ಅಭಿಮಾನಿಗಳ ಕೆಲಸಕ್ಕೆ ಧನ್ಯವಾದ ತಿಳಿಸಿದ ಕಿಚ್ಚ

Public TV
1 Min Read
sudeep

ಬೆಂಗಳೂರು: ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಬಡವರು, ನಿರಾಶ್ರಿತರು ಊಟವಿಲ್ಲದೇ ಕಂಗಾಲಾಗಿದ್ದರು. ಈ ವೇಳೆ ನಟ ಸುದೀಪ್ ಅವರ ಅಭಿಮಾನಿಗಳು ಅವರಿಗೆ ಆಹಾರವನ್ನು ವಿತರಣೆ ಮಾಡಿದ್ದರು. ಇದೀಗ ಅಭಿಮಾನಿಗಳ ಉತ್ತಮ ಕೆಲಸಕ್ಕೆ ಕಿಚ್ಚ ಮೆಚ್ಚುಗೆ ಸೂಚಿಸಿದ್ದಾರೆ.

ನಟ ಸುದೀಪ್ ಟ್ವಿಟ್ಟರಿನಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

“ಈ ವಿಡಿಯೋ ಮಾಡುವ ಉದ್ದೇಶವೇ ಧನ್ಯವಾದ ಹೇಳಲು. ನಾನು ಟ್ವೀಟ್‍ಗಳನ್ನು ನೋಡುತ್ತಿರುತ್ತೇನೆ, ಪ್ರತಿ ಊರಿನಲ್ಲೂ ನನ್ನ ಹೆಸರಿನಲ್ಲಿ ಮಾಡಿರುವ ಸಂಸ್ಥೆಯಿಂದ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಸ್ನೇಹಿತರೇ. ಯಾರ‍್ಯಾರಿಗೆ ಆಹಾರದ ಅವಶ್ಯಕತೆ ಇದೆ ಅವರಿಗೆಲ್ಲಾ ನಿಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದೀರಿ. ನನ್ನ ಕೈಯಿಂದ ಏನಾದರೂ ಮಾಡಬೇಕಾದರೆ ಹೇಳಿ ಅದನ್ನೂ ಮಾಡುತ್ತೇವೆ” ಎಂದು ಮನವಿ ಮಾಡಿಕೊಂಡರು.

ಕೆಲವರಿಗೆ ಪ್ರತ್ಯೇಕವಾಗಿ ನನ್ನ ಖುಷಿಯನ್ನು ವ್ಯಕ್ತಪಡಿಸದೆ ಇರಬಹುದು. ಆದರೆ ತುಂಬಾ ಜನರು ಇರುವುದರಿಂದ ಈ ವಿಡಿಯೋ ಮಾಡಿದ್ದೇವೆ. ನಿಜಕ್ಕೂ ನೀವು ಮಾಡಿರುವ ಕಾರ್ಯದಿಂದ ನನಗೆ ಹೆಮ್ಮೆಯಾಗುತ್ತಿದೆ. ನಿಜಕ್ಕೂ ನನಗೆ ತುಂಬಾ ಖುಷಿಯಾಗುತ್ತಿದೆ. ನಾವು ಮಾತ್ರವಲ್ಲ ಪ್ರತಿ ಕಲಾವಿದರ ಸಂಘಗಳು ಕೂಡ ಮಾಡುತ್ತಿದ್ದಾರೆ. ಅವರವರ ಅಭಿಮಾನಿಗಳು, ಇತರೆ ಸಂಸ್ಥೆಗಳು ಎಲ್ಲರೂ ಮಾಡುತ್ತಿದ್ದಾರೆ ಎಂದರು.

ಎಲ್ಲರೂ ಕೈ ಜೋಡಿಸಿ ಒಟ್ಟಿಗೆ ಸೇರಿ ಮಾಡಿದರೆ ಮಾತ್ರ ಇದು ಸಾಧ್ಯ. ಸರ್ಕಾರ ಹಾಕಿರುವ ನಿಯಮಗಳನ್ನು ಪಾಲಿಸೋಣ. ಮತ್ತೊಮ್ಮೆ ಹೇಳುತ್ತಿದ್ದೇನೆ ನೀವು ಮಾಡಿದ ಸಹಾಯದಿಂದ ನನಗೆ ತುಂಬಾ ಸಂತಸವಾಗುತ್ತಿದೆ ಎಂದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *