ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ನಿನ್ನೆ (ನ.3) ಸಂಚಿಕೆಯಲ್ಲಿ ವಿನಯ್ ವರ್ತನೆಗೆ, ನಮ್ರತಾ ಚಮಚಾಗಿರಿಗೆ ಸುದೀಪ್ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಡ್ರೋನ್ ಪ್ರತಾಪ್ (Drone Prathap) ಹೆಣ್ಣು ಮಕ್ಕಳನ್ನ ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ ಎಂದು ಹೀಯಾಳಿಸಿದ ವಿನಯ್, ಇಶಾನಿ, ತುಕಾಲಿಗೆ ಸುದೀಪ್ ಚಳಿ ಬಿಡಿಸಿದ್ದಾರೆ. ಇದನ್ನೂ ಓದಿ:ವಿನಯ್ ವಿರುದ್ಧ ಧ್ವನಿ ಎತ್ತದ ನಮ್ರತಾಗೆ ಕಿಚ್ಚನ ಖಡಕ್ ಕ್ಲಾಸ್
Advertisement
ಈ ಹಿಂದಿನ ಸೀಸನ್ನಿಂದಲೂ ಯಾವುದೇ ಸ್ಪರ್ಧಿಗಳ ಕ್ಯಾರೆಕ್ಟರ್ಗೆ ಧಕ್ಕೆ ಬರುತ್ತಿದೆ ಅಂದರೆ ನಟ ಸುದೀಪ್ ಧ್ವನಿಯೆತ್ತಿದ್ದರು. ಅದರಂತೆಯೇ ಈ ಬಾರಿ ಕೂಡ ವಾರಾಂತ್ಯದಲ್ಲಿ ಸ್ಪರ್ಧಿಗಳ ತಪ್ಪನ್ನ ತೋರಿಸಿ ಸುದೀಪ್ ತಿದ್ದಿದ್ದಾರೆ. ಇದೀಗ ಡ್ರೋನ್ ಪ್ರತಾಪ್ ಮಹಿಳೆಯರನ್ನ ಕೆಟ್ಟ ದೃಷ್ಟಿಯಿಂದ ನೋಡ್ತಾರೆ ಎಂದು ವಿನಯ್ (Vinay) ಚುಚ್ಚಿದ್ದರು. ಅವರ ಆರೋಪಕ್ಕೆ ಇಶಾನಿ (Eshani) ಕೂಡ ಸೊಪ್ಪು ಹಾಕಿದ್ದರು. ಇದನ್ನೇ ಇಂದಿನ ಪಂಚಾಯಿತಿಯಲ್ಲಿ ಸುದೀಪ್ ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಪ್ರತಾಪ್ ಅವರು ಮನೆ ಹೆಣ್ಣು ಮಕ್ಕಳನ್ನ ನೋಡುವ ದೃಷ್ಟಿ ಸರಿಯಿಲ್ಲ ಹೌದಾ ಎಂದು ಕಿಚ್ಚ ಸ್ಪರ್ಧಿಗಳಿಗೆ ಕೇಳಿದ್ದಾರೆ. ಇಶಾನಿ, ತುಕಾಲಿ ಸಂತೂ, ವಿನಯ್ ಮಾತ್ರ ಯೆಸ್ ಎಂದು ಹೇಳಿದ್ದಾರೆ. ಕಿಚ್ಚನ ಪ್ರಶ್ನೆಗೆ ಇಶಾನಿ, ಅವರು ಸರಿಯಾಗಿ ಮಾತನಾಡಲ್ಲ ಎಂದು ಅನಿಸುತ್ತೇ ಎಂದಿದ್ದಾರೆ. ನನ್ನ ಪ್ರಶ್ನೆಗೂ ನಿಮ್ಮ ಉತ್ತರಕ್ಕೂ ಸಂಬಂಧವಿಲ್ಲ ಎಂದು ಇಶಾನಿ ಕಿಚ್ಚ ಕೌಂಟರ್ ಕೊಟ್ಟಿದ್ದಾರೆ. ಬಳಿಕ ತುಕಾಲಿ ಸಂತೂ ಪ್ರತಿಕ್ರಿಯಿಸಿ, ಡ್ರೋನ್ ಒಳಗೆ ರೊಮ್ಯಾಂಟಿಕ್ ಹೀರೋ ಇದ್ದಾನೆ ಅನಿಸುತ್ತೆ ಎಂದಿದ್ದಾರೆ. ಅದಕ್ಕೆ ನಾನು ರೊಮ್ಯಾಂಟಿಕ್ ಬಗ್ಗೆ ಮಾತನಾಡೇ ಇಲ್ಲ ಎಂದಿದ್ದಾರೆ ಕಿಚ್ಚ. ಬಳಿಕ ವಿನಯ್ ರಿಯಾಕ್ಟ್ ಮಾಡಿ, ಡ್ರೋನ್ ಏನು ಯೋಚನೆ ಮಾಡಿ ಎಲ್ಲಿ ನೋಡ್ತಾರೋ ಗೊತ್ತಿಲ್ಲ ಎಂದು ಅವರ ನೋಟದ ಬಗ್ಗೆ ಹೇಳಿದ್ದಾರೆ.
Advertisement
ಯೂ ಆರ್ ರಾಂಗ್, ಯಾರೆನ್ನೇ ಕೆಟ್ಟ ದೃಷ್ಟಿ ನೋಡಿದ್ದೆಯಾದರೆ ಮತ್ತೆ ಅವರ ಸ್ಪರ್ಶ ಮಾಡಿದ್ದೆ ಆದರೆ, ಆ ಸ್ಪರ್ಶದಲ್ಲಿ ತಿಳಿಯುತ್ತೆ ಇದು ಸರಿಯಿಲ್ಲ ಅಂತ ಗೊತ್ತಾಗುತ್ತೆ. ಅದನ್ನ ನೀವೂ ನಂಬಬೇಕೆ ವಿನಹಃ ಯಾರದೋ ಪ್ರೇರಣೆಯಿಂದ ಅಲ್ಲ ಎಂದು ಪ್ರತಾಪ್ ಪರ ನಿಂತು ವಿನಯ್, ತುಕಾಲಿ, ಇಶಾನಿಗೆ ಸುದೀಪ್ ಎಚ್ಚರಿಕೆ ನೀಡಿದ್ದಾರೆ. ಈ ಸೀಸನ್ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ಮಾತು, ವರ್ತನೆಗೆ ಸುದೀಪ್ (Sudeep) ಖಡಕ್ ಆ್ಯಕ್ಷನ್ ಮೂಲಕ ಕ್ಲಾಸ್ ತೆಗೆದುಕೊಂಡಿದ್ದಾರೆ. ದೊಡ್ಮನೆಗೆ ಕಾಲಿಟ್ಟ ದಿನದಿಂದ ಪ್ರತಾಪ್ಗೆ ಟಾರ್ಗೆಟ್ ಮಾಡ್ತಿರೋ ಕೆಲ ಸ್ಪರ್ಧಿಗಳು, ಸುದೀಪ್ ಹೇಳಿರೋ ಕ್ಲಾಸ್ನಿಂದ ಬದಲಾಗುತ್ತಾರಾ ಕಾದುನೋಡಬೇಕಿದೆ