BollywoodCinemaLatestMain Post

ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದೊಂದು ಕೊಲೆ ಅಂದ ಸಹೋದರಿ

Advertisements

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ಶುರುವಾಗಿದೆ. ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಎನ್.ಸಿ.ಬಿ ಅವರು ಚಾರ್ಜ್ ಶೀಟ್ ಸಲ್ಲಿಸಿದ ಬೆನ್ನಲ್ಲೇ ಈ ಕೇಸ್ ಗೆ ಮತ್ತೊಂದು ತಿರುವು ಸಿಕ್ಕಿದೆ. ಎನ್.ಸಿಬಿ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಗೆ ರಿಯಾ ಚಕ್ರವರ್ತಿ ಗಾಂಜಾ ಮುಂತಾದ ಮಾದಕ ವಸ್ತುಗಳನ್ನು ಪೂರೈಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಚಾರ್ಜ್ ಶೀಟ್ ಸಲ್ಲಿಕೆ ಆಗುತ್ತಿದ್ದಂತೆಯೇ ಈ ಕೇಸ್ ಕುರಿತು ಮಾತನಾಡಿರುವ ಸುಶಾಂತ್ ಸಹೋದರಿ ಪ್ರಿಯಾಂಕಾ ಸಿಂಗ್, ಅದೊಂದು ಆತ್ಮಹತ್ಯೆಯಲ್ಲ ವ್ಯವಸ್ಥಿತ ಕೊಲೆ ಎಂದು ಮತ್ತೆ ಆರೋಪಿಸಿದ್ದಾರೆ. ಮೊದಲಿನಿಂದಲೂ ಇವರು ಅದನ್ನು ಕೊಲೆ ಎಂದೇ ಹೇಳಿಕೊಂಡು ಬಂದಿದ್ದಾರೆ. ತಾವು ಕ್ರಿಮಿನಲ್ ಲಾಯರ್ ಕೂಡ ಆಗಿರುವುದರಿಂದ ಅನೇಕ ಆತ್ಮಹತ್ಯೆ ಕೇಸುಗಳನ್ನು ತಾವು ನೋಡಿರುವುದಾಗಿ ಹೇಳಿದ್ದಾರೆ. ಅಲ್ಲದೇ ಆತ್ಮಹತ್ಯೆ ಕೇಸ್ ಗೂ ಮತ್ತು ಕೊಲೆ ಕೇಸ್ ನಡುವಿನ ವ್ಯತ್ಯಾಸದ ಕುರಿತೂ ಅವರು ಮಾತನಾಡಿದ್ದಾರೆ.ಇದನ್ನೂ ಓದಿ:ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಫ್ಯಾಶನ್‌ ಡಿಸೈನರ್‌ ಮಸಾಬ ಗುಪ್ತಾ

ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಯುತ್ತಿದ್ದಂತೆಯೇ ಆ ಅಪಾರ್ಟ್ ಮೆಂಟ್ ಗೆ ಹೋಗಿದ್ದ ಸಹೋದರಿ ಅನುಮಾನಾಸ್ಪದ ರೀತಿಯಲ್ಲಿದ್ದ ಮೃತದೇಹದ ಕುರಿತೂ ಮಾತನಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳ ನಾಲಿಗೆ ಹೊರಚಾಚಿರುತ್ತದೆ. ಕಣ್ಣುಗಳು ಹೊರಗೆ ಬಂದಿರುತ್ತವೆ. ಆದರೆ, ನನ್ನ ಸಹೋದರನಲ್ಲಿ ಅದ್ಯಾವುದೂ ಕಾಣಲಿಲ್ಲ. ಅವನು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ ಎಂದು ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇನ್ನೂ ತಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button