ಬಿಗ್ ಬಾಸ್ ಮನೆಯ ಆಟ (Bigg Boss Kannada 11) ಇನ್ನೇನು 4 ದಿನಗಳಲ್ಲಿ ಅಂತ್ಯವಾಗಲಿದೆ. ಹೀಗಿರುವಾಗಲೇ ಭವ್ಯಾಗೆ ಪತ್ರ ಬರೆದು ತಮ್ಮ ಮನದಾಳದ ಮಾತನ್ನು ತ್ರಿವಿಕ್ರಮ್ ಅವರು ಹೇಳಿಕೊಂಡಿದ್ದಾರೆ. ಸ್ಪರ್ಧಿಗಳ ಎದುರು ಭವ್ಯಾಗೆ (Bhavya Gowda) ಐ ಲವ್ ಯೂ ಎಂದು ತ್ರಿವಿಕ್ರಮ್ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಿವೃತ್ತಿ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ- ಶ್ರೀವಲ್ಲಿ ಅಭಿಮಾನಿಗಳು ಶಾಕ್

View this post on Instagram
ಈ ವೇಳೆ, ಇದೆಲ್ಲ ವೋಟ್ ಪಡೆಯಲು ಮಾಡಿದ ತಂತ್ರ ಎಂದು ಹನುಮಂತಗೆ ಅನ್ನಿಸಿರಬಹುದು. ಇದಕ್ಕಾಗಿ ಅವರು, ಏನ್ ಆಡ್ತಾರಿ ಆಟಾನ ಎಂದರು. ಈ ಮಾತನ್ನು ಕೇಳಿ ಎಲ್ಲರೂ ನಕ್ಕರು.
ಇನ್ನೂ ಈ ಮೊದಲು ಭವ್ಯಾಗೆ ತ್ರಿವಿಕ್ರಮ್ ಅವರು ಪ್ರಪೋಸ್ ಕೂಡ ಮಾಡಿದ್ದರು. ಹೊರ ಹೋದ ಬಳಿಕ ಆ ಬಗ್ಗೆ ಯೋಚಿಸೋಣ ಎಂದು ಭವ್ಯಾ ಅವರು ನೇರವಾಗಿ ಹೇಳಿಕೊಂಡಿದ್ದರು. ಇದು ವೀಕೆಂಡ್ ಪಂಚಾಯಿತಿಯಲ್ಲಿ ಸುದೀಪ್ ಮುಂದೆ ಚರ್ಚೆ ಕೂಡ ಆಗಿತ್ತು. ಆದರೆ ಇಬ್ಬರೂ ಪ್ರೀತಿಸುತ್ತಿರೋದಾಗಿ ಒಪ್ಪಿಕೊಂಡಿಲ್ಲ. ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದಷ್ಟೇ ಮಾತನಾಡಿದರು.


