ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅಭಿಮಾನಿಗಳಿಗೆ ಗುಡ್ ನ್ಯೂಸ್‌ವೊಂದು ಸಿಕ್ಕಿದೆ. ಸುದೀಪ್ ನಟಿಸಿರುವ ಸಿನಿಮಾ ಇದೀಗ ರಿಲೀಸ್‌ಗೆ ಸಜ್ಜಾಗಿದೆ. ‘ಹೆಬ್ಬುಲಿ’ (Hebbuli) ಸಿನಿಮಾ ಮರುಬಿಡುಗಡೆಗೆ ಸಜ್ಜಾಗಿದೆ. ಇದನ್ನೂ ಓದಿ:ಡಿವೋರ್ಸ್ ಬಳಿಕ ಮಾಜಿ ಪತ್ನಿಗೆ ಪ್ರೀತಿ ತೋರಿಸಿದ ಹಾರ್ದಿಕ್- ಮತ್ತೆ ಒಂದಾಗ್ತಾರಾ?
‘ಮ್ಯಾಕ್ಸ್’ (Max) ಚಿತ್ರಕ್ಕಾಗಿ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಈಗ ಸುದೀಪ್ ನಟನೆಯ ಸೂಪರ್ ಹಿಟ್ ಚಿತ್ರ ‘ಹೆಬ್ಬುಲಿ’ (Hebbuli) ಮತ್ತೊಮ್ಮೆ ಬಿಡುಗಡೆಗೆ ರೆಡಿಯಾಗಿದೆ. ಇದೇ ಆಗಸ್ಟ್ 2ರಂದು ಹೆಬ್ಬುಲಿ ಚಿತ್ರ ತೆರೆಕಾಣಲಿದೆ.
ಸುದೀಪ್ ಜೊತೆ ಅಮಲಾ ಪೌಲ್ (Amala Paul) ಜೋಡಿಯಾಗಿ ನಟಿಸಿದ್ದರು. ‘ಗಜಕೇಸರಿ’ ಖ್ಯಾತಿಯ ಕೃಷ್ಣ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ನಿರ್ಮಾಪಕ ಉಮಾಪತಿ ನಿರ್ಮಾಣ ಮಾಡಿದ್ದರು. 7 ವರ್ಷಗಳ ನಂತರ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಈಗಾಗಲೇ ಜಾಕಿ, ಎ, ರಾಬರ್ಟ್, ಶಾಸ್ತ್ರಿ ಸಿನಿಮಾಗಳು ಮರುಬಿಡುಗಡೆಯಾಗಿ ಸದ್ದು ಮಾಡಿತ್ತು. ಹಾಗಾಗಿ ಕಿಚ್ಚನ ಸಿನಿಮಾ ರೀ ರಿಲೀಸ್ ಆಗಲಿದೆ.
ಇನ್ನೂ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ರಿಲೀಸ್ ಆಗುವ ನಿರೀಕ್ಷೆಯಿದೆ. ಅಕ್ಟೋಬರ್ ಕೊನೆಯ ವಾರದಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮ ಬರುತ್ತಿರುವ ಕಾರಣ ಅದಕ್ಕೂ ‘ಮ್ಯಾಕ್ಸ್’ ಚಿತ್ರ ಅಬ್ಬರಿಸಲಿದೆ ಎನ್ನಲಾಗಿದೆ. ಈ ಸಿನಿಮಾಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.