ಕಿಚ್ಚ ಸುದೀಪ್ (Kichcha Sudeep) ಅವರಿಗೆ ಈ ವರ್ಷದ ಹುಟ್ಟುಹಬ್ಬ ಸ್ಪೆಷಲ್. ಸೆಪ್ಟೆಂಬರ್ 2ರಂದು 50ನೇ ವಸಂತಕ್ಕೆ ಲಗ್ಗೆ ಇಡ್ತಿದ್ದಾರೆ. ಈ ಬಾರಿ ಅಭಿಮಾನಿಗಳ ಜೊತೆ ಬರ್ತ್‌ಡೇ(Birthday) ಅದ್ದೂರಿಯಾಗಿ ಸೆಲೆಬ್ರೇಶನ್ ಮಾಡ್ತಿದ್ದಾರೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಫ್ಯಾನ್ಸ್ ಜೊತೆ ಕಿಚ್ಚನ ಹುಟ್ಟುಹಬ್ಬ ನಡೆಯಲಿದೆ. ಹೀಗಿರುವಾಗ ಸುದೀಪ್ ಬರ್ತ್‌ಡೇಗೆ ಪತ್ನಿ (Priya Sudeep) ಸರ್ಪ್ರೈಸ್ ಗಿಫ್ಟ್ ಕೊಡುವ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದಾರೆ.
ಇಂದು ನಿಮ್ಮ ಪ್ರೀತಿಯ ಕಿಚ್ಚ ಸುದೀಪರ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಲು ಕಾತುರದಿಂದ ಕಾಯುತ್ತಿದ್ದೇನೆ. ಇಂದಿನ ಕಾರ್ಯಕ್ರಮದಲ್ಲಿ ನನ್ನ ಕಡೆಯಿಂದ ನಿಮ್ಮೆಲ್ಲರ ಪರವಾಗಿ ಕಿಚ್ಚನಿಗೆ ಒಂದು ವಿಶೇಷವಾದ ಅದ್ದೂರಿ ಅಚ್ಚರಿ ಕಾದಿದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅಚ್ಚರಿಯನ್ನು ಆನಂದಿಸಿ, ಕಿಚ್ಚನನ್ನು ಹರಸಿ ಎಂದು ಪ್ರಿಯಾ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ಸ್ಪಂದನಾ ಅಗಲಿಕೆಯ ಬಳಿಕ ‘ಡಿಕೆಡಿ’ಯಲ್ಲಿ ವಿಜಯ ರಾಘವೇಂದ್ರ
ಇಂದು ನಿಮ್ಮ ಪ್ರೀತಿಯ ಕಿಚ್ಚ ಸುದೀಪರ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಲು ಕಾತುರದಿಂದ ಕಾಯುತ್ತಿದ್ದೇನೆ. ಇಂದಿನ ಕಾರ್ಯಕ್ರಮದಲ್ಲಿ ನನ್ನ ಕಡೆಯಿಂದ ನಿಮ್ಮೆಲ್ಲರ ಪರವಾಗಿ ಕಿಚ್ಚನಿಗೆ ಒಂದು ವಿಶೇಷವಾದ ಅಧ್ದೂರಿ ಅಚ್ಚರಿ ಕಾದಿದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅಚ್ಚರಿಯನ್ನು ಆನಂದಿಸಿ,ಕಿಚ್ಚನನ್ನು ಹರಸಿ.#Nandilinkground
— Priya Sudeep/ಪ್ರಿಯ (@iampriya06) September 1, 2023
ಸುದೀಪ್ ಅವರು ವಿಕ್ರಾಂತ್ ರೋಣ (Vikrant Rona) ಸಿನಿಮಾ ಬಳಿಕ ತಮ್ಮ K 46ನೇ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡರು. ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಆದರೆ ಟೈಟಲ್ ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಸದ್ಯಕ್ಕೆ ಇದನ್ನು K 46 ಎಂದು ಕರೆಯಲಾಗುತ್ತಿದೆ. ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾದ ಟೈಟಲ್ ಅನಾವರಣ ಆಗಲಿದೆ. ಅದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.
ಇದರ ಜೊತೆ ‘ಕಬ್ಜ’ ನಿರ್ದೇಶಕ ಆರ್.ಚಂದ್ರು ಜೊತೆ ಸುದೀಪ್ ಹೊಸ ಸಿನಿಮಾ ಮಾಡಲಿದ್ದಾರೆ. ರಾಜಮೌಳಿ ತಂದೆ ಕಿಚ್ಚನ ಸಿನಿಮಾಗೆ ಕಥೆ ಬರೆಯುತ್ತಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಇದರ ಜೊತೆಗೆ ಹೊಸ ಸಿನಿಮಾಗಳ ಬಗ್ಗೆ ನಾಳೆ(ಸೆ.2) ಅಧಿಕೃತ ಅಪ್‌ಡೇಟ್ ಸಿಗಲಿದೆ.