ಬೆಂಗಳೂರು: ದಿವಂಗತ ಹಿರಿಯ ನಟ ಅಂಬರೀಶ್ ಇಹಲೋಕ ತ್ಯಜಿಸಿ ಇಂದಿಗೆ ಒಂದು ವಾರ ಕಳೆದಿದೆ. ಆದರೂ ಅವರ ಸಾವಿನ ದುಃಖ ಇನ್ನೂ ಕಾಡುತಿದೆ. ನಟ ಕಿಚ್ಚ ಸುದೀಪ್ ಅವರು ಅಂಬರೀಶ್ ಅವರ 35 ವರ್ಷದ ಹಳೆಯ ಫೋಟೋವನ್ನು ಹಾಕಿ ಅಂಬಿ ನೆನೆದು ಭಾವುಕರಾಗಿದ್ದಾರೆ.
ನಟ ಅಂಬರೀಶ್ ಅವರನ್ನು ಸುದೀಪ್ ತುಂಬಾ ಪ್ರೀತಿಸುತ್ತಿದ್ದರು. ಸುದೀಪ್ ಪ್ರೀತಿಯಿಂದ ಅಂಬರೀಶ್ ಅವರನ್ನು ಮಾಮ ಎಂದು ಕರೆಯುತ್ತಿದ್ದರು. ಆದ್ದರಿಂದ ಅವರ ಸಾವಿನ ನೋವನ್ನು ಮರೆಯಲು ಸಾಧ್ಯವಾಗಿಲ್ಲ. ಅವರೆ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. ಸುದೀಪ್ ಅಂಬರೀಶ್ ಅವರ 35 ವರ್ಷದ ಹಿಂದಿನ ಫೋಟೋವನ್ನು ಟ್ವೀಟ್ ಮಾಡಿ ಅಂಬಿ ನೆನೆದು ಭಾವುಕರಾಗಿದ್ದಾರೆ.
ಸುದೀಪ್, “ಈ ಫೋಟೋ 35 ವರ್ಷದ ಹಳೆಯದ್ದಾಗಿದೆ. ಮಾಮ ಮತ್ತು ಅಪ್ಪನ ಹಿಂದಿನ ಫೋಟೋ. ಆಗ ಮಾಮನಿಗೆ 31 ವರ್ಷ ಆಗಿರಬಹುದು. ನಾವೆಲ್ಲರೂ ಜೀವನದಲ್ಲಿ ತುಂಬಾ ಸಮಯ ಇದೆ ಎಂದು ಭಾವಿಸುತ್ತೇವೆ. ಆದರೆ ಎಷ್ಟು ಬೇಗ ಮಾಮನಿಗೆ 66 ವರ್ಷ ವಯಸ್ಸಾಯ್ತು. ಎಷ್ಟು ಬೇಗ ನಮ್ಮನ್ನು ಅಗಲಿ ಹೋಗಿದ್ದಾರೆ. ಆದರೆ ಈಗಲೂ ನಾನು ಅವರ ಅಗಲಿಕೆಯನ್ನು ನಂಬಲು ಸಾಧ್ಯವಾಗುತ್ತಿಲ್ಲ” ಎಂದು ಭಾವುಕರಾಗಿ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.
ನಟ ಅಂಬರೀಶ್ ದಿನಾಂಕ 24 ರಂದು ಅನಾರೋಗ್ಯದ ಕಾರಣ ಮೃತಪಟ್ಟಿದ್ದರು. ಅಂದು ರಾತ್ರಿಯೇ ಸುದೀಪ್ ಸುದ್ದಿ ತಿಳಿದ ತಕ್ಷಣ ಆಸ್ಪತ್ರೆಗೆ ದೌಡಾಯಿಸಿ ಬಂದು ಅಂಬರೀಶ್ ಮಾಮನನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದರು.
Beloved Mama n appa(centre).. Pic taken almost 35 years back… Mama would have been 31 then….
How soon he got to 66 n how soon he's gone.
N We all think we have soo mch time.
His absence is something I still am Unable to accept. pic.twitter.com/dFEWFX9EYO
— Kichcha Sudeepa (@KicchaSudeep) November 30, 2018