ಐಪಿಎಲ್ 17ನೇ ಆವೃತ್ತಿ ಶುರುವಾಗಲು ಇನ್ನೇನು ಕೆಲವು ದಿನಗಳು ಬಾಕಿಯಿದೆ. ಮಾರ್ಚ್ 19ಕ್ಕೆ ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮಕ್ಕೆ ವೇದಿಕೆ ರೆಡಿಯಾಗಿದೆ. ಆರ್ಸಿಬಿ ಮೊದಲ ಪ್ರೋಮೋದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದರು. ಬಳಿಕ ಅಶ್ವಿನಿ ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್ (Shivarajkumar) ಕಾಣಿಸಿಕೊಳ್ಳುವ ಮೂಲಕ ಆರ್ಸಿಬಿ ಹೆಸರು ಬದಲಿಸುವ ಬಗ್ಗೆ ಸುಳಿವು ನೀಡಿದ್ದರು. ಈಗ ಕಿಚ್ಚ ಸುದೀಪ್ (Actor Sudeep) ಕೂಡ ಆರ್ಸಿಬಿ ಹೊಸ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಅಪ್ಪು ನೆನಪಿನಲ್ಲಿ ಅಶ್ವಿನಿ- ಎಂದೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತ ಎಂದ ಪತ್ನಿ
Advertisement
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್ಬಾಕ್ಸ್ ಈವೆಂಟ್ ಕುರಿತ ಪ್ರೋಮೊದಲ್ಲಿ ಸುದೀಪ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಹೋಟೆಲ್ನಲ್ಲಿ ಕಿಚ್ಚ ಸ್ಟೈಲ್ ಆಗಿ ಬಂದು ಡೈನಿಂಗ್ ಟೇಬಲ್ ಮೇಲೆ ಕೂತಿದ್ದಾರೆ. ಮೂರು ಇಡ್ಲಿ ಬರತ್ತೆ. ಅದರಲ್ಲಿ ಮೂರನೆ ಇಡ್ಲಿ ಬೇಡ ಎಂದು ಬಳಿಕ ಯಾಕೆ ಅಂತ ಅರ್ಥ ಆಯ್ತಾ? ಎಂದು ಸುದೀಪ್ ಪ್ರಶ್ನೆ ಕೇಳಿದ್ದಾರೆ. ಈ ಮೂಲಕ ಅಭಿಮಾನಿಗಳ ಮನವಿಯನ್ನು ಈಡೇರಿಸುವ ಸುಳಿವು ನೀಡಿದ್ದಾರೆ.
Advertisement
Advertisement
ಆರ್ಸಿಬಿ (RCB) ಐಪಿಎಲ್ ಕ್ರಿಕೆಟ್ ತಂಡದ ಜೊತೆ ಹೊಂಬಾಳೆ ಸಂಸ್ಥೆ ಕೂಡ ಸಾಥ್ ನೀಡಿದೆ. ಆರ್ಸಿಬಿಗೆ ಡಿಜಿಟಲ್ ಪಾರ್ಟ್ನರ್ ಆಗಿ ಹೊಂಬಾಳೆ ಫಿಲ್ಮ್ ಕೈಜೋಡಿಸಿದ್ದಾರೆ. ಮಾರ್ಚ್ 22ರಿಂದ 17ನೇ ಐಪಿಎಲ್ ಸೀಸನ್ ಆರಂಭವಾಗಲಿದೆ. ಈ ಬಾರಿ ಆದರೂ ಆರ್ಸಿಬಿ ತಂಡ ಕಪ್ ಎತ್ತಿ ಹಿಡಿಯುತ್ತಾ ಎಂದು ಕ್ರಿಕೆಟ್ ಫ್ಯಾನ್ಸ್ ಎದುರು ನೋಡ್ತಿದ್ದಾರೆ.
Advertisement
ರಿಷಬ್ ಶೆಟ್ಟಿ (Rishab Shetty) ಏನು ಹೇಳ್ತಿದ್ದಾರೆ ಅರ್ಥ ಆಯ್ತಾ? ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮೊದಲ ವೀಡಿಯೋ ರಿಲೀಸ್ ಮಾಡಿದ್ದರು. ಇದರಲ್ಲಿ Bangalore ಎಂದು ಕೋಣದ ಮೇಲೆ ಬರೆದ ಕೋಣವನ್ನು ನೋಡಿ, ಭಟ್ರೆ ತಗೊಂಡೋಗಿ ಎಂದು ರಿಷಬ್ ಹೇಳುತ್ತಾರೆ. ಇದು ಅರ್ಥ ಆಯ್ತಾ? ಎಂದು ಕೇಳಿದ್ದಾರೆ. 8 ವರ್ಷಗಳ ಹಿಂದೆ ಬೆಂಗಳೂರು ಎನ್ನುವುದನ್ನು ಇಂಗ್ಲೀಷ್ನಲ್ಲಿ ಬರೆಯುವಾಗ ಮತ್ತು ಉಚ್ಛರಿಸುವಾಗ ಸಣ್ಣ ಬದಲಾವಣೆ ಮಾಡಲಾಗಿತ್ತು.
Bangalore ಎನ್ನುವುದನ್ನು Bengaluru ಎಂದು ಬದಲಾಯಿಸಿದ್ದರು. ಆರ್ಸಿಬಿ ತಂಡದ ಬಗ್ಗೆ ಮಾತನಾಡುವಾಗ ಮಾತ್ರ ಅದು Bangalore ಎಂದೇ ಇತ್ತು. ಅಭಿಮಾನಿಗಳು ಇದನ್ನು ಬದಲಿಸಿ Bengaluru ಎಂದು ಮಾಡಬೇಕು ಎಂದು ಮನವಿ ಮಾಡುತ್ತಿದ್ದರು. ರಿಷಬ್ ಶೆಟ್ಟಿ ಸ್ಪೆಷಲ್ ವಿಡಿಯೋದಲ್ಲಿ ಆ ಬಗ್ಗೆ ಸುಳಿವು ಕೊಟ್ಟಿದ್ದರು. ಈಗ ಸುದೀಪ್ ಸುಳಿವು ನೀಡಿದ್ದಾರೆ. ಮಾರ್ಚ್ 19ರಂದು ಅನ್ಬಾಕ್ಸ್ ಕಾರ್ಯಕ್ರಮ ನಡೆಯಲಿದೆ. ಆ ದಿನ ಅಧಿಕೃತವಾಗಿ ಇದು ಗೊತ್ತಾಗಲಿದೆ.