‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಶೋಗೆ ಅತೀ ಹೆಚ್ಚು ಟಿಆರ್‌ಪಿ ಗಳಿಸಿ ಮುನ್ನುಗ್ಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ದೊಡ್ಮನೆ ಆಟ ಅಂತ್ಯವಾಗಲಿದೆ. ಹೀಗಿರುವಾಗ ಮನೆಯಲ್ಲಿರುವ ಸ್ಪರ್ಧಿಗಳಿಗೆ ಸುದೀಪ್ ಸರ್ಪ್ರೈಸ್ ಕೊಟ್ಟಿದ್ದಾರೆ. ಮನೆಮಂದಿಗೆ ಕಿಚ್ಚನ ಕೈರುಚಿ ತಿನ್ನುವ ಭಾಗ್ಯ ಸಿಕ್ಕಿದೆ. ಈ ಕುರಿತ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವಾಹಿನಿ ಹಂಚಿಕೊಂಡಿದೆ.
ಮನೆಯಲ್ಲಿರುವ ಸ್ಪರ್ಧಿಗಳಿಗೆ ತಮ್ಮ ಕೈಯಾರೆ ಅಡುಗೆ ಮಾಡಿ ಸುದೀಪ್ (Sudeep) ಕಳುಹಿಸಿದ್ದಾರೆ. ಊಟ ಸವಿದು ಸ್ಪರ್ಧಿಗಳು ಖುಷಿಪಟ್ಟಿದ್ದಾರೆ. ಸ್ಪರ್ಧಿಗಳಿಗೆ ಡಿನ್ನರ್ ನೈಟ್ ಅರೆಂಜ್ ಮಾಡಿ ಅವರವರ ಅಭಿರುಚಿ ತಕ್ಕಂತೆ ಊಟವನ್ನು ಕಿಚ್ಚ ಕಳುಹಿಸಿದ್ದಾರೆ. ಇದನ್ನೂ ಓದಿ:ಈ ವಾರಾಂತ್ಯ ಮನೆಯಿಂದ ಔಟ್ ಆಗೋರು ಯಾರು?- ಟ್ವಿಸ್ಟ್ ಕೊಟ್ಟ ‘ಬಿಗ್ ಬಾಸ್’
ಸುದೀಪ್ ಕಳುಹಿಸಿದ ಊಟ ಸವಿದ ಬಳಿಕ ರಜತ್ (Rajath Kishan) ಮಾತನಾಡಿ, ಇಂತಹವೊಂದು ಸರ್ಪ್ರೈಸ್ ಅನ್ನು ಕ್ರಿಯೆಟ್ ಮಾಡೋಕೆ ನಿಮ್ಮಿಂದ ಮಾತ್ರ ಸಾಧ್ಯ ಎಂದು ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಕೈಯಲ್ಲಿ ನನ್ನ ಹೆಸರು ಬರೆದಿರೋದೆ ನನ್ನ ಭಾಗ್ಯ ಎಂದು ಚೈತ್ರಾ ಖುಷಿಪಟ್ಟಿದ್ದಾರೆ. ಇತ್ತ ಹನುಮಂತ ಮತ್ತು ಧನರಾಜ್ ನಾವು ಬಿಗ್ ಬಾಸ್‌ಗೆ ಬಂದಿದ್ದು, ಸಾರ್ಥಕವಾಯ್ತು ಎಂದು ಮಾತನಾಡಿದ್ದಾರೆ. ಒಟ್ನಲ್ಲಿ ಕಿಚ್ಚನ ಕೈ ರುಚಿಗೆ ಮನೆ ಮಂದಿ ಕಳೆದು ಹೋಗಿರೋದು ಗ್ಯಾರಂಟಿ.
ಕಳೆದ ವಾರಾಂತ್ಯ ಐಶ್ವರ್ಯಾ ಶಿಂಧೋಗಿ ಮನೆಯಿಂದ ಹೊರಬಂದಿದ್ದಾರೆ. ಆದರೆ ಈ ವಾರದಲ್ಲಿ ಎಲಿಮಿನೇಷನ್ ಟ್ವಿಸ್ಟ್ ಏನೆಂದರೆ, ಯಾವ ಸ್ಪರ್ಧಿಯೂ ಮನೆಯಿಂದ ಹೊರಗೆ ಹೋಗುತ್ತಿಲ್ಲ. ಈ ವಾರ ಫ್ಯಾಮಿಲಿ ರೌಂಡ್ ಇದ್ದ ಕಾರಣ ವೋಟಿಂಗ್ ಲೈನ್ ತೆರೆದಿಲ್ಲ. ಹಾಗಾಗಿ ಎಲಿಮಿನೇಷನ್ ಪ್ರಕ್ರಿಯೆ ನಡೆಯೋದಿಲ್ಲ. ಹಾಗಾಗಿ 9 ಸ್ಪರ್ಧಿಗಳು ಈ ವಾರ ಸೇಫ್ ಆಗಿದ್ದು, ಮುಂದಿನ ವಾರ ಯಾರ ಆಟಕ್ಕೆ ಬ್ರೇಕ್ ಬೀಳಲಿದೆ ಎಂಬುದು ಕಾದುನೋಡಬೇಕಿದೆ.
View this post on Instagram
ಇದೀಗ ಚೈತ್ರಾ ಕುಂದಾಪುರ, ರಜತ್, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ, ಗೌತಮಿ, ಉಗ್ರಂ ಮಂಜು, ಧನರಾಜ್ ಆಚಾರ್, ಹನುಮಂತ ಬಿಗ್ ಬಾಸ್ ಆಟದ ರೇಸ್‌ನಲ್ಲಿದ್ದಾರೆ. ಯಾರಿಗೆ ‘ಬಿಗ್ ಬಾಸ್’ ಗೆಲುವಿನ ಪಟ್ಟ ಸಿಗಲಿದೆ ಕಾದುನೋಡಬೇಕಿದೆ.