ಕೋವಿಡ್ ಕಾರಣಗಳಿಂದ ಕಳೆದ ಕೆಲವು ವರ್ಷಗಳಿಂದ ನಿಂತಿದ್ದ `ಕರ್ನಾಟಕ ಚಲನಚಿತ್ರ ಕಪ್’ (KARNATAKA CHALANACHITRA CUP) ಈಗ ಮತ್ತೊಮ್ಮೆ ಚಾಲನೆ ಸಿಕ್ಕಿದೆ. ಸಿನಿಮಾ ಕೆಲಸದಿಂದ ಬ್ರೇಕ್ ಪಡೆದು ಚಿತ್ರರಂಗದ ಕಲಾವಿದರು ಕ್ರಿಕೆಟ್ (Cricket) ಆಟಕ್ಕಾಗಿ `ಕೆಸಿಸಿ’ಗಾಗಿ (Kcc) ಸಾಥ್ ನೀಡುತ್ತಿದ್ದರು. ಈಗ ಈ ವರ್ಷ ನಡೆಯಲಿರುವ ಕೆಸಿಸಿ ಮೂರನೇ ಆವೃತ್ತಿಯಲ್ಲಿ ಏನೆಲ್ಲ ಇರಲಿದೆ ಎನ್ನುವ ಬಗ್ಗೆ ಸುದೀಪ್ (Sudeep) ಮಾತನಾಡಿದ್ದಾರೆ.
Advertisement
ಕಳೆದ ಎರಡು ಸೀಸನ್‌ಗಳಲ್ಲಿ ಹಲವರು ಕೆಸಿಸಿಯಲ್ಲಿ ಆಡಿದ್ದಾರೆ. ಇನ್ನೂ ಕೆಲವರು ಇದರಲ್ಲಿ ಪಾಲ್ಗೊಂಡಿಲ್ಲ. ಕೆಲವರಿಗೆ ಸುದೀಪ್ ಕಡೆಯಿಂದ ಆಹ್ವಾನ ಹೋಗಿಲ್ಲ ಎನ್ನುವ ಮಾತುಗಳು ಬಂದಿದ್ದವು. ಇದಕ್ಕೆ ಸುದೀಪ್ ಈ ವರ್ಷ ಆರಂಭದಲ್ಲೇ ಉತ್ತರ ನೀಡಿದ್ದಾರೆ. ನಾವು ಚಿತ್ರರಂಗದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಇದನ್ನೂ ಓದಿ: ತೆಲುಗು ಯುವನಟ ಸುಧೀರ್ ಆತ್ಮಹತ್ಯೆ: ಚಿತ್ರೋದ್ಯಮಕ್ಕೆ ಮತ್ತೊಂದು ಆಘಾತ
Advertisement
Advertisement
ಕೆಲವರಿಗೆ ಈ ಟೂರ್ನಿಯಲ್ಲಿ ಆಡೋಕೆ ಇಷ್ಟ ಇರಲ್ಲ. ಅಂಥವರು ಬರಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ. ಚಿತ್ರರಂಗ ನನ್ನ ಸ್ವತ್ತಲ್ಲ. ಹೀಗಾಗಿ, ನಾವು ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಅವರವರ ಶೆಡ್ಯೂಲ್ ನೋಡಿಕೊಂಡು ಬರುತ್ತಾರೆ ಎಂದು ಸುದೀಪ್ ಸೋಮವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾತನಾಡಿದ್ದಾರೆ.
Advertisement
ಕಳೆದ ವರ್ಷದಂತೆ ಈ ವರ್ಷವೂ ಕೂಡ ಆರು ಅಂತಾರಾಷ್ಟ್ರೀಯ ಆಟಗಾರರು ಇರುತ್ತಾರೆ. ಸಿನಿಮಾ ರಂಗದವರು ಇರುತ್ತಾರೆ. ಬೇರೆ ಚಿತ್ರರಂಗದವರೂ ಆಡೋಕೆ ಬರಬಹುದು. ರಾಜಕೀಯ ಹಾಗೂ ಮಾಧ್ಯಮದವರು ಕೂಡ ಇದರಲ್ಲಿ ಭಾಗಿ ಆಗಬಹುದು ಎಂದು ಸುದೀಪ್ ಹೇಳಿದ್ದಾರೆ.
ಕೆಸಿಸಿ ಸೀಸನ್- 3 ಟೂರ್ನಿಯಲ್ಲಿ ಸುದೀಪ್ ಜೊತೆ ಶಿವರಾಜ್‌ಕುಮಾರ್, ಗಣೇಶ್, ಡಾಲಿ ಧನಂಜಯ್ ಮುಂತಾದವರು ಭಾಗವಹಿಸುತ್ತಾರೆ. ಈ ಪಂದ್ಯವು ಫೆ.11 ಮತ್ತು 12ರಂದು ನಡೆಯಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k