ಕನ್ನಡದ ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ರಂಗೇರಿದೆ. ತಮ್ಮ ಮುಗ್ಧತೆಯಿಂದ ಜನರ ಮನಸ್ಸನ್ನು ಗೆದ್ದಿರುವ ಹನುಮಂತ ಇದೀಗ ಸುದೀಪ್ ಮನಸ್ಸನ್ನು ಕೂಡ ಗೆದ್ದಿದ್ದಾರೆ. ಆಡಿದ ಮಾತಿನಂತೆ ಸುದೀಪ್ (Sudeep) ಅವರು ಕುರಿಗಾಹಿ ಹನುಮಂತಗೆ ವಿಶೇಷ ಗಿಫ್ಟ್‌ವೊಂದನ್ನು ಕಳುಹಿಸಿದ್ದಾರೆ. ಇದನ್ನೂ ಓದಿ:BBK 11: ಕೊನೆಗೂ ಅನಾವರಣ ಆಯ್ತು ಶೋಭಾ ಶೆಟ್ಟಿ ಅಸಲಿ ಮುಖ
ದೊಡ್ಮನೆಯಲ್ಲಿರುವ ಹನುಮಂತಗೆ (Hanumantha) ಸುದೀಪ್ ಸ್ಪೆಷಲ್ ಗಿಫ್ಟ್‌ವೊಂದನ್ನು ನೀಡಿದ್ದಾರೆ. ಬ್ರಾಂಡೆಡ್ ಬಟ್ಟೆಗಳು, ಹೊಸ ಚಡ್ಡಿ, ಲುಂಗಿಯನ್ನು ಕಳುಹಿಸಲಾಗಿದೆ. ಸುದೀಪ್ ಕಳುಹಿಸಿದ ಉಡುಗೊರೆ ನೋಡಿ ಹನುಮಂತ ಭಾವುಕರಾಗಿದ್ದಾರೆ. ಅವರು ಕೊಟ್ಟಿರುವ ಉಡುಗೊರೆ ನೋಡಿದ್ರೆ, ನನಗೆ ನಂಬೋಕೆ ಆಗುತ್ತಿಲ್ಲ. ಅಷ್ಟೊಂದು ಖುಷಿಯಾಗುತ್ತಿದೆ. ಧನ್ಯವಾದಗಳು ಸರ್ ಎಂದಿದ್ದಾರೆ.
ಹೊಸ ಬಟ್ಟೆಗಳ ಜೊತೆ ಚಡ್ಡಿ ಇರೋದನ್ನು ನೋಡಿ ʻಮಾವೋ 3 ಸಾವಿರದ ಚಡ್ಡಿʼ ಎಂದು ಹನುಮಂತ ನಕ್ಕಿದ್ದಾರೆ. ಇದರೊಂದಿಗೆ ವಿಶೇಷ ಕವನವೊಂದನ್ನು ಸುದೀಪ್ ಬರೆದು ಕಳುಹಿಸಿದ್ದಾರೆ. ಇದನ್ನೂ ಓದಿ:ದುಬೈನಲ್ಲಿ ಸ್ಯಾಂಡಲ್‌ವುಡ್ ನಟಿಮಣಿಯರ ಮಸ್ತಿ
ಮೈಯ ಮುಚ್ಚೋ ಬಟ್ಟೆ ನೋಡಿ ಮಾನವ ಅಳೆಯಬ್ಯಾಡ್ರಿ
ಮನಸ ತೋರೋ ನಗುವ ನೋಡದೆ ಸುಮ್ಮನೆ ಇರಬ್ಯಾಡ್ರಿ
ಕುರಿಯ ಕಾಯೋ ಕುರಿಗಾಹಿ ಕೊಡುತಾನೋ ಕಂಬಳಿ
ಜಗವ ಕಾಯೋ ರೈತ ಸ್ನೇಹಿ ನೀಡುತಾನೋ ಅಂಬಲಿ
ಲೋ ತಮ್ಮ ಹನುಮಂತ ದಿನವೂ ಜಳಕ ಮಾಡೋ
ದಿನ ದಿನವೂ ಪದವ ಕಟ್ಟಿ ಹೊಸ ಹಾಡ ಹಾಡೋ
‘ಇಂತಿ ನಿಮ್ಮ ಬಾದ್‌ಷಾ ಕಿಚ್ಚ’
View this post on Instagram
ಕಳೆದ ವಾರಾಂತ್ಯದಲ್ಲಿ ಸುದೀಪ್ ಅವರು ಹನುಮಂತಗೆ ಪ್ರತಿದಿನ ನೀವ್ಯಾಕೆ ಸ್ನಾನ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದರು. ಆಗ ನನ್ನ ಬಳಿ 4ರಿಂದ 5 ಬಟ್ಟೆಗಳಿವೆ. ಪ್ರತಿದಿನ ಸ್ನಾನ ಮಾಡಿದ್ರೆ ಪದೇ ಪದೇ ಬಟ್ಟೆ ಒಗೆಯಬೇಕು ಎಂದು ಹನುಮಂತ ಉತ್ತರಿಸಿದರು. ಅವರ ಮಾತು ಕೇಳಿದ ಸುದೀಪ್, ನಿಮ್ಮ ಬಟ್ಟೆಯ ಅಳತೆ ನಮಗೆ ಕೊಡಿ. ನಮ್ಮ ಡಿಸೈನರ್‌ಗೆ ಹೇಳಿ ನಿಮಗೆ ಬಟ್ಟೆ ಕಳುಹಿಸುತ್ತೇನೆ ಎಂದು ಸುದೀಪ್ ಹೇಳಿದ್ದರು. ಇದೀಗ ಕೊಟ್ಟ ಮಾತನ್ನು ಅವರು ಪೂರೈಸಿದ್ದಾರೆ. ಕಿಚ್ಚನ ನಡೆಗೆ ಅಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ. ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಕೂಡ ಖುಷಿಪಟ್ಟಿದ್ದಾರೆ.