ಮಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಸ್ಯಾಂಡಲ್‍ವುಡ್‍ನಿಂದ ಕೋಸ್ಟಲ್‍ವುಡ್ ಕಡೆಗೆ ಬಂದಿದ್ದು ಮಂಗಳೂರಿನಲ್ಲಿ ತುಳು ಚಿತ್ರವೊಂದರ ಆಡಿಯೋ ರಿಲೀಸ್ ಮಾಡಿದರು.
ತುಳು ಚಿತ್ರ ‘ಕಟಪಾಡಿ ಕಟ್ಟಪ್ಪೆ’ ಅನ್ನುವ ತುಳು ಚಿತ್ರದ ಆಡಿಯೋ ರಿಲೀಸ್‍ನ್ನು ಮಂಗಳೂರಿನ ಪುರಭವನದಲ್ಲಿ ನೆರೆವೇರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್ ತುಳು ಭಾಷೆಯನ್ನು ಮುಂದಿನ ದಿನಗಳಲ್ಲಿ ಮಾತನಾಡಲು ಪ್ರಯತ್ನಿಸುತ್ತೇನೆ ಅಂತಾ ಹೇಳಿದ್ರು.
Advertisement
Advertisement
ಅದ್ಧೂರಿ ಆಡಿಯೋ ರಿಲೀಸ್ ಬಳಿಕ ಮಾತನಾಡಿದ ಕಿಚ್ಚ ಸುದೀಪ್, ತುಳು ಚಿತ್ರರಂಗ ಹಾಗೂ ತುಳು ಭಾಷೆಯನ್ನು ಹಾಡಿ ಹೊಗಳಿದರು. ತನ್ನ ತಾಯಿಯೂ ತುಳುವರಾಗಿದ್ದು, ನಾನು ಮುಂದಿನ ದಿನದಲ್ಲಿ ತುಳು ಮಾತನಾಡಲು ಪ್ರಯತ್ನಿಸುತ್ತೇನೆ. ಕನ್ನಡ ಚಿತ್ರರಂಗದಿಂದ ತುಳು ಚಿತ್ರದ ಆಡಿಯೋ ರಿಲೀಸ್‍ಗೆ ನಾವೆಲ್ಲ ಬರುವಷ್ಟು ತುಳು ಚಿತ್ರರಂಗ ಬೆಳೆದಿದೆ. ಕರ್ನಾಟಕದಲ್ಲೇ ಇನ್ನೊಂದು ಭಾಷೆಯ ಚಿತ್ರದ ಆಡಿಯೋ ರಿಲೀಸ್ ಮಾಡೋದು ಖುಷಿ ತಂದಿದೆ. ಯಾವ ರಾಜ್ಯದಲ್ಲೂ ಎರಡು ಮೂರು ಭಾಷೆ ಇಲ್ಲ. ಹಾಗೆನೇ ಎರಡು ಭಾಷೆಯ ಚಿತ್ರರಂಗ ಇಲ್ಲ ಅದು ಈ ರಾಜ್ಯದಲ್ಲಿ ಮಾತ್ರ ಇರೋದು. ಕನ್ನಡ ಚಿತ್ರರಂಗಕ್ಕೆ ದುಡ್ಡು ಹಾಕುವ ನಿರ್ಮಾಪಕರು ಮಂಗಳೂರಿನಲ್ಲಿದ್ದರೂ ತಮ್ಮದೇ ಭಾಷೆಯನ್ನು ಉಳಿಸಬೇಕೆಂದು ತುಳು ಚಿತ್ರಗಳನ್ನು ಮಾಡುತ್ತಿರುವ ನಿರ್ಮಾಪಕರುಗೆ ಹ್ಯಾಟ್ಸ್ ಆಫ್ ಎಂದರು.
Advertisement
ರಾಜೇಶ್ ಬ್ರಹ್ಮಾವರ ನಿರ್ಮಾಣದ ಕಟಪಾಡಿ ಕಟ್ಟಪ್ಪೆ ಚಿತ್ರ ಈಗಾಗಲೇ ಬಹಳಷ್ಟು ನಿರೀಕ್ಷೆ ಮೂಡಿಸಿದ್ದು, ಈ ಚಿತ್ರದ ಆಡಿಯೋ ರಿಲೀಸನ್ನೂ ಕಿಚ್ಚ ಸುದೀಪ್ ರಿಲೀಸ್ ಮಾಡಿರೋದು ಇದೀಗ ಮತ್ತಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.