– ಈ ದೇಶದಲ್ಲಿ ಇದೀವಿ ಅಂದ್ರೆ ಕಾನೂನಿನ ಮೇಲೆ ನಂಬಿಕೆ ಇರಬೇಕು ಎಂದ ಸುದೀಪ್
– ಸುದೀಪ್ ರಾಜಕೀಯಕ್ಕೆ ಬರ್ತಾರಾ?
ಬೆಂಗಳೂರು: ಸಿನಿಮಾಗೆ ಬರೋಲ್ಲ, ಸಿನಿಮಾ ನೋಡಲ್ಲ ಎನ್ನುವಾಗಲೇ ಗತ್ತು-ಗಾಂಭೀರ್ಯದಿಂದ ನುಗ್ಗಲಿಲ್ವಾ ಎರಡು ಸಿನಿಮಾ ಎನ್ನುವ ಮೂಲಕ ದರ್ಶನ್ (Darshan) ಅಭಿಮಾನಿಗಳಿಗೆ ನಟ ಸುದೀಪ್ (Sudeep) ಪರೋಕ್ಷವಾಗಿ ಟಾಂಗ್ ಕೊಟ್ಟರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುದೀಪ್, ಸಿನಿಮಾಗೆ ಬರೊಲ್ಲ, ಸಿನಿಮಾ ನೋಡೊಲ್ಲ ಅನ್ನೋವಾಗ್ಲೆ. ಗತ್ತು ಗಾಂಭಿರ್ಯದಿಂದ ನುಗ್ಗಲಿಲ್ವಾ ಎರಡು ಸಿನಿಮಾ? ಯಾರು ಬರೊಲ್ಲ, ಬರೊಲ್ಲ ಅಂತಾ ಹೇಳ್ತಿದ್ರಲ್ಲ ಸಿನಿಮಾಗೆ ಈಗೇನ್ ಹೇಳ್ತೀರಾ? ಗಣೇಶ್, ದುನಿಯಾ ವಿಜಯ್ ಸಿನಿಮಾಗಳು ಸಕ್ಸಸ್ ಆಯ್ತಲ್ಲ ಎಂದು ಚಾಟಿ ಬೀಸಿದರು. ಇದನ್ನೂ ಓದಿ: BB Season 11 | ಬೇರೆಯವರನ್ನು ನೋಡ್ಬೇಕು ಅಂತಾ ನಾನು ವೇಟ್ ಮಾಡ್ತಾ ಇದೀನಿ: ಸುದೀಪ್
ಬಳ್ಳಾರಿ ಜೈಲಲ್ಲಿ ದರ್ಶನ್ ಬಗ್ಗೆ ಕೇಳಿದ ಪ್ರಶ್ನೆ ಕುರಿತು ಮಾತನಾಡಿ, ದರ್ಶನ್ ಅವರು ಹೊರಗಡೆ ಕರ್ಸಿ ಅಂತ ನಾ? ನಾನು ಒಳಗಡೆ ಹೋಗ್ಲಿ ಅಂತಾ ನಾ? ದರ್ಶನ್ ಅವರಿಗೆ ಅಂತಾ ಫ್ಯಾನ್ಸ್ ಇದ್ದಾರೆ, ಕುಟುಂಬ ಇದೆ. ಯಾರಿಗೂ ನೋವು ಕೊಡೋದಕ್ಕೆ ಇಷ್ಟ ಪಡುವುದಿಲ್ಲ. ರಾಜಕೀಯವಾಗಿ ಮಾತಾಡ್ತಿದ್ದೀನಿ ಅನ್ಕೋಬೇಡಿ. ಈ ದೇಶದಲ್ಲಿ ಇದೀವಿ ಅಂದ್ರೆ ಕಾನೂನಿನ ಮೇಲೆ ನಂಬಿಕೆ ಇರಬೇಕು ಎಂದು ಹೇಳಿದರು.
ಕಾನೂನು, ಸರ್ಕಾರದ ಮೇಲೆ ನಂಬಿಕೆಯಿದೆ. ನಿಮ್ಮ ಮಾಧ್ಯಮಗಳ ಮೂಲಕವೇ ನಮಗೆ ವಿಚಾರ ಗೊತ್ತಾಗ್ತಿರೋದು. ಆಗಬೇಕಾಗಿರೋದು ಆಗುತ್ತೆ. ಕೋರ್ಟ್ ಅಂತಾ ಇರುತ್ತೆ ಎಂದು ಮಾತನಾಡಿದರು. ಇದನ್ನೂ ಓದಿ: ಪವಿತ್ರಾ ಗೌಡ ಮನೆಯಲ್ಲಿ ಸೊರಗಿ ಹೋಗಿದ್ದ ಶ್ವಾನಗಳು ದರ್ಶನ್ ಮನೆಗೆ ಶಿಫ್ಟ್
ರಾಜಕೀಯಕ್ಕೆ ಬರ್ತಾರಾ ಸುದೀಪ್ ಎಂದು ಕೇಳಿದ ಪ್ರಶ್ನೆಗೆ, ನಾನು ಎಲ್ಲಿದ್ರೂ ಮಹಾರಾಜನೇ. ಎಲ್ಲಾ ಪಕ್ಷದಿಂದ ಆಫರ್ ಬಂದಿದೆ. ಅವಶ್ಯಕತೆ ಇದ್ದಾಗ ಕಾದು ನೋಡೋಣ ಸರ್ ಎಂದು ಉತ್ತರಿಸಿದರು.