ಕಿಚ್ಚ ಸುದೀಪ್ (Kiccha Sudeep) ನಟನೆಯ ಬಹುನಿರೀಕ್ಷಿತ ‘ಮ್ಯಾಕ್ಸ್’ (Max Film) ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಸುದೀಪ್ ಹುಟ್ಟುಹಬ್ಬದಂದು (ಸೆ.2) ಸಿನಿಮಾ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಹೊರಬೀಳಲಿದೆ. ಅಭಿಮಾನಿಗಳ ಕಾತರಕ್ಕೆ ಸಿಹಿಸುದ್ದಿ ಸಿಗಲಿದೆ.
‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿ 3 ವರ್ಷಗಳ ನಂತರ ಮ್ಯಾಕ್ಸ್ ಚಿತ್ರದ ಮೂಲಕ ಸುದೀಪ್ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಸದ್ಯ ‘ಮ್ಯಾಕ್ಸ್’ ಸಿನಿಮಾದ ಮೊದಲ ಮಾಸ್ ಸಾಂಗ್ ಅನ್ನು ಸೆ.2ರಂದು ಬೆಳಗ್ಗೆ 6:56ಕ್ಕೆ ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ಜೊತೆ ನಟನೆಗೆ ಶಾಸಕ ಪ್ರದೀಪ್ ಈಶ್ವರ್‌ಗೆ ಅವಕಾಶ
View this post on Instagram
ಸದ್ಯ ಟೀಸರ್‌ನಿಂದ ಧೂಳೆಬ್ಬಿಸಿರುವ ‘ಮ್ಯಾಕ್ಸ್’ ಚಿತ್ರ ಮಾಸ್ ಸಾಂಗ್‌ನಿಂದ ಕಿಚ್ಚನ ಫ್ಯಾನ್ಸ್ ಜೋಶ್ ತುಂಬಲು ಕೌಂಟ್‌ಡೌನ್ ಶುರುವಾಗಿದೆ. ಸುದೀಪ್ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡ್, ಸುಕೃತಾ ವಾಗ್ಲೆ, ತಮಿಳು ನಟಿ ವರಲಕ್ಷ್ಮಿ ಸೇರಿದಂತೆ ಅನೇಕರು ನಟಿಸಿದ್ದಾರೆ.
ಅದಷ್ಟೇ ಅಲ್ಲ, ಸುದೀಪ್ ಹುಟ್ಟುಹಬ್ಬದಂದೇ (ಸೆ.2) ಅನೂಪ್ ಭಂಡಾರಿ ಜೊತೆಗಿನ ಸಿನಿಮಾ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಗಲಿದೆ. ‘ವಿಕ್ರಾಂತ್ ರೋಣ’ ಬಳಿಕ ಮತ್ತೊಮ್ಮೆ ಅನೂಪ್ ಜೊತೆ ಸುದೀಪ್ ಕೈಜೋಡಿಸಲಿದ್ದಾರೆ.