ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಅವರು ತಮ್ಮ ಪತ್ನಿ ಪ್ರಿಯಾ ಅವರಿಗೆ ಟ್ವೀಟ್ ಮಾಡುವ ಮಾಡಿ ಅಭಿನಂದಿಸಿದ್ದಾರೆ.
ಸುದೀಪ್ ಅಭಿಮಾನಿಗಳು ತಮ್ಮ ಟ್ಟಿಟ್ಟರಿನಲ್ಲಿ, “ನಮ್ಮ ಐಡಲ್ ಗೊಂಬೆ, ಕನ್ನಡ ಇಂಡಸ್ಟ್ರಿಯ ಬಾದ್‍ಷಾ ಅವರ ಪತ್ನಿ, ನಮ್ಮ ನೆಚ್ಚಿನ ಅತ್ತಿಗೆ ಪ್ರಿಯಾ ಅವರು ಟ್ಟಿಟ್ಟರಿನಲ್ಲಿ 1 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ” ಎನ್ನುವ ಸಾಲನ್ನು ಬರೆದು ಪ್ರಿಯಾ ಸುದೀಪ್ ಮತ್ತು ಅವರ ಫಾಲೋವರ್ಸ್ ಸಂಖ್ಯೆಯನ್ನು ತೋರಿಸುವ ಸ್ಕ್ರೀನ್ ಶಾಟ್ ಅನ್ನು ಕೊಲಾಜ್ ಮಾಡಿ ಅಭಿನಂದನೆ ತಿಳಿಸಿದ್ದರು.
ಅಭಿಮಾನಿಗಳು ಮಾಡಿದ್ದ ಟ್ವೀಟ್‍ನ್ನು ಕಿಚ್ಚ ಸುದೀಪ್ ಅವರು ರೀಟ್ವೀಟ್ ಮಾಡಿ, Awesome ಎಂದು ಬರೆದು, ನಗುವ ಮತ್ತು ಜ್ಯೂಸ್ ಗ್ಲಾಸ್ ಇರುವ ಎಮೋಜಿ ಹಾಕಿ ಚಿಯರ್ಸ್ ಮಾಡಿದ್ದಾರೆ.
ನಟ ಸುದೀಪ್ ಅವರು ಪತ್ನಿಗೆ ಟ್ವೀಟ್ ಮಾಡುವ ಮೂಲಕ ಅಭಿನಂದನೆ ತಿಳಿಸಿದ ತಕ್ಷಣ ಅಭಿಮಾನಿಗಳು ರೀಟ್ವೀಟ್ ಮಾಡುವ ಮೂಲಕ ಶುಭಾಶಯವನ್ನು ತಿಳಿಸಿದ್ದಾರೆ. ಸುದೀಪ್ ಮಾಡಿರುವ ಟ್ವೀಟ್ 2 ಸಾವಿರಕ್ಕಿಂತೂ ಅಧಿಕ ಲೈಕ್ಸ್ ಕಂಡಿದೆ.
ಸದ್ಯಕ್ಕೆ ಸುದೀಪ್ ಅವರು, ‘ಪೈಲ್ವಾನ್’ ಮತ್ತು ‘ಕೋಟಿಗೊಬ್ಬ 3’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
Awesome @iampriya06 ????????????????????????????????????????????…..
Cheerssssssss piaaa ???? https://t.co/C43RQGlbip
— Kichcha Sudeepa (@KicchaSudeep) December 18, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv