್ದಾರೆ.